Connect with us

    LATEST NEWS

    ಕೇರಳದ ಜೀವಂತ ರಕ್ತಸಾಕ್ಷಿಯಾಗಿದ್ದ ಕಾಮ್ರೇಡ್ ಪುಷ್ಪನ್ ಗೆ DYFI ಕರ್ನಾಟಕ ರಾಜ್ಯ ಸಮಿತಿಯಿಂದ ಅಂತಿಮ ಗೌರವ

    ಮಂಗಳೂರು : ಸೆಪ್ಟೆಂಬರ್ 29 ರಂದು ಅಗಲಿದ  ಕೇರಳದ ಜೀವಂತ ರಕ್ತಸಾಕ್ಷಿಯಾಗಿದ್ದ ಕಾಂ ಪುಷ್ಪನ್ ಅವರಿಗೆ ಡಿವೈಎಫ್ಐ ‌ಕರ್ನಾಟಕ ರಾಜ್ಯ ಸಮಿತಿಯಿಂದ ಅಂತಿಮ ಗೌರವ ಸಲ್ಲಿಸಿತು.

    ಕೇರಳದ ಕೂತುಪರಂಬದಲ್ಲಿ ಗುಂಡಿನ ದಾಳಿಗೆ ಒಳಗಾಗಿ, ಬೆನ್ನು ಹುರಿ ಶಕ್ತಿ ಕಳೆದುಕೊಂಡು ಜೀವನಪೂರ್ತಿ ಅಂದರೆ ಮೂವತ್ತು ವರ್ಷಗಳ ಕಾಲ ಅಂಗವೈಕಲ್ಯದಿಂದ ಬದುಕಿದರೂ ಕೆಂಬಾವುಟದ ಸಿದ್ಧಾಂತವನ್ನೇ ಎತ್ತಿ ಹಿಡಿದವರು. ಅವರೊಬ್ಬ ಅಮರ ಸಂಗಾತಿ ಅವರ ಅಗಲಿಕೆಗೆ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿ ಭಾವಪೂರ್ಣ ‌ಶ್ರದ್ದಾಂಜಲಿಯನ್ನು ಅರ್ಪಿಸಿದೆ ರಾಜ್ಯ ಕೋಶಾಧಿಕಾರಿ ಸಂತೋಷ್ ಕುಮಾರ್ ಬಜಾಲ್ ನಿನ್ನೆ ಅವರ ಹುಟ್ಟೂರು ತಲೇಶೇರಿಯಲ್ಲಿ ನಡೆದ ಅಂತಿಮ ಸಂಸ್ಕಾರ ವಿಧಿವಿಧಾನದ ವೇಳೆ ಹೂಗುಚ್ಚ ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಈ ವೇಳೆ ಡಿವೈಎಫ್ಐ ಅಖಿಲ ಭಾರತ ಅಧ್ಯಕ್ಷರಾದ ಎ.ಎ ರಹೀಂ, ಕೇರಳ ರಾಜ್ಯ ಸಮಿತಿ ಕಾರ್ಯದರ್ಶಿ ವಿ.ಕೆ ಸನೋಜ್, ಅಧ್ಯಕ್ಷರಾದ ವಸೀಪ್, ರಾಜ್ಯ ಮುಖಂಡರಾದ ಶಾಜರ್, ಜಾಕ್ ಸಿ ಥೋಮಸ್, ಸರಿನ್ ಶಶಿ ಮುಂತಾದವರು ಉಪಸ್ಥಿತರಿದ್ದರು.

    ಏನು ಹಿನ್ನೆಲೆ:
    ನವೆಂಬರ್ 25, 1994 ರಂದು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಸರ್ಕಾರದ ಶಿಕ್ಷಣದ ಖಾಸಗೀಕರಣದ ವಿರುದ್ಧ ಡಿವೈಎಫ್‌ಐ ಸಂಘಟನೆ ಪ್ರಭಲ ಹೋರಾಟವನ್ನು ಕೈಗೊಂಡಿತು ಅಂದು ಯಾವುದೋ ಕಾರ್ಯಕ್ರಮವನ್ನು ಉದ್ಘಾಟಿಸಲು ಪಟ್ಟಣಕ್ಕೆ ಬಂದಿದ್ದ ಸಚಿವ ಎಂ.ವಿ.ರಾಘವನ್ ಅವರಿಗೆ ಕಪ್ಪು ಬಾವುಟ ಪ್ರದರ್ಶನದ ಹೋರಾಟ ಹಮ್ಮಿಕೊಳ್ಳಲಾಗಿತ್ತು. ಶಾಂತಿಯುತ ಹೋರಾಟ ನಡೆಸುತ್ತಿದ್ದ ಪ್ರತಿಭಟನಾಕಾರರನ್ನು ಪೋಲಿಸರು ಚದುರಿಸಲು ಮುಂದಾದರು. ಆಗ ಪೊಲೀಸರು ಗುಂಡಿನ ದಾಳಿ ನಡೆಸಿದರು. ಕಣ್ಣೂರಿನ ಕೂತುಪರಂಬ ಪಟ್ಟಣದಲ್ಲಿ ನಡೆದ ಕ್ರೂರ ಪೊಲೀಸ್ ಫೈರಿಂಗ್‌ ರಾಜ್ಯದ ರಾಜಕೀಯ ಇತಿಹಾಸದಲ್ಲೇ ಅತ್ಯಂತ ಕುಖ್ಯಾತ ಘಟನೆಯೊಂದರಲ್ಲಿ ಐವರು ಯುವಕರು ಪ್ರಾಣ ಕಳೆದುಕೊಂಡರು. ಅಂದಿನ ಹೋರಾಟದ ನೇತೃತ್ವ ವಹಿಸಿದ್ದ ಡಿವೈಎಫ್ಐ ಮುಖಂಡರಾದ ಕೆ.ಕೆ.ರಾಜೀವನ್, ಕೆ.ವಿ.ರೋಷನ್, ವಿ.ಮಧು, ಶಿಬುಲಾಲ್ ಮತ್ತು ಕುಂದುಚಿರ ಬಾಬು ಪೊಲೀಸರ ಗುಂಡಿಗೆ ಬಲಿಯಾದರು. ಮಾತ್ರವಲ್ಲ ಇನ್ನೂ ನೂರಾರು ಡಿವೈಎಫ್‌ಐ ಕಾರ್ಯಕರ್ತರು ಗಾಯಗೊಂಡರು. ಕಣ್ಣೂರಿನ ಚೋಕ್ಲಿಯ ಪುಷ್ಪನ್ ಮಾತ್ರ ಗುಂಡಿನ ದಾಳಿಯಿಂದ ಬದುಕುಳಿದಿದ್ದಾರೆ. ಆದರೆ ಕಳೆದ 30 ವರ್ಷಗಳಿಂದ ಅವರು ಹಾಸಿಗೆಯಿಂದ ಸ್ವಂತವಾಗಿ ಚಲಿಸಲು ಸಾಧ್ಯವಾಗುತ್ತಿಲ್ಲ. ಗುಂಡಿನ ದಾಳಿಯ ಸಮಯದಲ್ಲಿ ಒಂದು ಗುಂಡು ಅವರ ಬೆನ್ನುಹುರಿಗೆ ತಗುಲಿತು, ಅದು ಅವನನ್ನು ಪಾರ್ಶ್ವವಾಯುವಿಗೆ ಒಳಪಡಿಸಿತು ಮತ್ತು ಅಂದಿನಿಂದ ಹಾಸಿಗೆ ಹಿಡಿದಿದ್ದರೂ ಇವತ್ತಿಗೂ ಅದರಿಂದ ಒಂದಿಚಿನಷ್ಟೂ ವಿಚಲಿತರಾಗದೆ ಈವರೆಗೂ ಡಿವೈಎಫ್ಐ ಚಳುವಳಿಯಲ್ಲಿ ತೊಡಗಿಸಿಕೊಳ್ಳುವ ಕಾರ್ಯಕರ್ತರಿಗೆ ಸ್ಪೂರ್ತಿ ತುಂಬುವ ಜೀವವಾಗಿ ಬದುಕಿದವರು. ಅವರ ಅಗಲಿಕೆಗೆ ಕೇರಳ ರಾಜ್ಯದ ಜನ ಸಮುದಾಯ ಪಕ್ಷ ಬೇಧ ಮರೆತು ಅಂತಿಮ ವಿದಾಯ ಸಲ್ಲಿಸಲು ಲಕ್ಷೋಪಾದಿ ಸಂಖ್ಯೆಯಲ್ಲಿ ಬಂದು ಸೇರಿದ್ದಾರೆ. ಅವರ ಅಗಲಿಕೆ ಡಿವೈಎಫ್ಐ ಕರ್ನಾಟಕ ರಾಜ್ಯ ಸಮಿತಿಯೂ ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸುತ್ತದೆ ಎಂದು ಡಿವೈಎಫ್ಐ ನ ಕರ್ನಾಟಕ ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *