DAKSHINA KANNADA
ಲಾಕ್ ಡೌನ್ ನಡುವೆಯೂ ತಮಿಳುನಾಡಿನಿಂದ ಕಡಬಕ್ಕೆ ಬಂದ ಈ ಕುಟುಂಬ
ಲಾಕ್ ಡೌನ್ ನಡುವೆಯೂ ತಮಿಳುನಾಡಿನಿಂದ ಕಡಬಕ್ಕೆ ಬಂದ ಈ ಕುಟುಂಬ
ಕಡಬ ಎಪ್ರಿಲ್ 9: ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮ ಈಗ ಆಂತಕದಲ್ಲಿದೆ. ಈಗಾಗಲೇ ತಮಿಳುನಾಡಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೊಂಕಿತರ ಸಂಖ್ಯೆ ಏರಿಕೆಯಲ್ಲಿರುವಾಗಲೇ ಕಡಬ ತಾಲೂಕಿನ ಐತೂರು ಗ್ರಾಮಕ್ಕೆ ತಮಿಳುನಾಡಿನಿಂದ ಒಂದು ಕುಟುಂಬ ಬೈಕ್ ಮೂಲಕ ಗ್ರಾಮಕ್ಕೆ ಆಗಮಿಸಿದ್ದು, ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು, ಇದು ರಾಜ್ಯದ ಗಡಿ ಭಾಗದಲ್ಲಿ ಸರಿಯಾದ ರೀತಿ ತಪಾಸಣೆ ನಡೆಸಲಾಗುತ್ತಿಲ್ಲ ಎನ್ನುವುದು ಸಾಕ್ಷಿಯಾಗಿದೆ.
ಜನರನ್ನು ಲಾಕ್ ಡೌನ್ ಹೇರಿ ಮನೆಯಲ್ಲಿ ಕುರಿಸಿರುವ ಜಿಲ್ಲಾಡಳಿತ, ಗಡಿ ಪ್ರದೇಶಗಲ್ಲಿ ಬೇಕಾಬಿಟ್ಟಿ ತಪಾಸಣೆ ನಡೆಸುತ್ತಿದೆ ಎನ್ನುವುದಕ್ಕೆ ಈ ಘಟನೆ ಒಂದು ಒಳ್ಳೆ ಉದಾಹರಣೆಯಾಗಿದೆ.
ಕೊರೊನಾ ಎಮೆರ್ಜೆನ್ಸಿ ಇರುವ ಈ ಸಂದರ್ಭದಲ್ಲಿ ಇಡೀ ದೇಶ ಲಾಕ್ ಡೌನ್ ಆಗಿದೆ. ಅಲ್ಲದೆ ಯಾರೂ ಕೂಡ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚಾರ ನಡೆಸಲು ಯಾವುದೇ ರೀತಿಯ ಅವಕಾಶ ಇಲ್ಲ ಆದರೆ ಇಲ್ಲೊಂದು ಕುಟುಂಬ ಬೈಕ್ ಮೂಲಕ ತಮಿಳುನಾಡಿನಿಂದ ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮದ ಓಟಕಜೆ ಸಿ.ಆರ್.ಸಿ ಕಾಲೋನಿಗೆ ಆಗಮಿಸಿದ್ದಾರೆ.
ಒಂದು ಕುಟುಂಬ ತಂದೆ ತಾಯಿ ಸೇರಿದಂತೆ ಇಬ್ಬರು ಮಕ್ಕಳು ತಮಿಳುನಾಡಿನಿಂದ ಕಡಬಕ್ಕೆ ಬೈಕ್ ನಲ್ಲಿ ಮೆಡಿಕಲ್ ಎಮರ್ಜೆನ್ಸಿ ಸ್ಟಿಕ್ಕರ್ ಹಾಕಿಕೊಂಡು ಬಂದಿರುವುದು ವಿಶೇಷ.
ತಂದೆ, ತಾಯಿ ಮತ್ತು 2 ಮಕ್ಕಳು ಇಂದು ಬೈಕಿನಲ್ಲಿ ತಮಿಳುನಾಡಿನ ಕೋಯಂಮುತ್ತೂರಿನಿಂದ ಕರ್ನಾಟಕಕ್ಕೆ ಬಂದಿದ್ದಾರೆ.ಇವರು ಈ ತರಹ ಆಗಮಿಸುವಾಗ ಪೋಲೀಸರು ಎಲ್ಲೂ ತಪಾಸಣೆಗೆ ಒಳಪಡಿಸಿಲ್ಲವೇ ಎಂಬುದು ಆಶ್ಚರ್ಯಕರವಾದ ವಿಚಾರ ಆಗಿದೆ.
ನೂರಾರು ಕಿಮೀ ಮಕ್ಕಳ ಸಮೇತ ಇವರು ಮೆಡಿಕಲ್ ಎಮರ್ಜೆನ್ಸಿ ಸ್ಟಿಕ್ಕರ್ ಹಾಕಿಕೊಂಡು ಬಂದಿರುವ ಬಗ್ಗೆ ತನಿಖೆಯಾಗಬೇಕು ಎಂಬುದಾಗಿ ಸ್ಥಳೀಯ ಕಾಲೋನಿ ನಿವಾಸಿಗಳು ಆಗ್ರಹಿಸಿದ್ದಾರೆ. ಈ ಓಟೆಕಜೆ ಕಾಲೋನಿಯಲ್ಲಿ ಸುಮಾರು 40 ಕುಟುಂಬಗಳು ಇಲ್ಲಿ ವಾಸಿಸುತ್ತಾರೆ.ಕಾಲನಿಯಲ್ಲೂ ಈಗ ಭಯದ ವಾತಾವರಣ ಶುರು ಆಗಿದೆ.