Connect with us

KARNATAKA

ಜನರ ನಿದ್ದೆ ಕೆಡಿಸಿದ ಕಿಲ್ಲರ್ ‘ಡೆಂಗ್ಯೂ., ಉಡುಪಿ ಮೂಲದ ವಿದ್ಯಾರ್ಥಿನಿ ಮೃತ್ಯು..!

ಉಡುಪಿ : ಕರ್ನಾಟಕದಲ್ಲಿ ಡೆಂಗ್ಯೂ ಆರ್ಭಟ ನಡೆಸುತ್ತಿದೆ. ದಿನೇ ದಿನೇ ಈ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಈಗಾಗಲೇ ರಾಜ್ಯಲ್ಲಿ ಡೆಂಗ್ಯೂಗೆ 7 ಮಧಿ ಮೃತಪಟ್ಟಿದ್ದು ಇದೀಗ ಉಡುಪಿ ಮೂಲದ ವಿದ್ಯಾರ್ಥಿನಿ ಹುಬ್ಬಳ್ಳಿಯಲ್ಲಿ ಸಾವನ್ನಪ್ಪಿದ್ದಾಳೆ.

ನಗರದ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿನಿ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.17 ವರ್ಷದ ಆಕೆ ತೀವ್ರ ಜ್ವರದಿಂದ ಬಳಲುತ್ತಿದ್ದು, ಚಿಂತಾಜನಕ ಸ್ಥಿತಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಇದೀಗ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಳೆ. .
ಇನ್ನು ರಾಜ್ಯದಲ್ಲಿ ಡೆಂಗ್ಯೂ ಆರ್ಭಟ ಜೋರಾಗಿದ್ದು ದಿನೇ ದಿನೇ ಈ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಶುಕ್ರವಾರ ಒಂದೇ ದಿನ 2503 ಜನರನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಿದಾಗ 437 ಜನರಲ್ಲಿ ಮಹಾಮಾರಿ ಕಾಣಿಸಿಕೊಂಡಿದೆ. ಅಲ್ಲದೆ 91 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರದ ಅಂಕಿ ಅಂಶಗಳ ನಂತರ ರಾಜ್ಯದಲ್ಲಿ ಒಟ್ಟು ಸಕ್ರಿಯ ಡೆಂಗಿ ಕೇಸ್‌ಗಳ ಸಂಖ್ಯೆ 8659ಕ್ಕೇ ಏರಿಕೆ ಆಗಿವೆ.

ಕರ್ನಾಟಕದಲ್ಲಿ ಒಟ್ಟಾರೆ ಈ ವರೆಗೆ 63,741 ಜನರನ್ನು ಡೆಂಗಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 8659 ಜನರಲ್ಲಿ ಡೆಂಗಿ ಪಾಸಿಟಿವ್‌ ವರದಿ ಬಂದಿದೆ. ಇನ್ನು 388 ಜನರು ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಹಾಮಾರಿ ಈಗಾಗಲೇ 7 ಜನರನ್ನು ಬಲಿ ಪಡೆದಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *