LATEST NEWS
ಕ್ರಿಕೆಟ್ ಮ್ಯಾಚ್ ವೇಳೆ ಹಾರ್ಟ್ ಅಟ್ಯಾಕ್ – ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ತಮೀಮ್ ಇಕ್ಬಾಲ್ ಸ್ಥಿತಿ ಗಂಭೀರ

ಢಾಕಾ ಮಾರ್ಚ್ 24: ಢಾಕಾ ಪ್ರೀಮಿಯರ್ ಲೀಗ್ 2025 ಪಂದ್ಯದ ವೇಳೆ ಎದೆನೋವು ಕಾಣಿಸಿಕೊಂಡ ಹಿನ್ನಲೆ ಬಾಂಗ್ಲಾದೇಶದ ಮಾಜಿ ಕ್ರಿಕೆಟಿಗ ತಮೀಮ್ ಇಕ್ಬಾಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಢಾಕಾ ಪ್ರೀಮಿಯರ್ ಲೀಗ್ 2025 ಪಂದ್ಯಾಟದ ವೇಳೆ ಪಿಲ್ಡಿಂಗ್ ವೇಳೆ ತಮೀಮ್ ಇಕ್ಬಾಲ್ ಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಮೈದಾನದಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಆದರೆ ಹೃದಯಾಘಾತವಾದ ಹಿನ್ನೆಲೆ ಅವರ ಸ್ಥಿತಿ ಗಂಭೀರವಾಗಿತ್ತು. ಅವರನ್ನು ಆಸ್ಪತ್ರೆಗೆ ಸಾಗಿಸಲು ಹೆಲಿಕಾಪ್ಟರ್ ನ್ನು ತರಲಾಗಿತ್ತು, ಆದರೆ ಸ್ಥಿತಿ ಗಂಭೀರವಾದ ಹಿನ್ನಲೆ ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದೆ. ಸದ್ಯದ ಮಾಹಿತಿ ಪ್ರಕಾರ ತಮೀಮ್ ಅವರು ಆಂಜಿಯೋಪ್ಲಾಸ್ಟ್ ಆಪರೇಷನ್ ಗೆ ಒಳಗಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಢಾಕಾ ಪ್ರೀಮಿಯರ್ ಲೀಗ್ (ಡಿಪಿಎಲ್) ನಲ್ಲಿ ತಮೀಮ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ, ಪಂದ್ಯಾವಳಿಯಲ್ಲಿ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಏಳು ಪಂದ್ಯಗಳಲ್ಲಿ, ಎಡಗೈ ಬ್ಯಾಟ್ಸ್‌ಮನ್ 73.60 ಸರಾಸರಿ ಮತ್ತು 102.50 ಸ್ಟ್ರೈಕ್ ರೇಟ್‌ನಲ್ಲಿ 368 ರನ್ ಗಳಿಸಿದ್ದಾರೆ, ಇದರಲ್ಲಿ ಎರಡು ಶತಕಗಳಿವೆ.
ತಮೀಮ್ 2007 ರಿಂದ 2023 ರವರೆಗೆ ಎಲ್ಲಾ ಸ್ವರೂಪದ ಕ್ರಿಕೆಟ್ ನಲ್ಲಿ ಬಾಂಗ್ಲಾದೇಶದ ಪರವಾಗಿ 391 ಪಂದ್ಯಗಳನ್ನು ಆಡಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ತಮೀಮ್ 15,000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಎಲ್ಲಾ ಮೂರು ಅಂತರರಾಷ್ಟ್ರೀಯ ಕ್ರಿಕೆಟ್ ಸ್ವರೂಪಗಳಲ್ಲಿ ಶತಕಗಳನ್ನು ದಾಖಲಿಸಿದ ಏಕೈಕ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಆಗಿ ಸಾಧನೆ ಮಾಡಿದ್ದಾರೆ