LATEST NEWS
ಕರಾವಳಿ ಮೇಲೆ ಉಗ್ರರ ಕಣ್ಣು ಹೈಲರ್ಟ್ ನಲ್ಲಿ ಕರಾವಳಿ
ಕರಾವಳಿ ಮೇಲೆ ಉಗ್ರರ ಕಣ್ಣು ಹೈಲರ್ಟ್ ನಲ್ಲಿ ಕರಾವಳಿ
ಮಂಗಳೂರು ಅಗಸ್ಟ್ 29: ದಕ್ಷಿಣಭಾರತದ ಮೇಲೆ ಉಗ್ರರ ಕರಿ ನೆರಳು ಬಿದ್ದಿರುವ ಹಿನ್ನಲೆ ಹಾಗೂ ಈಗಾಗಲೇ ತಮಿಳುನಾಡಿನ ಮೂಲಕ 6 ಮಂದಿ ಉಗ್ರರು ಒಳ ನುಸುಳಿರುವ ಗುಪ್ತಚರ ಮಾಹಿತಿ ಹಿನ್ನಲೆ ದೇಶದ ಕರಾವಳಿಯಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ.
ಶ್ರೀಲಂಕಾದ 5 ಹಾಗೂ ಒಬ್ಬ ಪಾಕಿಸ್ತಾನಿ ಉಗ್ರ ಸೇರಿ ಒಟ್ಟು 6 ಮಂದಿ ಉಗ್ರರು ತಮಿಳುನಾಡಿನ ಮೂಲಕ ಒಳನುಸುಳಿದ್ದಾರೆ ಎಂಬ ಕೇಂದ್ರ ಗುಪ್ತಚರ ಇಲಾಖೆಯ ಮಾಹಿತಿ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಕೇರಳ ಕರಾವಳಿ ತೀರದಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ.
ಈ ನಡುವೆ ರಾಜ್ಯದ ಕರಾವಳಿ ತೀರದಲ್ಲೂ ಕೂಡ ಭದ್ರತೆ ಹೆಚ್ಚಿಸಲಾಗಿದ್ದು. ಕರಾವಳಿಯಲ್ಲಿ ಕಟ್ಟುನಿಟ್ಟಿನ ಭದ್ರತೆ ಮುಂದುವರೆದಿದ್ದು ಎಲ್ಲಾ ಆಯಕಟ್ಟಿನ ಸ್ಥಳಗಳಲ್ಲಿ ಹದ್ದಿನ ಕಣ್ಣಿಡಲಾಗಿದೆ. ಆಳ ಸಮುದ್ರದಲ್ಲಿ ನಡೆಯುವ ಚಟುವಟಿಕೆಗಳ ಮೇಲೂ ನಿಗಾವಹಿಸಲಾಗಿದ್ದು 15 ದಿನಗಳಿಂದ ಕಡಲ ತೀರದಲ್ಲಿ ಪೊಲೀಸ್ ಪಡೆ ಸೇರಿದಂತೆ ಕರಾವಳಿ ಕಾವಲು ಪಡೆಯನ್ನು ಸನ್ನದ್ದ ಸ್ಥಿತಿಯಲ್ಲಿಡಲಾಗಿದೆ.
ಈ ನಡುವೆ ಪಾಕಿಸ್ತಾನದ ಉಗ್ರನೊಬ್ಬ ಕರ್ನಾಟಕದ ಕರಾವಳಿಗೆ ಬಂದಿರುವ ಶಂಕೆ ಇದೆ ಎಂಬ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಕಾವಲುಪಡೆಯನ್ನು ಹೈ ಅಲರ್ಟ್ ನಲ್ಲಿ ಇಡಲಾಗಿದೆ. ಕರಾವಳಿ ಕಾವಲು ಪೊಲೀಸ್ ಪೊಲೀಸರು ಮೀನುಗಾರರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದಾರೆ.
ಮೀನುಗಾರಿಕೆಗೆ ತೆರಳುವ ಮೀನುಗಾರರಿಗೆ ಆಳ ಸಮುದ್ರದಲ್ಲಿ ಅನುಮಾನಾಸ್ಪದ ಚಟುವಟಿಕೆ ಕಂಡು ಬಂದಲ್ಲಿ ಹಾಗು ಕಡಲ ತೀರದಲ್ಲಿ ಶಂಕಿತ ಬೋಟ್ ಮತ್ತು ವ್ಯಕ್ತಿಗಳು ಕಂಡುಬಂದರೆ ಮಾಹಿತಿ ನೀಡುವಂತೆ ಮೀನುಗಾರರಿಗೆ ಈ ಗಾಗಲೇ ಸೂಚನೆ ನೀಡಲಾಗಿದೆ.
ಮಾರ್ಕೆಟ್, ಮಾಲ್, ಆಸ್ಪತ್ರೆ, ಬಸ್ಸು- ರೈಲು ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ವಾಹನಗಳ ಮೇಲೆ ಸರಕಾರಿ ಲಾಂಛನವನ್ನು ಅನಧಿಕೃತವಾಗಿ ಬಳಕೆ ಮಾಡುವವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ.
ಅನುಮಾನಾಸ್ಪದ ವಾಹನಗಳ ತಪಾಸಣೆ ನಡೆಸುತ್ತಿದೆ. ಆಳ ಸಮುದ್ರದಲ್ಲಿ ಭಾರತೀಯ ತಟ ರಕ್ಷಣಾ ಪಡೆಯ ಹಡಗುಗಳು ಗಸ್ತು ತಿರುಗುತ್ತಿದ್ದು ಭಾರತೀಯ ನೌಕಾ ಪಡೆಕೂಡ ಸನ್ನದ್ದ ಸ್ಥತಿಯಲ್ಲಿದೆ.