KARNATAKA
ಮಡಿಕೇರಿ : ಕೊಡಗಿನಲ್ಲಿ ಎಗ್ಗಿಲ್ಲದ ಕೇರಳ ಲಾಟರಿ ಹಾವಳಿ, ಬಹುಮಾನದ ಆಸೆಗೆ ಬಡ ಜನತೆ ದಿವಾಳಿ..!
ಕರ್ನಾಟಕದಲ್ಲಿ ಲಾಟರಿ ಮಾರಾಟ ನಿಷೇಧವಾಗಿ 20 ವರ್ಷಗಳೇ ಕಳೆದಿದೆ. ಆದ್ರೆ ಪಕ್ಕದ ಕೇರಳ ಲಾಟರಿ ಹಾವಳಿ ಕರ್ನಾಟಕದಲ್ಲಿ ಮಿತಿ ಮೀರಿದೆ. ಅದರಲ್ಲೂ ಕೇರಳಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ.
ಮಡಿಕೇರಿ : ಕರ್ನಾಟಕದಲ್ಲಿ ಲಾಟರಿ ಮಾರಾಟ ನಿಷೇಧವಾಗಿ 20 ವರ್ಷಗಳೇ ಕಳೆದಿದೆ. ಆದ್ರೆ ಪಕ್ಕದ ಕೇರಳ ಲಾಟರಿ ಹಾವಳಿ ಕರ್ನಾಟಕದಲ್ಲಿ ಮಿತಿ ಮೀರಿದೆ. ಅದರಲ್ಲೂ ಕೇರಳಕ್ಕೆ ಹೊಂದಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ.
ಕೋಡಗಿನ ಪೊಲೀಸರು ಕೇರಳ ರಾಜ್ಯದ ಲಾಟರಿ ಮಾರಾಟದ ಬಗ್ಗೆ ಕಟ್ಟೆಚ್ಚರದಲ್ಲಿದ್ದರೂ ಅಕ್ರಮ ಲಾಟರಿ ಮಾರಾಟ ತೆರೆಮರೆಯಲ್ಲಿ ಮುಂದುವರಿದಿದೆ. ಕೇರಳ ಲಾಟರಿ ಪಡೆದವರಲ್ಲಿಕೆಲವರಿಗೆ ಬಹುಮಾನಗಳು ಬಂದಿರುವುದರಿಂದ ಇದರ ಆಮೀಷಕ್ಕೆ ಒಳಗಾಗಿ ಲಾಟರಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೇರಳದಿಂದ ಭಾರಿ ಪ್ರಮಾಣ ದಲ್ಲಿ ಲಾಟರಿ ಟಿಕೆಟ್ ತಂದು ಗಡಿ ಭಾಗದ ಕೆಲಸಗಾರರು, ಕಾರ್ಮಿಕರನ್ನು ಗುರಿಯಾಗಿಟ್ಟುಕೊಂಡು ಮಾರಾಟ ನಡೆಯುತ್ತಿದ್ದು ಕಳೆದ ಒಂದೂವರೆ ವರ್ಷದಲ್ಲೇ ಕೊಡಗಿನಲ್ಲಿ ಇಂತಹ 49 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಕರ್ನಾಟಕದಲ್ಲಿ ಲಾಟರಿ ನಿಷೇಧದ ನಂತರ ಲಾಟರಿ ನಿಗ್ರಹದಳವನ್ನೂ ರಚಿಸಿ ಪ್ರತ್ಯೇಕ ಪೊಲೀಸ್ ಉಸ್ತುವಾರಿ ಇತ್ತು. ಕಾಲ ಕ್ರಮೇಣ ಈ ಘಟಕ ರದ್ದು ಮಾಡಲಾಗಿದ್ದು ಇದರ ನಿಗಾ ವಹಿಸುವ ಕಾರ್ಯ ಆಯಾಯ ಸ್ಥಳಿಯ ಪೊಲೀಸ್ ಠಾಣೆಗಳಿಗೆ ವಹಿಸಲಾಗಿದೆ ಆದ್ರೂ ಮಿತಿ ಮೀರಿದ ಕೆಲಸ ಕಾರ್ಯಗಳ ಒತ್ತಡಗಳಿಂದ ಲಾಟರಿ ದಂಧೆಯ ಮೇಲೆ ಕರ್ನಾಟಕ ಪೊಲಿಸರಿಗೆ ನಿಗಾ ಇಡಲು ಅಸಾಧ್ಯವಾಗಿದೆ. ಅದಗ್ಯೂ ಕೇರಳಕ್ಕೆ ಹೊಂದಿಕೊಂಡ ಕೊಡಗು,ದಕ್ಷಿಣ ಕನ್ನಡ, ಚಾಮರಾಜನಗರ, ಮೈಸೂರು ಜಿಲ್ಲೆಗಳಲ್ಲಿ ಪೊಲೀಸರು ತಪಾಸಣೆ ನಡೆಸಿ ಅಲ್ಲೊಂದು ಇಲ್ಲೊಂದು ಕ್ರಮ ಕೈಗೊಳ್ಳುತ್ತಿದ್ದಾರೆ. ಕೊಡಗಿನಲ್ಲೂ ಕೇರಳದ ಅಕ್ರಮ ಲಾಟರಿ ಮಾರಾಟ ದಂಧೆಯ ಮೇಲೆ ನಿಗಾ ಇಡಲಾಗಿದ್ದು ಕೊಡಗು ಜಿಲ್ಲೆಯಲ್ಲಿ ಅನಧಿಕೃತ ಲಾಟರಿ ಹಾಗೂ ಮಟ್ಕಾ ಹಾವಳಿಯನ್ನು ನಿಯಮಾನುಸಾರ ನಿಯಂತ್ರಿಸುವ ಕುರಿತು ಕಟ್ಟುನಿಟ್ಟಿನ ಸೂಚನೆಗಳನ್ನು ಜಿಲ್ಲಾಡಳಿತ ನೀಡಿದೆ. ಆದರೆ ರಾಜ್ಯದ ಮಧ್ಯಮ ಮತ್ತು ಬಡ ಜನತೆಯನ್ನು ಬಂಪರ್ ಬಹುಮಾನದ ಆಮಿಷ ತೋರಿಸಿ ಲಾಟರಿ ಮಾರಾಟ ಮಾಡುವ ಈ ಅನಿಯಂತ್ರಿತ ದಂಧೆಗೆ ಸರ್ಕಾರ ಮಟ್ಟದಲ್ಲೇ ಶಾಶ್ವತ ಕಡಿವಾಣ ಹಾಕುವ ಅಗತ್ಯವಿದೆ.