DAKSHINA KANNADA
ಸುಳ್ಯ-ಕೊಡಗು ಗಡಿಭಾಗದಲ್ಲಿ ದೊಡ್ಡ ಶಬ್ದದೊಂದಿಗೆ ಕಂಪಿಸಿದ ಭೂಮಿ

ಸುಳ್ಯ, ಜುಲೈ10: ಸುಳ್ಯ, ಕೊಡಗು ಗಡಿಭಾಗದಲ್ಲಿ ಜುಲೈ10ರ ಭಾನುವಾರ ಭೂಕಂಪನದ ಅನುಭವವಾಗಿದ್ದು, ಇದು ಎಂಟನೇ ಭಾರಿ ಭೂಮಿ ಕಂಪಿಸುತ್ತಿರುವುದಾಗಿದೆ.
ಸುಳ್ಯ, ಮರ್ಕಂಜ, ಎಲಿಮಲೆ, ಅರಂತೋಡು, ಸಂಪಾಜೆ, ಪೆರಾಜೆ ಮುಂತಾದೆಡೆ ಭೂ ಕಂಪನದ ಅನುಭವವಾಗಿದೆ. ಮುಂಜಾನೆ 6.24ರ ವೇಳೆಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ. ಮಲಗಿದ್ದ ವೇಳೆ ಭೂಮಿ ಅಲುಗಾಡಿದೆ ಎಂದು ಜನ ತಿಳಿಸಿದ್ದಾರೆ.

ಕಲ್ಲುಗುಂಡಿ ಮಠದ ಮೂಲೆ ಬಳಿಯ ನಿವಾಸಿ ತಾಜುದ್ದೀನ್ ಟರ್ಲಿ ಅವರ ಮನೆ ಹಿಂಬದಿ ಭೂಮಿ ಭೂಕಂಪನದ ವೇಳೆ ಬಿರುಕು ಬಿಟ್ಟಿದೆ. ಅಲ್ಲದೆ ಹಿಂಬದಿಯ ಬರೆ ಕುಸಿದು ಬಿದ್ದಿದೆ. ಇದರಿಂದ ಮನೆ ಮೇಲೆ ಬರೆ ಕುಸಿಯುವ ಆತಂಕ ಎದುರಾಗಿದೆ ಎನ್ನಲಾಗಿದೆ. ಇಂದು ಸಂಭವಿಸಿದ ಭೂಕಂಪದ ಕೇಂದ್ರ ಅರಂತೋಡು ಎಂಬುದಾಗಿ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಸಂಸ್ಥೆ ತಿಳಿಸಿದೆ.