Connect with us

    LATEST NEWS

    ಓರ್ವ ಬಾಲಕನನ್ನ ಬಲಿ ಪಡೆದ ನಿಪಾ ವೈರಸ್ – ಕಟ್ಟೆಚ್ಚರದಲ್ಲಿ ಕೇರಳ

    ಕೋಯಿಕ್ಕೋಡ್ ಜುಲೈ 21: ಕೇರಳದಲ್ಲಿ ನಿಫಾ ವೈರಲ್ ಓರ್ವ ಬಾಲಕನನ್ನು ಬಲಿ ಪಡೆದುಕೊಂಡದೆ. ಮಲ್ಲಪ್ಪುರಂ ಜಿಲ್ಲೆಯಲ್ಲಿ ನಿಪಾ ವೈರಸ್‌ ತಗುಲಿ 14 ವರ್ಷದ ಬಾಲಕ ಮೃತಪಟ್ಟಿದ್ದಾನೆ.


    ಈ ಬಗ್ಗೆ ಮಾಹಿತಿ ನೀಡಿರುವ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಲಪ್ಪುರಂ ಜಿಲ್ಲೆಯ ಪಾಂಡಿಕ್ಕಾಡ್‌ ಮೂಲದ ಬಾಲಕನಲ್ಲಿ ನಿಪಾ ಸೋಂಕಿರುವುದನ್ನು ಪುಣೆಯಲ್ಲಿರುವ ರಾಷ್ಟ್ರೀಯ ವೈರಾಣು ಸಂಸ್ಥೆಯು (ಎನ್‌ಐವಿ) ಶನಿವಾರ ದೃಢೀಕರಿಸಿತ್ತು.

    ಬಾಲಕನಿಗೆ ವೆಂಟಿಲೇಟರ್ ಸಹಾಯದಿಂದ ಚಿಕಿತ್ಸೆ ಒದಗಿಸಲಾಗಿತ್ತು. ಆದರೆ ಇಂದು ಬೆಳಿಗ್ಗೆ 10.50ರ ವೇಳೆಗೆ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಸಚಿವೆ ತಿಳಿಸಿದ್ದಾರೆ. ಅಂತರರಾಷ್ಟ್ರೀಯ ಮಟ್ಟದ ಮಾನದಂಡಗಳನ್ನು ಪಾಲಿಸಿ ಬಾಲಕನ ಅಂತ್ಯಕ್ರಿಯೆ ನೇರವೇರಲಿದೆ’ ಎಂದು ಅವರು ತಿಳಿಸಿದ್ದಾರೆ. ಕೇರಳದ ಆರೋಗ್ಯ ಇಲಾಖೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದು, ಬಾಲಕನ ಸಂಪರ್ಕ ಹೊಂದಿದ್ದ ಜನರ ಮಾಹಿತಿ ಕಲೆ ಹಾಕಿ, ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಿದೆ. ಅವರ ಮೇಲೆ ತೀವ್ರ ನಿಗಾ ಇರಿಸಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *