LATEST NEWS
ಮದುವೆ ಶೂಟ್‌ಗೆ ಬಂದ ವಿಡಿಯೋಗ್ರಾಫರ್ ಜತೆ ವರನ ತಂಗಿ ಪರಾರಿ..!

ಪಾಟ್ನಾ : ಮದುವೆ ಸಮಾರಂಭದ ಶೂಟ್‌ಗೆ ಬಂದಿದ್ದ ವಿಡಿಯೋಗ್ರಾಫರ್ ಜೊತೆ ವರನ ಸಹೋದರಿಯೊಂದಿಗೆ ಓಡಿ ಹೋದ ಘಟನೆ ಬಿಹಾರದ ಮುಜಾಫರ್‌ಪುರದಲ್ಲಿ ನಡೆದಿದೆ.
ಅಹಿಯಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಚಂದವಾರ ಘಾಟ್ ದಾಮೋದರಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಬಾಲಕಿ ಕುಟುಂಬ ಪೊಲೀಸರ ಮೊರೆ ಹೋಗಿದೆ.

ಮದುವೆ ಸಮಾರಂಭವೇನೂ ಅದ್ಧೂರಿಯಾಗಿಯೇ ನೆರವೇರಿದೆ. ಮದುವೆ ದೃಶ್ಯ ಸೆರೆ ಹಿಡಿಯಲು ಬಂದಿದ್ದ ವೀಡಿಯೊಗ್ರಾಫರ್, ವರನ ಅಪ್ರಾಪ್ತ ತಂಗಿಯ ಜತೆ ಮಾತಾಡಿದ್ದಾನೆ. ಇಬ್ಬರ ನಡುವೆ ಸಲುಗೆ ಬೆಳೆದಿದೆ. ಇತ್ತ ಮದುವೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ವೀಡಿಯೋಗ್ರಾಫರ್ ಜತೆ ವರನ ತಂಗಿ ಓಡಿಹೋಗಿದ್ದಾಳೆ.
ವಿವಾಹ ಮುಗಿಯುತ್ತಿದ್ದಂತೆ ವರನ ಸಹೋದರಿ ಎಲ್ಲೂ ಕಾಣದೇ ಇರುವ ಕಾರಣ ಗಾಬರಿಗೊಂಡ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ವಿಡಿಯೋಗ್ರಾಫರ್ ಕೂಡ ನಾಪತ್ತೆಯಾಗಿರುವುದು ಗೊತ್ತಾಗಿದೆ. ಹೆಚ್ಚಿನ ತನಿಖೆ ನಡೆಸಿದಾಗ ವೀಡಿಯೊಗ್ರಾಫರ್ ಯುವಕ ವರನ ಅಪ್ರಾಪ್ತ ಸಹೋದರಿಯೊಂದಿಗೆ ಪರಾರಿಯಾಗಿರುವುದು ತಿಳಿದುಬಂದಿದೆ. ನಂತರ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.