ಕಾರ್ಕಳ, ಜುಲೈ 23: ಅನಾರೋಗ್ಯದ ಕಾರಣದಿಂದ ರಾಜ್ಯ ಮಟ್ಟದ ಕಬಡ್ಡಿ ಆಟಗಾರ, ಹೆಬ್ರಿ ತಾಲ್ಲೂಕು ಮುದ್ರಾಡಿಯ ಬಲ್ಲಾಡಿ ನಿವಾಸಿ ಸುಶಾಂತ್ ಶೆಟ್ಟಿ (32) ನಿನ್ನೆ ರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರು ಇಲಿ ಜ್ವರದಿಂದ ಮೃತಪಟ್ಟಿದ್ದಾರೆ...
ಉಡುಪಿ ಜುಲೈ 23: ರಾಷ್ಟ್ರೀಯ ಹೆದ್ದಾರಿ 66 ರಲ್ಲಿರುವ ಹೊಂಡಗಳಿಂದಾಗಿ ದಿನ ಅಪಘಾತಗಳು ನಡೆಯುತ್ತಿವೆ. ಇಂದು ಇಂದು ಬೆಳ್ಳಂಬೆಳ್ಳಗೆ ಕಾಪುವಿನಲ್ಲಿ ಕಾರೊಂದು ರಸ್ತೆ ಹೊಂಡಕ್ಕೆ ಬಿದ್ದು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ನಡೆದಿದೆ....
ಉಡುಪಿ, ಜುಲೈ 21: ಕುಡಿದ ಮತ್ತಿನಲ್ಲಿ ತಾಯಿಯನ್ನು ಹಿಯಾಳಿಸಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬನನ್ನು ಮರದ ತುಂಡಿನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ತಮಿಳುನಾಡು ಮೂಲದ ಕುಮಾರ್(32) ಎಂದು ಗುರುತಿಸಲಾಗಿದೆ. ಕುಟ್ಟಿ...
ಉಡುಪಿ ಜುಲೈ 21: ಹಿರಿಯ ಚಿಂತಕ ವಿಮರ್ಶಕ ಹೋರಾಟಗಾರ ಜಿ. ರಾಜಶೇಖರ್ ಅನಾರೋಗ್ಯದಿಂದ ಉಡುಪಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೋಮುವಾದದ ವಿರುದ್ದ ಧ್ವನಿ ಎತ್ತಿ ಅದರ ವಿರುದ್ದ ನಡೆಯುತ್ತಿದ್ದ ಎಲ್ಲಾ ಹೋರಾಟಗಳಲ್ಲಿ ರಾಜಶೇಖರ್ ಮುಂಚೂಣಿಯಲ್ಲಿರುತ್ತಿದ್ದರು. ಅಲ್ಲದೆ...
ಬೈಂದೂರು, ಜುಲೈ 15: ಹೇನುಬೇರು ಗ್ರಾಮಕ್ಕೆ ತೆರಳುವ ಮಾರ್ಗದಲ್ಲಿ ಸುಟ್ಟುಹೋದ ಸ್ಥಿತಿಯಲ್ಲಿ ಕಾರು ಹಾಗೂ ಅದರೊಳಕ್ಕೆ ವ್ಯಕ್ತಿಯ ಮೃತದೇಹ ಪತ್ತೆಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಜಾಡು ಹಿಡಿದು ಹೊರಟ ಬೈಂದೂರು ಪೊಲೀಸರು, ಓರ್ವ ಮಹಿಳೆ ಸೇರಿದಂತೆ...
ಉಡುಪಿ, ಜುಲೈ 13: ಸಂಸತ್ ಮುಂದಿನ ರಾಷ್ಟ್ರ ಲಾಂಛನದ ಚರ್ಚೆ ಬಗ್ಗೆ ಈಗಾಗಲೇ ಸ್ಪಷ್ಟತೆ ಕೊಡಲಾಗಿದೆ. ನಮ್ಮದು ಘರ್ಜಿಸುವ ಸಿಂಹ, ಕಾಂಗ್ರೆಸ್ನದ್ದು ಮಲಗಿದ ಸಿಂಹ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟಾಂಗ್ ನೀಡಿದರು. ಉಡುಪಿಗೆ ಭೇಟಿ ನೀಡಿದ...
ಬ್ರಹ್ಮಾವರ ಜುಲೈ 12: ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಬೆಂಗಾವರು ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಪಲ್ಟಿಯಾದ ಘಟನೆ ಸಂತೆಕಟ್ಟೆ ಕೆಜಿ ರೋಡ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಈ ಘಟನೆಯಲ್ಲಿ ಪೊಲೀಸ್ ಸಿಬ್ಬಂದಿಗಳು...
ಉಡುಪಿ ಜುಲೈ 12: ಮೀನು ಸಾಗಾಟದ ಟೆಂಪೊ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಪಾಂಗಾಳ ಸೇತುವೆಯಲ್ಲಿ ನಡೆದಿದೆ. ಉಡುಪಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಮಿನಿ ಟೆಂಪೋ ಚಾಲಕನ...
ಕೋಟ ಜುಲೈ 12: ಮಳೆಯಲ್ಲಿ ಆಡದಂತೆ ತಾಯಿ ಬುದ್ದಿ ಹೇಳಿದ್ದಕ್ಕೆ 9ನೇ ತರಗತಿ ಬಾಲಕನೊಬ್ಬ ಕೋಪಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬ್ರಹ್ಮಾವರ ತಾಲೂಕಿನ ಕಾರ್ಕಡದಲ್ಲಿ ನಡೆದಿದೆ. ಮೃತ ಬಾಲಕನನ್ನು ಕಾರ್ಕಡ ನಿವಾಸಿ ಲಕ್ಷ್ಮಿ...
ಉಡುಪಿ, ಜುಲೈ 11: ಜಿಲ್ಲೆಯಲ್ಲಿ ಸುರಿದ ಭಾರೀ ಮಳೆ ಕಡಲ್ಕೊರೆತಕ್ಕೆ ಕಾರಣವಾಗಿದೆ. ಕಡಲ್ಕೊರೆತಕ್ಕೆ ತುತ್ತಾದ ಪ್ರದೇಶಕ್ಕೆ ಸಚಿವೆ ಶೋಭಾ ಕರಂದ್ಲಾಜೆ ಇಂದು ಭೇಟಿ ನೀಡಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಧಿಕಾರಿಗಳು ಕೂಡಲೇ ವರದಿಯನ್ನು ಸರ್ಕಾರಕ್ಕೆ...