LATEST NEWS
ತಾಜ್ ಮಹಲ್ ದೇವಸ್ಥಾನವಲ್ಲ: ಪುರಾತತ್ವ ಇಲಾಖೆ ಸ್ಪಷ್ಟನೆ
ನವದೆಹಲಿ, ಆಗಸ್ಟ್ 27 : ವಿಶ್ವ ಪ್ರಸಿದ್ಧ ತಾಜ್ ಮಹಲ್ ಸಮಾಧಿಯೇ ಹೊರತು ದೇವಾಲಯವಲ್ಲ ಎಂದು ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆ ಸ್ಪಷ್ಟಪಡಿಸಿದೆ. ಆಗ್ರಾದಲ್ಲಿರುವ ತಾಜ್ ಮಹಲ್ ಜಾಗದಲ್ಲಿ ಮೊದಲು ತೇಜೋ ಮಹಾಲಯ ಎಂಬ ಶಿವನ ದೇವಾಲಯವಿದ್ದು ನಂತರ ಜಾಗವನ್ನು ಅತಿಕ್ರಮಿಸಿಕೊಂಡು ಮೊಗಲ್ ದೊರೆ ಶಹಜಾಹನ್ ತನ್ನ ತಂಡ ಹೆಂಡತಿ ಮುಮ್ತಾಜ್ ನೆನಪಿಗಾಗಿ ತಾಜ್ ಮಹಲ್ ಕಟ್ಟಿಸಿದ್ದ. ಹಾಗಾಗಿ ಇಲ್ಲಿ ಹಿಂದೂಗಳಿಗೆ ಪೂಜೆ ಮಾಡಲು ಅವಕಾಶ ನೀಡಬೇಕು ಎಂದು ಆಗ್ರಾ ಜಿಲ್ಲಾ ನ್ಯಾಯಾಲಯಕ್ಕೆ 2015 ಏಪ್ರಿಲ್ ನಲ್ಲಿ ಆರು ವಕೀಲರು ಅರ್ಜಿ ಸಲ್ಲಿಸಿದ್ದರು. ಈ ಸತ್ಯಾಸತ್ಯತೆಯನ್ನು ತಿಳಿಸುವಂತೆ ನ್ಯಾಯಾಲಯ ಸಂಸ್ಕೃತಿ ಸಚಿವಾಲಯಕ್ಕೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು ತಾಜ್ ಮಹಲ್ ಪ್ರದೇಶದಲ್ಲಿ ಶಿವನ ದೇವಾಲಯವಿತ್ತು ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ,ಬದಲಿಗೆ ಅದು ಒಂದು ಗೋರಿಯಾಗಿದೆ ಎಂದು ಅದು ನ್ಯಾಯಾಲಯಕ್ಕೆ ಲಿಖಿತ ರೂಪದಲ್ಲಿ ವರದಿ ಸಲ್ಲಿಸಿದೆ. ಕೇಂದ್ರ ಸಂಸ್ಕೃತಿ ಸಚಿವಾಲಯ 2015 ರಲ್ಲೇ ಇಲ್ಲಿ ದೇವಾಲಯ ಇಲ್ಲ ಎಂದು ಸ್ಪಷ್ಟಪಡಿಸಿತ್ತು.