LATEST NEWS
ಟ್ರಂಪ್ ತೆರಿಗೆ ವಾರ್ನಿಂಗ್ – ಷೇರು ಮಾರುಕಟ್ಟೆಯಲ್ಲಿ ತಲ್ಲಣ
ಮುಂಬೈ ಜನವರಿ 21: ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೂಡಲೇ ನೆರೆಯ ರಾಷ್ಟ್ರಗಳಿಗೆ ಡೊನಾಲ್ಡ್ ಟ್ರಂಪ್ ವಾರ್ನಿಂಗ್ ಕೊಟ್ಟಿದ್ದು, ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಇದು ಭಾರತೀಯ ಷೇರು ಮಾರುಕಟ್ಟೆ 7 ತಿಂಗಳ ಕನಿಷ್ಠ ಮಟ್ಟಕ್ಕೆ ಕುಸಿಯುವಂತಾಗಿದೆ.
ಬಿಎಸ್‌ಇ ಸೆನ್ಸೆಕ್ಸ್ 1,235 ಅಂಶ ಇಳಿಕೆ ಕಂಡು 75,838.36ಕ್ಕೆ ತಲುಪಿದೆ. ಆ ಮೂಲಕ ಕಳೆದ ಏಳು ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಮತ್ತೊಂದೆಡೆ ಎನ್‌ಎಸ್‌ಇ ನಿಫ್ಟಿ 320.10 ಅಂಶ ಇಳಿಕೆಯಾಗಿ 23,024.65 ಅಂಶಕ್ಕೆ ತಲುಪಿದೆ.
ಡೊನಾಲ್ಡ್ ಟ್ರಂಪ್ ಬ್ರಿಕ್ಸ್ ರಾಷ್ಟ್ರಗಳಿಗೆ ವ್ಯವಹಾರಕ್ಕೆ ಡಾಲರ್ ನ್ನು ಮಾತ್ರ ಬಳಸಬೇಕು ಇಲ್ಲದಿದ್ದರೆ 100 ಶೇಕಡ ತೆರಿಗೆ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಇದು ದೇಶೀಯ ಮಾರುಕಟ್ಟೆಗಳು ಇಂದು ಗಮನಾರ್ಹ ಕುಸಿತ ಕಾಣಲು ಕಾರಣವಾಗಿದೆ, ,ಅಲ್ಲದೆ ಟ್ರಂಪ್ ಅಧಿಕಾರ ಪ್ರಾರಂಭದಲ್ಲೇ ನೀಡಿರುವ ಹೇಳಿಕೆಗಳು ಮಾರುಕಟ್ಟೆಯಲ್ಲಿ ಪರಿಣಾಮ ಬೀರುತ್ತಿದೆ.