SOMEಗೀತ ಜನ ಮಲಗಿದ್ದರೂ ಊರು ಮಲಗಿರಲಿಲ್ಲ. ಅಲ್ಲಲ್ಲಿ ಬೆಳಕಿತ್ತು, ಕೆಲವೊಂದು ಚಕ್ರಗಳು ರಸ್ತೆ ಮೇಲೆ ಚಲಿಸುತ್ತಿದ್ದವು ,ನಾಯಿಗಳ ಸವಾರಿ ಆರಂಭವಾಗಿತ್ತು. ಅದೇನು ತಿರುವಿನಿಂದ ಕೂಡಿದ ಜಾಗವಲ್ಲ !.ಹೊಂಡ ಗುಂಡಿಯಿಲ್ಲ. ಅಲ್ಲಿ ಆತ ಗಾಡಿಯಿಂದ ಕೆಳಕ್ಕೆ ಬಿದ್ದ....
ಆಸೆ ಎಲ್ಲರ ಚಪ್ಪಾಳೆಗಳು ನಿಂತರೂ ಆತ ನಿಲ್ಲಿಸಿಲ್ಲ. ಮೊಗದಲ್ಲೊಂದು ಸಂಭ್ರಮವಿದೆ, ಮಗಳನ್ನ ವೇದಿಕೆಯಲ್ಲಿ ಕಂಡಾಗ ಕಡೆಯ ಸಾಲಲ್ಲಿ ಕೂತು ಆನಂದಿಸುವ ಖುಷಿಯಿದೆ. ಮಧ್ಯಮವರ್ಗದ ಮನೆ ಇದಕ್ಕಿಂತ ಚೆನ್ನಾಗಿ ಮನೆಯ ಪರಿಸ್ಥಿತಿ ವಿವರಿಸುವುದು ಹೇಗೆ?. “ಕಾಲಿಗೆ ಎಳೆದರೆ...
ಬಾಂಧವ್ಯ ಈ ಗೋಡೆಯ ಹುಸಿರು ಪಕ್ಕದ ಗೋಡೆಗೆ ತಾಕುವಷ್ಟು ಹತ್ತಿರದಲ್ಲಿದೆ ಆ ಎರಡು ಮನೆಗಳು. ಆ ದಿನ ಎರಡು ಮನೆಯಲ್ಲಿ ಮೌನವೇ ಧರಣಿ ಕುಳಿತಂತಿದೆ. ಸುರೇಶಣ್ಣ ಅಂಗಡಿಗೂ ಹೋಗದೆ ಮನೆಯ ಕೋಣೆಯೊಂದರಲ್ಲಿ ಕತ್ತಲಲ್ಲಿ ಕುಳಿತಿದ್ದಾರೆ ....
ವಿಪರ್ಯಾಸ ಹಿಮಗಿರಿಯ ಮೇಲೆ ಧಿರಿಸು ದರಿಸಿ ಕಾಯುತ್ತಿರುವ ಸೈನಿಕ ಅವನು. ಮಂಜಿನ ಮಳೆಯೇ ದಿನವು ಹನಿಯುತ್ತಿರುವ ಜಾಗ. ರೆಪ್ಪೆಗಳ ಅಲಗಿನ ಮೇಲೆ ಬಿಳಿ ಮಂಜು ಕ್ಷಣ ಬಿಡದೆ ಸುರಿದರೂ ಆತ ರೆಪ್ಪೆ ಅಲುಗಿಸದೆ ಬಂದೂಕು ಹಿಡಿದು...
ಭ್ರಮಾಲೋಕ ಗೋಡೆಯ ಮೂಲೆಯಲ್ಲಿ ನಿಂತಿರುವ ಟೀವಿಯೊಳಗಿನ ದೃಶ್ಯವೊಂದು ಆ ಮನೆಯ ಹೆತ್ತವರಲ್ಲಿ ಆಸೆ ಹುಟ್ಟಿಸಿದೆ. ಪ್ರತಿಭಾ ಪ್ರದರ್ಶನದ ವೇದಿಕೆ, ಅದ್ಭುತ ಬೆಳಕಿನ ವಿನ್ಯಾಸ, ಯಾವುದು ಮಗುವಿನ ತುಂಟಾಟ ,ತೊದಲು ನುಡಿ ,ಕುಣಿತದ ನಾಜೂಕು ,ರಾಗದ ಆಲಾಪ,...
ಕತೆ ಹೇಳಿದ ಕುದುರೆ ನನ್ನನ್ನಾರು ನೆನಪಿಟ್ಟುಕೊಳ್ಳುತ್ತಾರೆ ? ಇತಿಹಾಸವನ್ನೊಮ್ಮೆ ಕೆದಕಿದರೆ ನೀವು ಹುಬ್ಬೇರಿಸುತ್ತೀರ. ಕಾಡಿನ ನಡುವೆ ಹಸಿರು ಮೇಯುತ್ತಾ ಸ್ವಾಭಿಮಾನಿಯಾಗಿದ್ದ ನನ್ನ ಸಾಕುಪ್ರಾಣಿಯಾಗಿಸಿದವರು ನೀವು. ನನ್ನಾಸೆಯನ್ನು ಮುಷ್ಟಿಯೊಳಗೆ ಇರಿಸಿ ನಿಮ್ಮ ನಡೆಗೆ ಸೇವಕನಾದೆ. ದಾರಿ ಬಿಟ್ಟು...
ಮಳೆಗೆ ಕಾರಣ ನಡು ಬೇಸಿಗೆಯ ಸುಡುವ ಕಾಲ . ಸೂರ್ಯನಿಗೇ ತನ್ನ ಏರುತ್ತಿರುವ ಬಿಸಿಯನ್ನು ನಿಯಂತ್ರಿಸಲಾಗುತ್ತಿಲ್ಲ .ಆಗಾಗ ಅಡ್ಡ ಬಂದು ಒಂದಷ್ಟು ಭೂಮಿಗೆ ನೆರಳು ನೀಡುತ್ತಿರುವ ಮೋಡ ದೂರದಲ್ಲೇ ಓಡಾಡುತ್ತಿದೆ .ಆ ಗುಡ್ಡದಮೇಲೆ ಗಟ್ಟಿ ಕಲ್ಲಿನ...
ಕಳೆದುಕೊಂಡೆ ಕಳೆದುಕೊಂಡಲ್ಲಿ ಹುಡುಕಬೇಕು ದೊಡ್ಡೋರು ಈ ಮಾತನ್ನು ಹೇಳಿದ್ದಾರೆ. ಆದರೆ ನನಗೆ ಎಲ್ಲಿ ಕಳೆದುಕೊಂಡೆ ಅನ್ನೋದೇ ಗೊತ್ತಾಗುತ್ತಿಲ್ಲ. ಅಲ್ಲೊಂದು ನಮ್ಮೂರಿನ ಹಳೆ ದೇವಾಲಯದ ಗೋಪುರದ ಮೇಲೆ ದೊಡ್ಡ ದೊಡ್ಡ ಕಲ್ಲು ಇಟ್ಟು ಕೆತ್ತನೆ ಮಾಡಿದ್ದಾರೆ ,ಆಗ...
ಬದುಕೊಂದರ ತಿರುಗಾಟ ಬೆಳಕಿನ ಚಿತ್ತಾರ ಕಣ್ಣೊಳಗಿನ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಿದೆ. ಎಲ್ಲಾ ವಿದ್ಯುತ್ ಅಲಂಕಾರ ದೀಪಗಳು ವಿವಿಧ ಬಗೆಯ ನೃತ್ಯವನ್ನು ಮಾಡುತ್ತಲಿದೆ. ದೇವಾಲಯ ದ್ವಾರದಿಂದ ಹಿಡಿದು ಅಂಗಣದವರೆಗೂ ಮನಸ್ಸು ಮುದಗೊಳಿಸುವ ಅಲಂಕಾರವಿದೆ. ಅಲ್ಲೊಂದು ದೀಪದ ಕಂಬದ ಕೆಳಗೆ...
ಅವಳು “ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ ಬಾಡಿ ಹೋಗುವ ಮುನ್ನ ಕೀಳುವವರು ಯಾರೆಂದು “ಹಾಡು ಮೊಬೈಲ್ ಒಳಗಿಂದ ಪಿಸುಗುಡುತ್ತಿದೆ. ಅವಳ ಕಣ್ಣೀರು ರಾಗಕ್ಕನುಗುಣವಾಗಿ ಇಳಿಯುತ್ತಿತ್ತು. ನಾನಿಲ್ಲಿ ನೋಟಗಾರ ಮಾತ್ರ .ಅವಳ ಅಂತರಂಗದೊಳಗೆ ಇಳಿದು ಭಾವನೆಗಳನ್ನ ಹೆಕ್ಕಿ...