Connect with us

    DAKSHINA KANNADA

    36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    ಪುತ್ತೂರು, ಅಗಸ್ಟ್ 07: ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 36 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪುತ್ತೂರು ನಗರ ಪೊಲೀಸ್ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

    ಪುತ್ತೂರು ತಾಲೂಕಿನ ಚಾರ್ವಾಕ ಗ್ರಾಮದ ಕುಂಬ್ಲಾಡಿ ನಿವಾಸಿ ಬಾಬು ಪೂಜಾರಿ ಲಿಂಗಪ್ಪ(46) ಯಾನೆ ರೆಹಮತ್‌ ಖಾನ್‌ ಬಂಧಿತ ಆರೋಪಿ. 1985ನೇ ಇಸವಿಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿ ಪ್ರಕರಣ ದಾಖಲಾದ ಸಮಯ ಆರೋಪಿ ಲಿಂಗಪ್ಪ (ರೆಹಮತ್‌ ಖಾನ್‌) ತಲೆಮರೆಸಿಕೊಂಡಿದ್ದ. ಶಿವಮೊಗ್ಗದಲ್ಲಿ 5 ವರ್ಷಗಳಿಂದ ಅಟೋ ಚಾಲಕನಾಗಿದ್ದು, ನಂತರ ಮಂಗಳೂರಿನ ತಣ್ಣೀರು ಬಾವಿ ಎಂಬಲ್ಲಿಗೆ ಬಂದು ಅನ್ಯಕೋಮಿನ ಹುಡುಗಿಯನ್ನು ಮದುವೆಯಾಗಿ ತನ್ನ ಹೆಸರನ್ನು ರೆಹಮತ್‌ ಖಾನ್‌ ಬದಲಾಯಿಸಿಕೊಂಡು ತಣ್ಣೀರು ಬಾವಿಯಲ್ಲಿ ವಾಸವಾಗಿದ್ದು ವಾರಂಟ್‌ ದಸ್ತಗಿರಿಗೆ ತಪ್ಪಿಸಿಕೊಂಡಿರುತ್ತಾನೆ.

    ಸುಮಾರು 29 ವರ್ಷಗಳ ಕಾಲ ತಣ್ಣೀರು ಬಾವಿಯಲ್ಲಿ ಕಪ್ಪು ಚಿಪ್ಪು ( ಸೆಲ್ಫಿಸ್‌ ) ವ್ಯಾಪಾರ ಮಾಡಿಕೊಂಡಿದ್ದು, ನಂತರ ಸುಮಾರು 3 ವರ್ಷಗಳಿಂದ ಓಶಿಯನ್‌ ಕಂಪೆನಿಯಲ್ಲಿ ಕಂನ್ಸಟ್ರಕ್ಷನ್‌ ಕೆಲಸವನ್ನು ಮುಂಡಗೋಡಿ, ಹುಬ್ಬಳ್ಳಿ, ಬೆಳಗಾಂ ಮುಂತಾದ ಕಡೆ ಮಾಡಿಕೊಂಡಿದ್ದ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.

    ಪುತ್ತೂರು ಡಿವೈಎಸ್ ಪಿ ಗಾನ ಕೆ ಕುಮಾರ್ ಅವರ ಮಾರ್ಗದರ್ಶನದಂತೆ ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕರಾದ ಗೋಪಾಲ ನಾಯ್ಕ್ ಮತ್ತು ಪೊಲೀಸ್ ಉಪ ನಿರೀಕ್ಷಕರಾದ ಸುತೇಶ್ ಮತ್ತು ನಸ್ರಿನ್ ತಾಜ್ ಚಟ್ಟರಕಿ ಇವರ ಸೂಚನೆಯಂತೆ ಪುತ್ತೂರು ನಗರ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಳಾದ ಪರಮೇಶ್ವರ್ ಮತ್ತು ಕೃಷ್ಣಪ್ಪ ಅವರು ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *