DAKSHINA KANNADA
ಹಾಲಿನ ಬೆಲೆ ಏರಿಕೆ ಸಮರ್ಥಿಸಿಕೊಂಡ ಡಿಸಿಎಂ ಡಿಕೆ ಶಿವಕುಮಾರ್
ಕುಕ್ಕೆ ಸುಬ್ರಹ್ಮಣ್ಯ ಜೂನ್ 25: ಪ್ಯಾಮಿಲಿ ಸಮೇತ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿರುವ ಡಿಸಿಎಂ ಡಿಕೆ ಶಿವಕುಮಾರ್ ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು ಕೆಎಂಎಫ್ ಹಾಲಿನ ಬೆಲೆ ಏರಿಕೆ ಮಾಡಿರುವುದನ್ನು ಸಮರ್ಥಿಸಿಕೊಂಡರು. ನೀರಿನ ಬೆಲೆಯೂ ಲೀಟರ್ ಗೆ 25 ರೂ.ಆಗಿದೆ. ಅಲ್ಲದೆ ಹಾಲಿನ ಬೆಲೆ ಜಾಸ್ತಿ ಮಾಡಬೇಕೆಂದು ರೈತರ ಒತ್ತಡವಿತ್ತು, ಹೀಗಾಗಿ ರೈತರ ಒತ್ತಡದ ಮೇಲೆ ಈ ಕ್ರಮ ಕೈಗೊಂಡಿದ್ದೇವೆ ಎಂದರು. ಪ್ರಜ್ವಲ್ ರೇವಣ್ಣ ವೀಡಿಯೋ ವೈರಲ್ ಪ್ರಕರಣದಲ್ಲಿ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ಎಫ್ ಐ ಆರ್ ದಾಖಲಾಗಿರುವ ವಿಚಾರ ನನಗೆ ತಿಳಿದಿಲ್ಲ. ಮಂಗಳೂರಿನಿಂದ ಸುಬ್ರಹ್ಮಣ್ಯದ ವರೆಗೆ ಮಲಗಿಕೊಂಡೇ ಬಂದಿದ್ದೀನಿ, ನನಗೆ ಯಾರೂ ಈ ವಿಚಾರ ತಿಳಿಸಿಲ್ಲ, ನಂಗೇ ಏನೂ ಗೊತ್ತಿಲ್ಲ ಎಂದರು.
ರಾಜ್ಯದಲ್ಲಿ ಮಳೆ ಈಗಷ್ಟೇ ಪ್ರಾರಂಭ ಆಗಿದೆ, ಡ್ಯಾಂಗಳಲ್ಲಿ ಜಾಸ್ತಿ ನೀರು ಬರಲು ಪ್ರಾರಂಭ ಆಗಿದೆ. ಸಂಪೂರ್ಣವಾಗಿ ಮಳೆ ಪ್ರಾರಂಭವಾಗಿಲ್ಲ, ಇನ್ನೂ ಕೂಡ ಮಳೆಯ ಅವಕಾಶ ಇದೆ ಆದ್ರೂ ತಮಿಳುನಾಡುನವರು ಇವಾಗ್ಲೇ ನಮ್ಮಲ್ಲಿ ನೀರು ಬಿಡುವಂತೆ ಬೇಡಿಕೆ ಇಟ್ಟಿದ್ದಾರೆ. ಡ್ಯಾಂಗಳಲ್ಲಿ ಇನ್ನೂ ನೀರು ಬರಲು ಪ್ರಾರಂಭವಾಗಿಲ್ಲ, ಹಾಗಾಗಿ ಮಳೆ ಹೆಚ್ಚಾಗಿ ಬರಲಿ ಎಂದು ಪ್ರಾರ್ಥಿನೆ ಮಾಡೋಣ ಎಂದರು.