FILM
Hot & Cute ನಟಿ ತಮನ್ನಾ ಭಾಟಿಯಾಗೆ ಮಕ್ಕಳನ್ನು ಹೆರೋಕೆ ಭಯವಂತೆ..!!!
ಹೈದ್ರಾಬಾದ್ : ಹಾಟ್ ಆ್ಯಂಡ್ ಕ್ಯೂಟ್ ನಟಿ ತಮನ್ನಾಗೆ (tamanna bhatia) ಮಕ್ಕಳನ್ನು ಹೆರೋಕೆ ಭಾರಿ ಭಯವಂತೆ. ಸಂದರ್ಶನವೊಂದರಲ್ಲಿ ಮಾತನಾಡಿದ ತಮನ್ನಾ ಭಾಟಿಯಾ ಮಕ್ಕಳನ್ನು ಹಡೆಯೋಕೆ ಏಕೆ ಭಯ ಎಂಬುದನ್ನು ರಿವೀಲ್ ಕೂಡ ಮಾಡಿದ್ದಾರೆ.
ಪಾಡ್ ಕಾಸ್ಟ್ (podcast) ಸಂದರ್ಶನದಲ್ಲಿ ಮಾತನಾಡಿದ ತಮನ್ನಾ (tamanna bhatia) ನನಗೆ ಅಮ್ಮನಾಗಲು ಭಯ. ತಾಯಂದಿರು, ತಮ್ಮ ಮಕ್ಕಳಿಗೆ ತಮ್ಮ ಸರ್ವಸ್ವವನ್ನೇ ನೀಡ್ತಾರೆ. ಮಕ್ಕಳಿಗೆ ಅಷ್ಟೊಂದು ಪ್ರೀತಿ, ಕಾಳಜಿ, ಆರೈಕೆ ಮಾಡಲು ನನ್ನಿಂದ ಸಾಧ್ಯವಿಲ್ಲ. ನನ್ನ ಪಾಲಕರು ನನಗೆ ಸಿಕ್ಕಾಪಟ್ಟೆ ಪ್ರೀತಿ ನೀಡಿದ್ದಾರೆ. ಅವರು ಕೇರ್ ಮಾಡ್ತಿರೋದನ್ನು ನೋಡಿದ್ರೆ, ಪೇರೆಂಟಿಂಗ್ ಡಿಗ್ರಿ ಪಡೆದಿದ್ದಾರೆ ಅನ್ನಿಸುತ್ತದೆ. ಆದ್ರೆ ನನ್ನಿಂದ ಇದೆಲ್ಲ ಸಾಧ್ಯವಿಲ್ಲ ಅನ್ನಿಸುತ್ತೆ. ಮಕ್ಕಳಿಗೆ ಜನ್ಮ ನೀಡಿದ ನಂತ್ರ ಏನಾಗ್ಬಹುದು ಎಂಬುದನ್ನು ಊಹಿಸಿಕೊಂಡ್ರೆ ನನಗೆ ಭಯವಾಗುತ್ತದೆ ಎಂದು ತಮನ್ನಾ ಭಾಟಿಯಾ ಹೇಳಿದ್ದಾರೆ. ನಟಿ ಮುಂದೆ ಮದುವೆ ಆದ್ರೂ ಮಕ್ಕಳನ್ನು ಮಾಡ್ಕೊಳ್ಳೋದಿಲ್ವಾ ಎನ್ನುವ ಪ್ರಶ್ನೆ, ಫ್ಯಾನ್ಸ್ ತಲೆಯಲ್ಲಿ ಕೊರೆಯೋಕೆ ಶುರುವಾಗಿದೆ.
ರಿಯಲ್ ಎಸ್ಟೇಟ್, ಜ್ಯುವೆಲರಿ, ಷೇರು ಸೇರಿದಂತೆ ಎಲ್ಲ ಕಡೆ ಹೂಡಿಕೆ ಮಾಡೋಕೆ ಇಷ್ಪಪಡುವ ತಮನ್ನಾ, ಬಾಲಿವುಡ್ ನಟ ವಿಜಯ್ ವರ್ಮಾ ಅವರೊಂದಿಗೆ ಬಹಳ ಸಮಯದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಇಬ್ಬರ ಮಧ್ಯೆ ಬಾಂಡಿಂಗ್ ಚೆನ್ನಾಗಿದೆ. ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ತಿದ್ದು, ಶೀಘ್ರವೇ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ಎನ್ನುವ ಸುದ್ದಿ ಇದೆ.
ಬಾಹುಬಲಿ ಮತ್ತು ಬಾಹುಬಲಿ-2 ಹೊರತುಪಡಿಸಿ, ತಮನ್ನಾ ಭಾಟಿಯಾ 100% ಲವ್, ಪೈಯಾ ಮತ್ತು ಸಿರುತೈ ಚಿತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿದ್ದಾರೆ. ಸದ್ಯ ಐಟಂ ಸಾಂಗ್ ಗೆ ಹೆಜ್ಜೆ ಹಾಕ್ತಿರುವ ತಮನ್ನಾ ಭಾಟಿಯಾ, ಯಾವುದೇ ಬಾಲಿವುಡ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿಲ್ಲ.