LATEST NEWS
ಲವ್ ಜಿಹಾದ್ ಗೆ ಜಾಹೀರಾತಿನ ಮೂಲಕ ಬೆಂಬಲ ಆರೋಪ, ಜಾಹೀರಾತು ಹಿಂಪಡೆದ ತನಿಷ್ಕ್ ಜ್ಯುವೆಲ್ಲರಿ….

ಲವ್ ಜಿಹಾದ್ ಗೆ ಜಾಹೀರಾತಿನ ಮೂಲಕ ಬೆಂಬಲ ಆರೋಪ, ಜಾಹೀರಾತು ಹಿಂಪಡೆದ ತನಿಷ್ಕ್ ಜ್ಯುವೆಲ್ಲರಿ….
ಮುಂಬಯಿ, ಅಕ್ಟೋಬರ್ 14: ತನಿಷ್ಕ್ ಚಿನ್ನಾಭರಣಗಳ ಮಳಿಗೆ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಜಾಹೀರಾತನ್ನು ಸಾರ್ವಜನಿಕರ ತೀವೃ ಆಕ್ರೋಶದ ಬಳಿಕ ಹಿಂಪಡೆದಿದೆ.
ಈ ಜಾಹೀರಾತಿನಲ್ಲಿ ಹಿಂದೂ ಯುವತಿಯೊಬ್ಬಳು, ಮುಸ್ಲಿಂ ಯುವಕನೊಂದಿಗೆ ವಿವಾಹವಾಗುವ ಮತ್ತು ಬಳಿಕ ಆಕೆಯನ್ನು ಮನೆ ಮಂದಿ ಸತ್ಕರಿಸುವ ಚಿತ್ರಣವನ್ನು ಬಿಂಬಿಸಲಾಗಿತ್ತು.

ಈ ಜಾಹೀರಾತಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು.
ದೆಹಲಿಯಲ್ಲಿ ಮುಸ್ಲಿಂ ಯುವತಿಯನ್ನು ಪ್ರೀತಿಸಿದ ಕಾರಣಕ್ಕೆ ಯುವತಿಯ ಕುಟುಂಬಸ್ಥರು ಹಿಂದೂ ಯುವಕನೋರ್ವನನ್ನು ಹೊಡೆದು ಕೊಂದಿದ್ದರು.
ಇದೇ ಸಮಯದಲ್ಲಿ ಈ ಜಾಹೀರಾತನ್ನು ತನಿಷ್ಕ್ ಜ್ಯುವೆಲ್ಲರಿ ಬಿಡುಗಡೆ ಮಾಡಿತ್ತು.
ಹಿಂದೂ ಯುವತಿಯನ್ನು ಮುಸ್ಲಿಂ ಕುಟುಂಬದಲ್ಲಿ ಬಿಂಬಿಸುವ ಮೂಲಕ ಲವ್ ಜಿಹಾದ್ ಗೆ ಬೆಂಬಲ ನೀಡಲಾಗುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿತ್ತು.
ಟಾಟಾ ಒಡೆತನದ ತನಿಷ್ಕ ಜ್ಯುವೆಲ್ಲರಿ ಜಾಹೀರಾತಿನ ಕುರಿತು ತೀವೃ ಆಕ್ರೋಶ ಕೇಳಿ ಬಂದ ಹಿನ್ನಲೆಯಲ್ಲಿ ಜಾಹೀರಾತನ್ನು ಹಿಂಪಡೆದುಕೊಂಡಿದೆ.