LATEST NEWS
ಕಟೀಲು ದುರ್ಗಾ ಪರಮೇಶ್ವರಿ ದೇವಿ ದರ್ಶನ ಪಡೆದ ನಟಿ ತಾರಾ ಅನುರಾಧ

ಮಂಗಳೂರು ಡಿಸೆಂಬರ್ 03: ಸ್ಯಾಂಡಲ್‌ವುಡ್‌ನ ಹಿರಿಯ ನಟಿ ತಾರಾ ಅನುರಾಧ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಸಿನಿಮಾ ಮತ್ತು ರಾಜಕೀಯ ಎರಡು ಕ್ಷೇತ್ರಗಳಲ್ಲಿ ನಟಿ ತಾರಾ ಅನುರಾಧ ಸಕ್ರಿಯವಾಗಿರುವ ತಾರಾ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದ್ದಾರೆ. ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ.
ಸಾಲು ಸಾಲು ಚಿತ್ರಗಳಲ್ಲಿ ನಟಿ ತಾರಾ ಬ್ಯುಸಿಯಾಗಿದ್ದಾರೆ. `ನನ್ನಮ್ಮ ಸೂಪರ್ ಸ್ಟಾರ್ 2′ ರಿಯಾಲಿಟಿ ಶೋನ ಜಡ್ಜ್ ಆಗಿ ಕಾಣಿಸಿಕೊಳ್ತಿದ್ದಾರೆ. ರಾಜಕೀಯ ಕ್ಷೇತ್ರದಲ್ಲಿ ನಟಿ ತಾರಾ ಸೈ ಎನಿಸಿಕೊಂಡಿದ್ದಾರೆ.
