BELTHANGADI
ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರೀ ವರ್ಗಾವಣೆ…..!!

ಬೆಳ್ತಂಗಡಿ : ಕಳೆದ ಮಳೆಗಾಲದಲ್ಲಿ ನೆರೆಯಲ್ಲಿ ಕೊಚ್ಚಿ ಹೋದ ಬೆಳ್ತಂಗಡಿ ತಾಲೂಕಿನಲ್ಲಿ ರಾತ್ರಿಹಗಲು ದುಡಿದ ತಹಶೀಲ್ದಾರ್ ಗಣಪತಿ ಶಾಸ್ತ್ರೀ ಯವರನ್ನು ಚಾಮರಾಜನಗರಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಹೊರಡಿಸಿದೆ.ಶಾಸ್ತ್ರಿ ಅವರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತರಾದ ಬಳಿಕ ತಹಶಿಲ್ದಾರ್ ಹುದ್ದೆಗೆ ನೇಮಕವಾಗಿದ್ದರು.
ಬೆಳ್ತಂಗಡಿಯಲ್ಲಿ ಪ್ರವಾಹ ಬಂದಾಗ ತಾವೇ ಸ್ವತಃ ತಲೆಹೊರೆ ಹೊತ್ತು ಸಾಮಾನ್ಯರಾಗಿ ಕೆಲಸ ಮಾಡಿದ್ದರು. ಅಲ್ಲದೆ ಚುನಾವಣೆ ಸಮಯದಲ್ಲಿ ತಾಲೂಕು ದಂಡಾಧಿಕಾರಿ ಆಗಿದ್ದರೂ ಮತ ಪೆಟ್ಟಿಗೆಯನ್ನು ಸಾಮಾನ್ಯ ನೌಕರನಂತೆ ತಲೆ ಮೇಲೆ ಹೊತ್ತು ಭದ್ರತಾ ಕೇಂದ್ರಕ್ಕೆ ತಲುಪಿಸಿ ನಿಜವಾದ ಜನ ಸೇವಕರಾಗಿ ಕರ್ತವ್ಯ ಮಾಡಿ ಇತರ ಅಧಿಕಾರಿಗಳಿಗೆ ಮಾದರಿಯಾಗಿದ್ದರು.

ತಾಲೂಕಿನಲ್ಲಿನ ಅಕ್ರಮ ಗಣಿಗಾರಿಕೆ ಸ್ಥಳಕ್ಕೆ ದಾಳಿ ಮಾಡಿ ಅಕ್ರಮ ನಿಲ್ಲಿಸಿದ್ದರು. ಇಷ್ಟೆಲ್ಲ ಜನ ಸೇವೆ ಆತ್ಮ ಸಾಕ್ಷಿಯಾಗಿ ಮಾಡಿದ ಗಣಪತಿ ಶಾಸ್ತ್ರಿಗೆ ಕೊನೆಗೂ ಸರ್ಕಾರ ವರ್ಗಾವಣೆಯ ಇನಾಮನ್ನು ಕೊಟ್ಟು ಗೌರವಿಸಿದೆ.. ಶಾಸ್ತ್ರಿ ಅವರ ಜಾಗಕ್ಕೆ ಚಾಮರಾಜನಗರದಲ್ಲಿ ತಹಶಿಲ್ದಾರ್ ಆಗಿದ್ದ ಮಹೇಶ್ ಅವರನ್ನು ವರ್ಗಾಯಿಸಲಾಗಿದೆ.