Connect with us

LATEST NEWS

ಮಂಗಳೂರು – ಕುಂಟಿಕಾನದಲ್ಲಿ ಟೆಂಪೋ ಟ್ರಾವೆಲ್ಲರ್ ಕದ್ದ ಕಳ್ಳರು ಬೆಳಗಾವಿಯಲ್ಲಿ ಅರೆಸ್ಟ್

ಮಂಗಳೂರು ಸೆಪ್ಟೆಂಬರ್ 22: ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕುಂಟಿಕಾನ ಫ್ಲೈ ಓವರ್ ಬಳಿ ಟೆಂಪೋ ಟ್ರಾವೆಲರ್ ವಾಹನ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಅರೀಫ್ ಉಲ್ಲಾಖಾನ್ @ ಅರೀಫ್, ಅಮಿತ್ ಬಾಹುಬಲಿ ಪಂಚೋಡಿ @ ಬೇಬಿ, ಸುರೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ.


ಬಂಧಿತ ಆರೋಪಿಗಳು ಸೆಪ್ಟೆಂಬರ್ 14 ರಂದು ಕುಂಟಿಕಾನ ಪ್ಲೈಓವರ್ ಬಳಿ ನಿಲ್ಲಿಸಿದ್ದ ಟೆಂಪೋಟ್ರಾವೆಲ್ಲರ್ ವಾಹನವನ್ನು ಕಳ್ಳತನ ಮಾಡಿದ್ದರು. ಈ ಕುರಿತಂತೆ ಉರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಆರೋಪಿಗಳನ್ನು ಬೆಳಗಾವಿಯಲ್ಲಿ ಬಂಧಿಸಿದ್ದಾರೆ. ಬಂಧಿತರಿಂದ ಕಳುವಾದ 15ಲಕ್ಷ ಮೌಲ್ಯದ ಟೆಂಪೋ ಟ್ರಾವೆಲ್ಲೆರ್ವನ್ನು ವಶಕ್ಕೆ ಪಡೆದಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *