KARNATAKA
ಬೆಂಗಳೂರು – ಗುಂಡು ಹಾರಿಸಿ ಟೀಂ ಗರುಡದ ಉಡುಪಿ ಮೂಲದ ಇಬ್ಬರು ರೌಡಿಗಳ ಬಂಧನ
ಬೆಂಗಳೂರು ಎಪ್ರಿಲ್ 06: ಕಿಡ್ನಾಪ್ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಲು ಹೋದ ಟೀಂ ಗರುಡ 900 ತಂಡ ಇಬ್ಬರನ್ನು ಶೂಟ್ ಮಾಡಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಉಡುಪಿ ಕಾಪು ಮೂಲದ ಮೊಹಮ್ಮದ್ ಆಶಿಕ್ (22), ಇಸಾಕ್ (21) ಬಂಧಿತರು. ತಲೆಮರೆಸಿಕೊಂಡಿರುವ ಇಬ್ಬರಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಆರೋಪಿಗಳಿಂದ ಹಲ್ಲೆಗೊಳಗಾದ ಕೊತ್ತನೂರು ಪಿಎಸ್‌ಐ ಉಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಂಧಿತ ಆರೋಪಿಗಳು ಮಾರ್ಚ್ 26 ರಂದು ಯುವಕನೊಬ್ಬನನ್ನು ಬೆದರಿಸಿ ಆತನಿಂದ ಆಭರಣ ಸೇರಿದಂತೆ ಹಣವನ್ನು ದೋಚಿದ್ದರು. ಈ ಹಿನ್ನಲೆ ಯುವಕ ಪೊಲೀಸ್ ಠಾಣೆಗೆ ದೂರು ನೀಡಿದ್ದ. ಪ್ರಕರಣದ ಬೆನ್ನತ್ತಿದ ಪೊಲೀಸರಿಗೆ ಆರೋಪಿಗಳು ಜಕ್ಕೂರು ಸಮೀಪ ರಿಟ್ಸ್ ಕಾರಿನಲ್ಲಿ ಆರೋಪಿಗಳು ಸಂಚರಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಮಾಹಿತಿ ಆಧರಿಸಿ ಕೊತ್ತನೂರು ಠಾಣೆಯ ಇನ್‌ಸ್ಪೆಕ್ಟರ್ ಚನ್ನೇಶ್ ನೇತೃತ್ವದ ತಂಡ ಆರೋಪಿಗಳ ಕಾರನ್ನು ಪತ್ತೆ ಹಚ್ಚಿ, ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿದ್ದರು. ಶಿವರಾಮ ಕಾರಂತ ಕ್ಲಬ್ ಬಳಿ ಆರೋಪಿಗಳ ಕಾರನ್ನು ಪೊಲೀಸರು ಅಡ್ಡಹಾಕಿದ್ದರು. ಆಶಿಕ್ ಹಾಗೂ ಐಸಾಕ್‌ನನ್ನು ಬಂಧಿಸಲು ಹೋದ ಪಿಎಸ್‌ಐ ಉಮೇಶ್ ಮೇಲೆ ಡ್ಯಾಗರ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದ್ದರು. ಇನ್‌ಸ್ಪೆಕ್ಟರ್ ಚೆನ್ನೇಶ್ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಆರೋಪಿಗಳು ಪೊಲೀಸರ ಮೇಲೆ ಮತ್ತೆ ಹಲ್ಲೆ ನಡೆಸಲು ಮುಂದಾದಾಗ ಆತ್ಮರಕ್ಷಣೆಗಾಗಿ ಇಬ್ಬರು ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ