ಸಂಸಾರಿ? ಅವಳು ಜೀವ ನೀಡುವವಳು. ಜೀವವೊಂದನ್ನು ಉದರದೊಳಗೆ ಪೋಷಿಸಲಾರಂಬಿಸುವಾಗ ನಾನು ಜೊತೆಗಿರಬೇಕು. ಅವಳ ಬಯಕೆಗಳು ಏನು ಎಂಬುದು ನನಗೆ ತಿಳಿಯಬೇಕಾದರೆ ನಾನು ಅವಳ ಕೈ ಹಿಡಿದಾಗಿನಿಂದ ಅವಳನ್ನ ಅರ್ಥೈಸಿಕೊಂಡಿರಬೇಕು. ಅವಳ ಮನಸ್ಸಿನ ಆಳ ಸಿಗುವುದು ಕಷ್ಟವಾದರೂ...
ಉತ್ತೀರ್ಣ ಅಲ್ಲಿ ಘೋಷಣೆಯಾಗಿದೆ .”ಎಲ್ಲರನ್ನು ಮುಂದಿನ ಮೆಟ್ಟಿಲಿಗೆ ವರ್ಗಾಯಿಸಿ” ಶಾಲೆಯ ಅಧ್ಯಾಪಕರು ದಾಟಿಸಿದರು. ಈಗ ಶಿಕ್ಷಕರು ಮಾತನಾಡುತ್ತಿದ್ದಾರೆ “ಅಲ್ಲಾ ನೀವು ಹೇಳಿದ್ದಕ್ಕೆ ನಾವು ದಾಟಿಸಿದ್ದೇವೆ. ಹೀಗೆ ದಾಟಿದವರಲ್ಲಿ ಎಷ್ಟು ಜನ ಅಲ್ಲಿ ನಿಲ್ಲಲು ಅರ್ಹರಾಗಿದ್ದಾರೆ. ಮತ್ತೆ...
ಪದಕ ಚಿನ್ನ, ಬೆಳ್ಳಿ ,ಕಂಚುಗಳು ಬೇರೆಬೇರೆಯಾಗಿ ಕರಗುತ್ತಿವೆ .ಅಲ್ಲೇ ಮೂಲೆಯಲ್ಲಿ ಕಬ್ಬಿಣವೂ ಕೂಡ ಕಾದು ನೀರಾಗುತ್ತಿದೆ. ಇವೆಲ್ಲವನ್ನು ತಾಳಿಕೊಳ್ಳಲೇ ಬೇಕು. ಬಿಸಿಯನ್ನು ಅರ್ಧದಲ್ಲಿ ನಿಲ್ಲಿಸುವ ಹಾಗಿಲ್ಲ. ಘನವು ದ್ರವವಾಗಲೇ ಬೇಕು ಯಾಕೆಂದರೆ ರೂಪ ಪಡೆದುಕೊಳ್ಳಲು. ಅವುಗಳಿಗೂ...
ಖಾಲಿ ಧೂಳಿನ ಕಣಗಳು ಹಾರಿ ಬರುತ್ತವೆ .ತಲೆಗೆ ಸೂರಿಲ್ಲದೆ ನೀರು ಹನಿಯುತ್ತದೆ, ಚಕ್ರಗಳು ನೀರಿನ ಹನಿಗಳನ್ನು ನೇರವಾಗಿ ಸಿಂಪಡನೆ ಮಾಡುತ್ತದೆ. ಇದೆಲ್ಲವನ್ನು ತಡೆಹಿಡಿದು ಆಕೆ ಹಣ್ಣು ಮಾರುತ್ತಾಳೆ. ಪ್ರತಿದಿನ ಮುಂಜಾನೆ ಯಜಮಾನರ ತೋಟಕ್ಕೆ ಹೋಗಿ ಅವರು...
ಅಂತೆ.. ನಿಮಗೆ ಗೊತ್ತಾ!!! ಅದೊಂದು ರಾಜ್ಯದಲ್ಲಿ ಒಂದಷ್ಟು ಕೋಟಿ ಕೊಟ್ರೆ ಮಂತ್ರಿ ಮಾಡುತ್ತಾರಂತೆ. ಮತ್ತೊಂದು ವಿಷಯ ಆ ಸರ್ಕಾರದ ಪ್ರತಿ ಮಿನಿಸ್ಟರು ಅವರ ಮೇಲಿನವರಿಗೆ ತಿಂಗಳಿಗೆ ಇಂತಿಷ್ಟು ಕೋಟಿ ಕಳಿಸಬೇಕಂತೆ. ಅವರು ಇದ್ದಾರಲ್ಲಾ !!! ಹಾ!...
ಊರ್ಮಿಳೆ ಕಥನವಾಗಿಸುವಾಗ ಆಕೆ ಅಕ್ಷರದೊಳಗೆ ಕಾಣಲಿಲ್ಲ. ಕಾವ್ಯ ಮೆರೆಯುವಾಗ ಆಕೆಯ ಸ್ವರ ಕೇಳಲೇ ಇಲ್ಲ. ಆಕೆ ಮೂಲೆಗುಂಪಾದವಳು. ತವರು ಮನೆ ತೊರೆದು ಬಂದು ತನ್ನ ಗಂಡನೊಂದಿಗೆ ಬಾಳಬೇಕೆಂದು ಕನಸುಕಂಡವಳಿಗೆ ಗಂಡ ತನ್ನ ಅಣ್ಣನೊಂದಿಗೆ ಹೊರಟು ನಿಂತಾಗ...
ಪ್ರಶ್ನೋತ್ತರ “ಬ್ಯಾಗ್ ಯಾಕೆ ಇಟ್ಟಿದ್ದೀರಿ? ಇದು ನನ್ನ ಜಾಗ” “ಮೇಡಂ ನಾನು Startb point ಇಂದನೆ ಹತ್ತಿದವ ,ಆಗಲೂ ಇಲ್ಲೇ ಕುಳಿತಿದ್ದೆ. ನಿಮ್ಮ ಸ್ಥಳ ಇದಲ್ಲ ಅದು” ” ನನಗೆ ಗೊತ್ತಿಲ್ಲ ಈಗ ಖಾಲಿ ಇತ್ತು...
ಮಗಳು ಮರೆಯುತ್ತಾರೆ ಮಗಳೇ, ಖಂಡಿತವಾಗಿ ಎಲ್ಲರೂ . ಗೆಲ್ಲುವಿದ್ದರೆ ಜೊತೆಗಿರುವರು. ನೀನು ಸೋತಿದ್ದೀಯಾ ಹಾಗಾಗಿ ನೀನು ಅವರ ನೆನಪಿನಲ್ಲಿ ಇಲ್ಲ. ನೀನು ಹಿಂದೊಮ್ಮೆ ಗೆದ್ದಾಗ ಎಷ್ಟು ಕುಣಿಸಿದವರು ನಿನ್ನ ಮೆರೆಸಿದವರು ಇವರೇ. ಆದರೆ ನಿನ್ನ ಇಂದಿನ...
ರಿಮೋಟ್ ಲೋ ಅಣ್ಣ ಏನಾಗಿದೆಯೋ ನಿನಗೆ? ನಾನೇನಾದ್ರೂ ತೊಂದರೆ ಕೊಟ್ಟಿದ್ದೇನಾ, ಇಲ್ಲಾ ತಾನೇ. ನಾನ್ಯಾರು ಅಂತನಾ?.ನಾನೇ ಮಾರಾಯ “ರಿಮೋಟು” ನಿನ್ನ ಇಷ್ಟಗಳನ್ನು ನಾನು ರೂಪಿಸುತ್ತೇನೆ.ನನ್ನಿಂದಲೇ ಬದಲಾವಣೆಗಳು ಸಾಧ್ಯವಾಗುತ್ತದೆ. ಟಿವಿಯಲ್ಲಿ ಏನಾದರೂ ತೊಂದರೆ ಇದ್ದರೆ ,ನನ್ನ ಬ್ಯಾಟರಿಯಲ್ಲಿ...
ಕ್ಯಾಮರಾ ಕ್ಯಾಮೆರಾ ಯಾವತ್ತೂ ನನ್ನ ಮನೆಯನ್ನು ಹುಡುಕಿ ಬಂದಿರಲಿಲ್ಲ. ನಾನು ಎಷ್ಟು ಅಲೆದರೂ ಅದು ನನ್ನನ್ನು ತಿರುಗಿಯೂ ನೋಡಲಿಲ್ಲ. ಅವತ್ತು ಅಪ್ಪನ ಹೆಣ ಮರದಲ್ಲಿ ನೇತಾಡಿದಾಗ ಒಂದೆರಡು ನಿಮಿಷದಲ್ಲಿ ನನ್ನ ಮುಂದಿನಿಂದ ಹಾದುಹೋಯಿತು. ಇಲ್ಲಾ ಈ...