LATEST NEWS
ಕೋವಿಡ್ ಸೋಂಕಿತರ ಮನೆಗಳು ಇನ್ನು ಮುಂದೆ ಸೀಲ್ ಡೌನ್: ಜಿಲ್ಲಾಧಿಕಾರಿ ಜಿ. ಜಗದೀಶ್

ಉಡುಪಿ, ಮೇ 21: ಕೋವಿಡ್ ಸೋಂಕಿತರ ಮನೆಗಳು ಇನ್ನುಮುಂದೆ ಸೀಲ್ ಡೌನ್. ಹೋಂ ಐಸೋಲೇಷನ್ ಇರುವ ಮನೆಗಳಿಗೆ ಪಟ್ಟಿ ಅಳವಡಿಕೆ ಮಾಡಲಾಗಿದೆ.
ಪಾಸಿಟಿವ್ ಬಂದವರನ್ನು ಸುಲಭವಾಗಿ ಗುರುತಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಸೋಂಕಿತರೆಲ್ಲರ ಚಲನವನಗಳ ಮೇಲೆ ನಿಗಾ ಇರಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಜಿ. ಜಗದೀಶ ಅವರಿಂದಲೇ ಸೀಲ್ ಡೌನ್ ಪ್ರಕ್ರಿಯೆ ಆರಂಭ ಮಾಡಲಾಗಿದೆ.

ಬ್ರಹ್ಮಾವರ ತಾಲೂಕಿನ ಚಾಂತಾರು ಗ್ರಾಮ ವ್ಯಾಪ್ತಿಯಲ್ಲಿ ಸೀಲ್ ಡೌನ್ ಮಾಡಲಾಗಿದ್ದು, ಮನೆಯ ಸುತ್ತ ಎಚ್ಚರಿಕೆ ಸೂಚಿಸುವ ಟೇಪ್ (ಪಟ್ಟಿ) ಕಟ್ಟಿ ಜಾಗೃತಿ ಮೂಡಿಸಲಾಗಿದೆ. ಜಿಲ್ಲಾಧಿಕಾರಿ ಸೋಂಕಿತರ ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದ್ದು, ಮನೆಯಲ್ಲಿಯೇ ಇದ್ದು, ಆರೋಗ್ಯದ ಬಗ್ಗೆ ನಿಗಾ ಇಡುವಂತೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಾದ್ಯಂತ ಕೋವಿಡ್ ಪಾಸಿಟಿವ್ ಬಂದವರ ಮನೆ ಸೀಲ್ ಡೌನ್ ಗೆ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಮೊದಲ ಅಲೆಯ ವೇಳೆ ಚಾಲ್ತಿಯಲ್ಲಿದ್ದ ಕ್ರಮ ಮತ್ತೆ ಜಾರಿಗೆ ತರಲಾಗಿದ್ದು, ಸೋಂಕಿತರ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ.