ಕಿಡಿ ಹೊತ್ತು ತಿರುಗುತ್ತಾನೆ !.ಬೆಂಕಿಯಲ್ಲಿ ಇಟ್ಟ ಪಾತ್ರೆಯೊಳಗೆ ಅನ್ನ ಬೇಯಬೇಕಾದರೆ ಹೊತ್ತು ತಿರುಗಲೇಬೇಕು .ಸಂತೆಯೊಳಗೆ ನಿಲ್ಲಬೇಕು .ಜನರಿದ್ದಲ್ಲಿಗೆ ನಡೆಯಬೇಕು. ಇವನಿಲ್ಲದಿರೆ ಬೀಡಿ ಕಟ್ಟುವ ಎಲೆ ಕತ್ತರಿಸುವ ಕತ್ತರಿ ಹರಿತಗೊಳ್ಳೋದಿಲ್ಲ. ಅಡುಗೆಮನೆಯ ಚೂರಿ ಚೂಪಾಗೋದಿಲ್ಲ. ಕತ್ತರಿ ಹಿಡಿದಾಗ...
ಮೀನು ಕೋಲಿಡಿದು ಕೆಸರಿನ ನೆಲವ ಹುಡುಕುತ್ತಾ ಸಾಗಿದೆ. ನನಗೆ ಎರೆಹುಳು ಬೇಕಿತ್ತು. ಅದನ್ನ ತೋರಿಸಿ ಮೀನು ಹಿಡಿಯುವ ಬಯಕೆ.ಈಗ ಕೇಳಿದ್ದರೆ ಪ್ರಾಣಿಹಿಂಸೆ ಬಗ್ಗೆ ಒಂದಷ್ಟು ಭಾಷಣಗಳನ್ನು ಹೊರಡಿಸುತಿದ್ದೆ. ಆಗ ಎಲ್ಲ ತಲೆ ಮೇಲೆ ಹಾದುಹೋಗುತ್ತಿದೆ ಸಂಗತಿಗಳು....
ದುಸ್ತರ ನಾಲ್ಕು ಗೋಡೆಗಳನ್ನು ದಾಟಲೇ ಇಲ್ಲ ಸುದ್ದಿ. ಯಾಕಿರಬಹುದು? ಅದೇನು ರಸಬರಿತವಲ್ಲ! ಕಣ್ಣಗಲಿಸಿ ,ಕಿವಿಕೊಟ್ಟು ,ನಾಲಿಗೆ ಚಪ್ಪರಿಸಿ ಕೇಳುವ ಸುದ್ದಿಯಲ್ಲವಾದ ಕಾರಣ.ಬದುಕಿನ ಚಕ್ರ ಸಾಗುತ್ತಿತ್ತು ತಗ್ಗುದಿಣ್ಣೆಗಳನ್ನ, ಹೊಂಡ ಗುಂಡಿಗಳನ್ನ ನಿಭಾಯಿಸುತ್ತಾ ಸಾಗತ್ತಿದ್ದಾಗ ಕಂದಕವೊಂದು ಅಡ್ಡ ಬಂದಾಗಿತ್ತು...
ಉಳಿಸುವಿರಾ ನನಗ್ಯಾಕೋ ಕಳೆದುಹೋಗುವ ಭಯ ಆವರಿಸುತ್ತಿದೆ. ನನ್ನ ಇರುವಿಕೆಯೇ ಕಾಣದಿರುವಾಗ ಮರೆಯಾದದ್ದು ಗೊತ್ತಾಗೋದು ಹೇಗೆ ? ಅನ್ನೋದು ನಿಮ್ಮ ಪ್ರಶ್ನೆಯಲ್ಲವೆ. ನಿಮ್ಮ ಕಣ್ಣ ಮುಂದಿನ ಅಥವಾ ದೂರದ ಯಾವುದೋ ಘಟನೆ ನಿಮ್ಮ ಪ್ರತಿಕ್ರಿಯೆಗಳೇ ನನ್ನ ಸಾವು...
ಕೈ ಜಾರಿದ ಕ್ಷಣ ಅಮ್ಮನ ಕೈಹಿಡಿದಿದ್ದೆ. ಬಲವಾಗಿ ತುಂಬಾ ಬಲವಾಗಿ. ಯಾಕೆಂದರೆ ನಾವು ಸಾಗುತ್ತಿದ್ದುದು ಸಂತೆ ಮಧ್ಯದಲ್ಲಿ .ನನ್ನ ದೃಷ್ಟಿಗೆ ಹಲವಾರು ಕಾಲುಗಳ ವಿನಃ ಬೇರೇನೂ ಕಾಣುತ್ತಿಲ್ಲ. ಎಲ್ಲರ ನಡುವೆ ನುಗ್ಗುತ್ತಾ ಸಾಗಬೇಕು .ಬಿಗಿಹಿಡಿತಕ್ಕೆ ಬೆವೆತಿರುವ...
ಚಂದದ ಹುಡುಗಿ ಪಾದಗಳು ಚಪ್ಪಲಿ ಧರಿಸಿ ಮಾರ್ಗ ಬದಿ ಚಲಿಸುತ್ತಿದ್ದವು. ದಾರಿಯಲ್ಲಿ ಸಾಗುತ್ತಿದ್ದ ಹಲವು ಜೋಡಿ ಚಪ್ಪಲಿಗಳೆಲ್ಲವೂ ಅವಸರವಾಗಿದ್ದವು. ಅಲ್ಲೊಂದು ಬೆಳಕು ಬೀರಲೆಂದೇ ನಿಲ್ಲಿಸಿರುವ ವಿದ್ಯುತ್ ಕಂಬದ ಕೆಳಗೆ ಅವಳು ಕುಳಿತಿದ್ದಾಳೆ .ಅದು ಬೆಳಕು ಬೀರುವ...
ಕುರ್ಚಿ ಜಗಳ ಜೋರಾಗಿತ್ತು .ಅದೊಂದು ಆಟ. ಆದರಲ್ಲಿ ಸಿಟ್ಟು ಹೊಡೆತಗಳು ಮಾಮೂಲಿ. ಅಜ್ಜನ ಮನೆಯಲ್ಲಿ ವಿಶೇಷವಾದ ದಿನದಂದು ಒಟ್ಟು ಸೇರೋದು ವಾಡಿಕೆ. ದೊಡ್ಡವರೊಂದಿಗೆ ನಮಗೇನು ಕೆಲಸವಿಲ್ಲ .ಮನೆಗಳ ಸಮಸ್ಯೆಗಳು ,ಬೆಳೆಗಳ ಫಸಲು, ಮದುವೆಯ ಮಾತುಕತೆ, ಇದ್ಯಾವುದು...
ದಿನ ನಾನು ಹೊರಟಿದ್ದೆ .ಅವನ ಬಳಿ ತಲುಪಲು ಹನ್ನೊಂದು ದಿನಗಳ ಕಾಲಾವಕಾಶ .ಬಾಗಿಲು ತೆರೆದಿರಲಿಲ್ಲ .ಒಳಗೆ ಹೋಗಲು ಒಂದಷ್ಟು ಪ್ರಶ್ನೋತ್ತರಗಳು ಸರಿ-ತಪ್ಪುಗಳ ಲೆಕ್ಕಾಚಾರಗಳು ಮುಗಿದಮೇಲೆ ಪ್ರವೇಶವಿತ್ತು .ಹಾಗಾಗಿ ಇನ್ನೂ ನನ್ನೂರಲ್ಲಿ ಸುತ್ತಾಡುತ್ತಿದ್ದೆ. ನನಗೆ ಗೊತ್ತಿತ್ತು ನನ್ನ...
ಬಿರುಕು ಅಂಗಳದಿ ಬೆಳೆದ ಗಿಡ ಹೆಮ್ಮರವಾಗಿ ನೆರಳು ಕೊಡುತ್ತಿದೆ .ಆದರೆ ಅದರ ಬೇರುಗಳು ಭೂಮಿಯೊಳಗಿಂದ ಸಾಗಿ ಮನೆಯ ಜಗಲಿ ಒಳಗಿಂದ ಹಾದು ಗೋಡೆಗಳ ಸಂದಿಗೊಂದಿಗಳಲ್ಲಿ ನುಗ್ಗಿ ಮನೆಯ ನೆಲದಲ್ಲಿ ಬಿರುಕನ್ನು ಮೂಡಿಸಿ ಮನೆಯನ್ನು ಉರುಳಿಸಲು ಹವಣಿಸಿದೆ....
ಮನೆಯೋ- ಮನವೋ ನಾನು ತುಂಬಾ ಒಳ್ಳೆಯವನು ? ನಮ್ಮ ಮನೆಯ ಕಿಟಕಿಯಿಂದ ಎದುರುಮನೆಯ ಕೋಣೆಯೊಂದು ಕಾಣುತ್ತದೆ. ಅದನ್ನು ನೋಡಿದಾಗ ಅದು ಮಲಗುವ ಕೋಣೆಯೂ ಅಲ್ಲಾ, ಅಡುಗೆ ಕೋಣೆಯೂ ಅಲ್ಲಾ, ಇರಲಿ ಯಾವುದೋ ಒಂದು ಕೊಠಡಿ. ಯಾರಾದರೂ...