ಬದುಕು ಜಟಕಾ ಬಂಡಿ ರೈಲು ನಿಧಾನವಾಗಿ ಚಲಿಸಲು ಆರಂಭಿಸಿದೆ .ಇಲ್ಲಿಂದ ಹೊರಡುವಾಗ ಗಮ್ಯದ ಆಲೋಚನೆ ಇಲ್ಲ. ಆದರೆ ಸಾಗುತ್ತಾ ಸಾಗುತ್ತಾ ಹೋದಹಾಗೆ ಗುರಿಯ ಕಡೆಗೆ ಬೆಳಕು ಮಿನುಗುತ್ತದೆ. ರೈಲು ತುಂಬಾ ಶ್ರಮಪಟ್ಟು ತನ್ನ ಆರಂಭವನ್ನು ಕಂಡಿದೆ....
ಅವಳಿಗೆ ಅವನು ಅವಳಿಗೋ ಅವನೇ ಆಸರೆ. ಹೆಜ್ಜೆ ಇಡುವುದರಿಂದ ಹಿಡಿದು ಜಗತ್ತು ಕಾಣುವವರೆಗೆ. ದೃತರಾಷ್ಟ್ರನಿಗೆ ಸಂಜಯನಂತೆ .ಸೂರ್ಯ ಕಣ್ಣುಬಿಟ್ಟ ಗಳಿಗೆ ಜಗತ್ತೆಲ್ಲ ಬಣ್ಣಗಳ ಒಳಗೆ ಮಿಂದೆದ್ದರು ಅವಳಿಗೆ ಕಪ್ಪೊಂದೇ ಕಾಣುವ ಬೆಳಕು . ಒಂದಿನಿತೂ ಬೇಸರವಿಲ್ಲ....
ಘೋಷಣೆ ನಾನೇ ಕಿವಿ ಮೆಚ್ಚಿಕೊಳ್ಳಬೇಕೋ, ಅವರನ್ನು ಹೊರಗೆ ಹೊರದಬ್ಬಬೇಕೋ, ಜೋರಿನಿಂದ ನನ್ನೆದೆಯ ವಾಕ್ಯವನ್ನು ಘೋಷಣೆ ಮಾಡಬೇಕೋ ತೋಚುತ್ತಿಲ್ಲ. ಅನ್ನ-ನೀರು ನನ್ನೂರಿನದ್ದಾದಾಗ ಬದುಕಿನ ಋಣ ಇಲ್ಲಿಯದ್ದಾಗಬೇಕಲ್ಲಾ . ಅದೇಕೆ ಆ ದೇಶ ಅವರಿಗೆ ಅಷ್ಟೊಂದು ಆಪ್ಯಾಯಮಾನವಾಗುತ್ತದೆ. ನನ್ನೂರಿನ...
ದಹಿಸು ಅವರವರು ಅವರ ಧರ್ಮ ಕರ್ಮಗಳನ್ನು ನಿಯಮದಿಂದ ಮಾಡಿದರೆ ಯಾರಿಗೂ ನೋವಿಲ್ಲ. ಆದರೆ ನನಗೇಕೋ ನನ್ನ ಕಾರ್ಯದ ಮೇಲೆ ಇವತ್ತು ಅಸಹ್ಯ ಹುಟ್ಟಿದೆ. ನಾ ಆ ಕಾರ್ಯ ಕೈಗೊಳ್ಳಬಾರದಿತ್ತು. ನಿಮಗ್ ಅರ್ಥವಾಗುತ್ತಿಲ್ಲ ?ಅಲ್ವಾ. ಸರಿ ವಿವರಿಸುತ್ತೇನೆ....
ಅವನು ನಾನವನ ಜೊತೆ ಮಾತನಾಡದೆ ಹಲವು ವರ್ಷಗಳೇ ದಾಟಿದ್ದವು. ನನ್ನೊಳಗೆ ಆಲೋಚನಾ ಬುದ್ಧಿ ನಡೆದಾಡಿದ ದಿನದಿಂದ ಅವನ ಜೊತೆ ಮಾತಾಡಿಲ್ಲ. ಈ ದಿನ ಎಲ್ಲ ಕೆಲಸಬಿಟ್ಟು ಅಲ್ಲೊಂದು ಕುರ್ಚಿ ಮೇಲೆ ಕೂತು ಮಾತುಕತೆ ಆರಂಭ ಮಾಡಿದೆವು....
ಹೀಗಾದರೆ ಸುತ್ತ ಒಂದು ಕಿಲೋಮೀಟರ್ ಯಾವುದೇ ಮನೆ ಇಲ್ಲ .ಕಾಡಿನ ನಡುವೆ ಅದೊಂದೇ ಬಂಗಲೆ. ಅರಚಿ ಕಿರುಚಿದರು ಪಕ್ಕ ಯಾರೂ ಸುಳಿಯೋದಿಲ್ಲ . ಆಗಲೇ ಮೂರು ಜನ ಮುಸುಕುಧಾರಿಗಳು ಒಬ್ಬನನ್ನು ಎಳೆದುತಂದು ಮನೆಯೊಳಕ್ಕೆ ನಡೆದರು. ಆತನ...
ಮೂರ್ತಿ ಕಲ್ಲಿನೊಳಗಿನ ಮೂರ್ತಿ ನಿಧಾನವಾಗಿ ಕಾಣಲಾರಂಭಿಸಿದೆ .ಸತೀಶನ ಕೈಚಳಕವೇ ಅಂತಹುದು. ಮನಸ್ಸಿನಲ್ಲಿ ಧ್ಯಾನಿಸಿ ಉಳಿ ಸುತ್ತಿಗೆ ಹಿಡಿದು ಕೆತ್ತನೆ ಆರಂಭಿಸಿದರೆ ಮೂರ್ತಿಯಾಗದೆ ನಿಲ್ಲುವವನಲ್ಲ. ಶುದ್ಧ ಆಚಾರ-ವಿಚಾರಗಳೊಂದಿಗೆ ತನ್ಮಯತೆಯ ಚಿನ್ಮಯ ಮೂರ್ತಿ ಕಣ್ಣೆದುರು ನಿಲ್ಲುತ್ತದೆ. ಅದನ್ನು ದೇವಾಲಯಕ್ಕೆ...
ಕನ್ನಡಿ ಒಡೆದ ಕನ್ನಡಿಯಲ್ಲಿ ಅವಳ ಪ್ರತಿಬಿಂಬ ಕಾಣುತ್ತಿದೆ .ಪ್ರತಿಯೊಂದು ತುಂಡಿನಲ್ಲೂ ಅವಳ ಕಣ್ಣೀರು ಇಳಿಯುತ್ತಿದೆ. ಗಾರೆ ಕೆಲಸದ ದುಡಿಮೆ ಅನಿವಾರ್ಯ. ಊರುಬಿಟ್ಟು ಊರಿಗೆ ಬಂದು ,ನೆಲದ ಮೇಲೆ ಬೀಳುವ ಪರಿಸ್ಥಿತಿಯಲ್ಲಿರುವ ಗೋಡೆಯ ಒಳಗೆ ಜೀವಿಸಿದ್ದಾಳೆ. ಕೆಲಸದ...
ನಾಟಕೀಯ ಬದುಕು ಅನಾಥಳೋ, ದಿಕ್ಕುತಪ್ಪಿದವಳೋ, ಎಲ್ಲಿಂದ ತಪ್ಪಿಸಿಕೊಂಡಳೋ ಗೊತ್ತಿಲ್ಲ .ಮುಖದಲ್ಲಿ ಗಾಬರಿ ,ಕಣ್ಣಲ್ಲಿ ಹಸಿವು ,ಮಣ್ಣಾದ ಬಟ್ಟೆ. ಆಗಾಗ ಹಿಂತಿರುಗಿ ನೋಡುತ್ತಾ ಏದುಸಿರು ಬಿಡುತ್ತಾ ಓಡುತ್ತಾ ನಡೆಯುತ್ತಿದ್ದಾಳೆ. ವೇಗವಾಗಿದ್ದ ಪಾದಗಳು ತಡೆದು ನಿಲ್ಲಿಸಿ ರಸ್ತೆಬದಿಯಲ್ಲಿ ಕೂರಲು...
ನಿರ್ಣಯ ಸಭೆ ಸೇರಬೇಕೆಂಬ ತೀರ್ಮಾನ ವಾಟ್ಸಪ್ ನಲ್ಲಿ ಬಂತು. ನಮ್ಮೂರ ಶಾಲೆಯ ಏಳನೇ ತರಗತಿಯ ಕೊಠಡಿಯಲ್ಲಿ . ಹಲವಾರು ನಿರ್ಧಾರಗಳು ಬಾಕಿ ಇದರಿಂದ ಪುಸ್ತಕದಲ್ಲಿ ಪಟ್ಟಿ ಮಾಡಿಕೊಂಡು ಎಲ್ಲರೂ ಬಂದಿದ್ದರು .ಈ ಸಲ ನಮ್ಮೂರಿನ ಒಳಿತಿಗೆ...