Connect with us

    KARNATAKA

    ಮೂಡನಂಬಿಕೆಯ ಪರಮಾವಧಿ, ಹಬ್ಬದ ದಿನ ಸತ್ತರೆ ಸ್ವರ್ಗ ಪ್ರಾಪ್ತಿಯ ಭ್ರಮೆಗೆ ನೇಣಿಗೆ ಕೊರಳೊಡ್ಡಿದ ಯುವಕ..!

    ಬೆಂಗಳೂರು : ಇದು ಮೂಡ ನಂಬಿಕೆ ಯ ಪರಮಾವಧಿಯಾಗಿದ್ದು ಹಬ್ಬದ ದಿನ ಸತ್ತರೆ ಸ್ವರ್ಘ ಪ್ರಾಪ್ತಿಯಾಗುತ್ತೆ ಅಂತ ಯುವಕನೊಬ್ಬ ನೇಣಿಗೆ ಶರಣಾಗಿದ್ದಾನೆ.

    ಹಬ್ಬದ ದಿನ ಸತ್ತರ ಸ್ವರ್ಗ ಪ್ರಾಪ್ತಿಯಾಗುತ್ತೆ ಎನ್ನುವ ಭ್ರಮೆಯಲ್ಲಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಭೂಸಂದ್ರದಲ್ಲಿ ನಡೆದಿದೆ. ಭೂಸಂದ್ರದ ಕೃಷ್ಣಮೂರ್ತಿ(38) ಮೃತ ದುರ್ದೈವಿ.  ದೀಪಾವಳಿ ಹಿನ್ನೆಲೆಯಲ್ಲಿ ಸ್ನೇಹಿತರ ಜೊತೆ ಹಬ್ಬದ ದಿನ ಸತ್ತರೆ ಸ್ವರ್ಗ ಪ್ರಾಪ್ತಿ ಬಗ್ಗೆ ಚರ್ಚೆ ನಡೆಸಿದ್ದಾನೆ. ಬಳಿಕ ನೇಣುಬಿಗಿದ್ದುಕೊಂಡು ಸಾವಿಗೆ ಶರಣಾಗಿದ್ದಾನೆ.

    ಮೃತ ಕೃಷ್ಣಮೂರ್ತಿ 22/11/2022ರಂದು ತನ್ನ ಪತ್ನಿಯನ್ನ ಕೊಂದು ಜೈಲು ಸೇರಿದ್ದ. ಎರಡು ವರ್ಷ ಜೈಲಿನಲ್ಲಿ ಇದ್ದು ಕಳೆದ 6 ತಿಂಗಳ ಹಿಂದೆ ಬಿಡುಗಡೆಯಾಗಿ ಆಚೆ ಬಂದಿದ್ದ. ಆದರೆ ತಲೆಯಲ್ಲಿ ಅದೇಗೆ ಯೋಚನೆ ಬಂತೋ ಏನೋ ನಿನ್ನೆ ಸ್ನೇಹಿತರೊಂದಿಗೆ ಹಬ್ಬ ದಿನ ಸತ್ತರೆ ಸ್ವರ್ಗ ಪ್ರಾಪ್ತಿ ಬಗ್ಗೆ ಚರ್ಚಿಸಿ ಬಳಿಕ ಸಾವಿಗೆ ಶರಣಾಗಿದ್ದಾನೆ. ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *