Connect with us

    LATEST NEWS

    ವಯನಾಡು ದುರಂತ, 400 ರ ಗಡಿ ದಾಟಿದ ಮೃತರ ಸಂಖ್ಯೆ..! ಗುರುತು ಸಿಗದ 31 ಹಾಗೂ158 ದೇಹದ ಭಾಗಗಳ ಪುತುಮಲದಲ್ಲಿ ಸರ್ವಧರ್ಮ ಪ್ರಾರ್ಥನೆಯೊಂದಿಗೆ ದಫನ..!

    ವಯನಾಡು, ಆಗಸ್ಟ್ 06 : ಭೂಕುಸಿತವಾದ ಕೇರಳ ವಯನಾಡ್‌ನಲ್ಲಿ ರಕ್ಷಣಾ ಕಾರ್ಯಾಚರಣೆ ಸತತ 8 ನೇ ದಿನಕ್ಕೆ ಕಾಲಿಟ್ಟಿದೆ. ಈ ಗಣ ಘೋರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಕೂಡ ಸೋಮವಾರ 400 ರ ಗಡಿ ದಾಟಿದ್ದು ಮಣ್ಣು , ಅವಶೇಷ ಬಗೆದಷ್ಟು ಶವಗಳ ರಾಶಿ ಸಿಗುತ್ತಲಿದೆ.

    ಇನ್ನು ಕೂಡ 180ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ.  ಇಲ್ಲಿನ ಮುಂಡಕ್ಕೈ ಹಾಗೂ ಚೂರಲ್‌ಮಲದಲ್ಲಿ ನಾಪತ್ತೆಯಾಗಿರುವರನ್ನು ಪತ್ತೆ ಹಚ್ಚಲು ಸ್ವಯಂಸೇವಕರು, ಸೇನೆ, ನೌಕಾಪಡೆ, ಅರಣ್ಯ, ಕೆ-9 ಶ್ವಾನ ದಳ, NDRF  ಮತ್ತು ಪೊಲೀಸ್ ಅಧಿಕಾರಿಗಳುಸೇರಿದಂತೆ 1,500ಕ್ಕೂ ಅಧಿಕ ಸಿಬ್ಬಂದಿ ರಾತ್ತಿ ಹಗಲು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಾಧಿತ ಪ್ರದೇಶಗಳನ್ನು 6 ವಲಯಗಳಾಗಿ ವರ್ಗೀಕರಿಸಲಾಗಿದ್ದು  ಈ ಪ್ರದೇಶದಲ್ಲಿ ನಡೆಸುತ್ತಿರುವ ಶೋಧ ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ. ಕೆಲವು ಮನೆಗಳಲ್ಲಿ ಕಳ್ಳತನ ನಡೆದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ತಾತ್ಕಾಲಿಕ ಸೇತುವೆಯಲ್ಲಿ ಸಂಚರಿಸಲು ರಕ್ಷಣಾ ಸಿಬ್ಬಂದಿಗೆ ಮಾತ್ರ ಅವಕಾಶ ನೀಡಲಾಗಿದೆ. ಮೃತದೇಹಗಳಿಗಾಗಿ ಚಾಲಿಯಾರ್ ನದಿಯಲ್ಲಿ ಕೂಡ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

     

    31 ಗುರುತು ಸಿಗದ  ಮತ್ತು 158 ದೇಹದ ಭಾಗಗಳನ್ನು ಪುತುಮಲದಲ್ಲಿ ಸರ್ವಧರ್ಮ ಪ್ರಾರ್ಥನೆ ಸಭೆಯ ನಂತರ ಸಾಮೂಹಿಕವಾಗಿ ಹೂಳಲಾಯಿತು.

     

    Share Information
    Advertisement
    Click to comment

    You must be logged in to post a comment Login

    Leave a Reply