ಕಳೆದುಕೊಳ್ಳೊದು ! ಜ್ಞಾನೋದಯವಾಗುವುದಕ್ಕೆ ಸಮಯ ಸಂದರ್ಭ ಇರೋದಿಲ್ಲ. ಇವತ್ತು ಗಣೇಶನ ಪಕ್ಕ ಕೂತಿದ್ದೆ. ಕೊನೆಯ ಒಂದು ದಿನ ಇರೋದು ಅವನನ್ನು ವಿಸರ್ಜಿಸೋದಕ್ಕೆ, ಅದಕ್ಕೆ ಆತ್ಮೀಯತೆಯಿಂದ ಕುಶಲೋಪರಿ ನಡೆಸುವಾಗ ತಟ್ಟನೆ ಆಲೋಚನೆಯೊಂದು ತಲೆಯೊಳಗೆ ಮಿನುಗಿತ್ತು. ನಾನು ತುಂಬಾ...
ಪ್ರಶ್ನೆ ಗಣೇಶ ಅವತ್ತು ನನ್ನ ವಿದ್ಯಾರ್ಥಿಗಳ ಮನಸ್ಸಿನಲ್ಲಿ ನಿಂತು ನುಡಿಸಿದ ಕಾರಣ ಕಾಲೇಜಿನಲ್ಲಿ ಮೊದಲ ಬಾರಿಗೆ ಗಣೇಶನ ಪ್ರತಿಷ್ಠಾಪನೆಯಾಯಿತು. ಬೆಳಗಿನ ಹೊತ್ತು ಭಜನೆ ಪೂಜೆಯಾದ ನಂತರದಲ್ಲಿ ರಾತ್ರಿ ಗಣೇಶ ಒಬ್ಬಂಟಿ. ಅವನ ಜೊತೆ ಯಾರದರೂ ಇರಲೇಬೇಕು....
ಪ್ರತಿಫಲ “ಸರ್ ನಾನು ತುಂಬಾ ಜನರಲ್ಲಿ ಕೇಳಿ ಉತ್ತರ ಸಿಗದೇ ಇರುವುದಕ್ಕೆ ನಿಮ್ಮ ಬಳಿ ಕೇಳ್ತಾ ಇರೋದು?. ನನ್ನದೇ ವಯಸ್ಸಿನ ಅಥವಾ ಅದಕ್ಕಿಂತ ಸ್ವಲ್ಪ ಹಿರಿಯ ಅಥವಾ ಕಿರಿಯನಿರಬಹುದು ನಾವು ಒಂದೇ ಸಮಯದಲ್ಲಿ ಒಂದೇ ಕೆಲಸಕ್ಕೆ...
ಕ್ಷಣ ಕೆಲವೊಂದು ಕ್ಷಣಗಳು ನಮಗಾಗಿ ಕಾಯುತ್ತಿರುತ್ತದೆ. ಅದು ಘಟಿಸುವವರೆಗೆ ನಾವು ಕಾಯಲೇಬೇಕು. ಮಾತುಕತೆಗಳು ನಿಂತು ವರ್ಷಗಳೇ ಸಂದಿತ್ತು ಅವರಿಬ್ಬರ ನಡುವೆ. ನಗುವಿನೊಂದಿಗೆ ಮಾತುಕತೆಗಳು ಬೆಳೆದು ಬಾಂಧವ್ಯ ಗಟ್ಟಿಯಾಗಿರುವಾಗ ಅನಾಮಿಕರ ಮಾತುಗಳು ಸಂಬಂಧವನ್ನು ಹಾಳುಗೆಡವಿತ್ತು. ಸಿಟ್ಟಿನೊಂದಿಗೆ ಮೌನಕ್ಕೆ...
ಬಾಡು ನೀವು ಗಮನಿಸಿದ್ದೀರೋ ಇಲ್ಲವೋ ಗೊತ್ತಿಲ್ಲ ಒಂದುವಾರದಿಂದ ಸೂರ್ಯ ಬೆಳಗ್ಗಿನಿಂದ ಸಂಜೆಯವರೆಗೂ ಮೋಡದ ಮರೆಯಲ್ಲಿ ಚಲಿಸುತ್ತಿದ್ದಾನೆ. ಪ್ರಕಾಶವನ್ನು ಮೋಡ ಕರಗಿಸಲು ಬಳಸುತ್ತಿದ್ದಾನೆ. ಬಿಸಿಲಿನ ಧಗೆಯು ನೆಲಕ್ಕೆ ಹಂಚಿಕೆಯಾಗುತ್ತಿಲ್ಲ .ಕಾರಣ ಗೊತ್ತಿಲ್ಲ. ಇಂದು ಸಂಜೆ ಶರಧಿಯ ತೀರದಲ್ಲಿ...
ಹಚ್ಚೆ ಅವನದು ದುಡಿಮೆಯ ವಯಸ್ಸಾಗಿದ್ದರೂ ,ಶಿಕ್ಷಣವನ್ನ ಮನೆಯವರು ನೀಡಿದ್ದರೂ ಮನೆಯಲ್ಲೇ ತಿಂದುಂಡು ಆರಾಮವಾಗಿದ್ದ. ಗೆಳೆಯರೊಂದಿಗೆ ಆಟ, ತಿರುಗಾಟ, ಜೂಜಾಟ ದಿನಂಪ್ರತಿ ಅಭ್ಯಾಸಗಳು .ತಂದೆ ತಾಯಿ ಇಬ್ಬರೂ ಕೆಲಸಕ್ಕೆ ಹೋಗೋರು. ಇವನ ಶೋಕಿಗೆ ಅವರು ಬೆವರು ಹರಿಸೋರು....
ಹೆರಿಗೆ ಸರಕಾರಿ ಆಸ್ಪತ್ರೆ. ಸೂರ್ಯ ಏಳುವುದಕ್ಕೆ ಇನ್ನೂ ಸಮಯವಿತ್ತು. ಅವನ ಅಲರಾಂ ಬಡಿಯುತ್ತಿಲ್ಲ ಅಂತ ಕಾಣುತ್ತೆ. ಕತ್ತಲೆಯೇ ಹೆಚ್ಚು ತುಂಬಿರುವ ಅಲ್ಲಿ ಬೆಳಕಿನ ಕೋಣೆಯೊಳಗೆ ಅವಳು ಮಲಗಿದ್ದಾಳೆ. ಇಂದು ಮಗು ಜನಿಸಬಹುದು ಎಂದು ಡಾಕ್ಟರು ಹೇಳಿದ್ದಾರೆ....
ಅರಿವು ಯೋಚನೆಗಳು ಹೆಚ್ಚಾದಷ್ಟು ಕೆಲಸಗಳು ಮುಂದುವರಿತಾಯಿಲ್ಲ. ಆಗಾಗ ನಾನು ಸ್ಥಗಿತಗೊಂಡಾಗ ಇಂದು ರೀತಿ ಮೇಡಂ ಬಳಿ ಹೋಗ್ತೇನೆ. ಹಾಗೆ ಇವತ್ತು ತೆರಳಿದ್ದೆ . “ಮೇಡಂ ಪರಿಶ್ರಮ ಮಿತಿಮೀರಿ ಹಾಕ್ತಾ ಇದ್ದೇನೆ, ಪ್ರತಿಫಲಗಳು ಕಾಣುತ್ತಿಲ್ಲ. ಅದನ್ನು ನೋಡಿ...
ತ್ಯಾಗ ವೇದಿಕೆ ಮೇಲಿನ ಜನಗಳು ಹೆಚ್ಚಿದ್ದರು. ಕುಳಿತವರೇ ಬೆರಳೆಣಿಕೆಯಷ್ಟು. ತ್ಯಾಗ ಜೀವಿಗಳಿಗೆ ಸನ್ಮಾನ. ಕಾರ್ಯಕ್ರಮದ ಬ್ಯಾನರ್ ಹಳತಾಗಿತ್ತು. ವರ್ಷವೂ ನಡೆಯುವ ಕಾರ್ಯಕ್ರಮವಾದ್ದರಿಂದ ದಿನಾಂಕವೊಂದು ಬದಲಾಗುತ್ತಿದೆ. ಕೆಳಗೆ ಕುಳಿತ ಜನರೇ ತ್ಯಾಗ ಜೀವಿಗಳು. ಪ್ರಸಿದ್ಧರಾದವರು, ಎಲೆಮರೆಯ ಕಾಯಿಗಳು...
ನರ್ಸ್ “ಲೇ ನಿನಗೆ ಹೇಳೋದು ಇಷ್ಟು ದಿನ 8000 ಸಂಬಳಕ್ಕೆ ಕೆಲಸ ಮಾಡ್ತೀಯಾ? ಇದಕ್ಕಿಂತ ದೊಡ್ಡ ಕೆಲಸ ಇದೆ ಅದನ್ನು ಮಾಡು. ಇದರಲ್ಲಿ ಎಲ್ಲ ರೋಗಿಗಳು ಜೊತೆ ಇರಬೇಕು, ನಿಮ್ಮ ದುಡಿಮೆಗೆ ಸರಿಯಾದ ಸಂಬಳ ಸಿಗೋದಿಲ್ಲ....