LATEST NEWS
ಮೋದಿ ಮತ್ತೊಮ್ಮೆ ಪ್ರಧಾನಿ – ಕಟೀಲು ಯಕ್ಷಗಾನ ಹರಕೆ ತೀರಿಸಿದ ಟೀಂ ಮೋದಿ

ಮೋದಿ ಮತ್ತೊಮ್ಮೆ ಪ್ರಧಾನಿ – ಕಟೀಲು ಯಕ್ಷಗಾನ ಹರಕೆ ತೀರಿಸಿದ ಟೀಂ ಮೋದಿ
ಮಂಗಳೂರು ಮೇ 25: ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಟೀಂ ಮೋದಿ ತಂಡ ಹರಕೆಯ ಕಟೀಲು ಯಕ್ಷಗಾನವನ್ನು ನಿನ್ನೆ ಆಯೋಜಿಲಾಗಿತ್ತು. ಈ ಮೂಲಕ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಕಟೀಲು ಯಕ್ಷಗಾನದ ಹರಕೆಯನ್ನು ತೀರಿಸಲಾಗಿದೆ.
ದೇಶದಲ್ಲಿ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಮತ್ತೆ ಅಧಿಕಾರಕ್ಕೇರಿದೆ. ಭರ್ಜರಿ ಬಹುಮತದೊಂದಿಗೆ ಈ ಭಾರಿ ಎನ್ ಡಿಎ ಸರಕಾರ ರಚಿಸಲಿದ್ದು, ಮತ್ತೆ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಆಯ್ಕೆಯಾಗಲಿದ್ದಾರೆ.

ಮತ್ತೊಮ್ಮೆ ನರೇಂದ್ರ ಮೋದಿಯವರು ಕೇಂದ್ರದ ಗದ್ದುಗೆ ಏರಬೇಕು ಎಂದು ಟೀಂ ಮೋದಿ ಎಂಬ ತಂಡ ಯಕ್ಷಗಾನ ಹರಕೆ ಕಟ್ಟಿಕೊಂಡಿತ್ತು. ಅದರಂತೆ ಕೇಂದ್ರದಲ್ಲಿ ಭರ್ಜರಿ ಬಹುಮತದೊಂದಿಗೆ ಎನ್ ಡಿ ಎ ಸರಕಾರ ಜಯಭೇರಿ ದಾಖಲಿಸಿದ್ದು, ಮಂಗಳೂರಿನ ರಥಬೀದಿಯಲ್ಲಿ ಕಟೀಲು ದುರ್ಗಾ ಪರಮೇಶ್ವರಿ ಮೇಳದಿಂಧ ಶ್ರೀ ದೇವಿ ಮಹಾತ್ಮೆ ಪುಣ್ಯ ಕಥಾ ಪ್ರಸಂಗ ನಿನ್ನೆ ಜರುಗಿತು.
ಈ ಹಿಂದೆ ಕೂಡ ಡಿಸೆಂಬರ್ 29 ರಂದು ಟೀಂ ಮೋದಿ ತಂಡ ಮೋದಿ ಮತ್ತೆ ಪ್ರದಾನಿಯಾಗಲೆಂದು ಮಂಗಳೂರು ನಗರದ ಮಣ್ಣಗುಡ್ಡೆ ಗುರ್ಜಿಯ ಬಳಿ ಶ್ರೀ ದೇವಿ ಮಹಾತ್ಮೆ ಹರಕೆಯ ಯಕ್ಷಗಾನ ಸೇವೆ ಆಯೋಜಿಸಿತ್ತು. ಈಗ ಮತ್ತೊಮ್ಮೆ ಮೋದಿಯವರು ಭರ್ಜರಿ ಯಶಸ್ಸು ಕಂಡ ಸಂತೋಷಕ್ಕೆ ಯಕ್ಷಗಾನ ಹರಕೆ ಸೇವೆಯನ್ನು ಮುಂದುವರಿಸಿದೆ.
ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರದಾನಿಯಾಗುವರು ಎಂಬ ಅಚಲ ವಿಶ್ವಾಸದಿಂದ ಚುನಾವಣಾ ಫಲಿತಾಂಶ ಕ್ಕಿಂತ ಮೊದಲೇ ಕಟೀಲು ಶ್ರೀ ದುರ್ಗ ಪರಮೇಶ್ವರ ದಶಾವತಾರ ಯಕ್ಷಗಾನ ಮಂಡಳಿಯ ಯಕ್ಷಗಾನ ಬುಕ್ಕಿಂಗ್ ಮಾಡಿದ್ದೆವು. ಗುರುವಾರ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು. ಮೋದಿ ಭರ್ಜರಿ ಯಶಸ್ಸು ಗಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯಕ್ಷಗಾನ ಆಯೋಜಿಸಿದ್ದೇವೆ ಎಂದು ಟೀಂ ಮೋದಿ ತಂಡದ ಸದಸ್ಯರು ಅಭಿಮಾನದಿಂದ ಸಂತಸ ಹಂಚಿಕೊಂಡರು.