ಬದುಕಿನ ರಂಗೋಲಿ ಆ ಮನೆಯ ರೂಪದಲ್ಲಿ ಏನು ಬದಲಾವಣೆಯಾಗಿಲ್ಲ. ಸದ್ದುಗದ್ದಲ ಮಾತುಕತೆ ತುಂಬಿದ್ದ ಮನೆ ಮೌನವಾಗಿದೆ .ಮನೆಯ ಹಿರಿಯರ ಭಾವಚಿತ್ರ ಗೋಡೆಗೆ ತೂಗು ಬಿದ್ದಿದೆ. ಎಲ್ಲರ ಗುಂಪು ನಗುವಿನ ಫೋಟೋ ಕೂಡ ಅದರ ಪಕ್ಕದಲ್ಲಿ ಇದೆ....
ಚಪ್ಪಲಿ ಒಂದು ವಾರ ಮನೆಯಿಂದ ಹೊರ ಬರುವ ಹಾಗಿರಲಿಲ್ಲ. ಕರ್ಫ್ಯೂ ಜಾರಿಗೊಳಿಸಿದ್ದರು. ಯಾವುದೋ ವಿಷಯಕ್ಕೆ ಜಾತಿಯ ಸಣ್ಣ ಕಿಡಿ ಜ್ವಾಲಾಮುಖಿಯಾಗಿ ಹೋಗಿತ್ತು. ಕಲ್ಲು, ಕೋಲು, ಕತ್ತಿಗಳು ಮಾತನಾಡುತ್ತಿದ್ದವು. ಪೊಲೀಸರು ಬಂದು ಲಾಠಿಚಾರ್ಜ್ ಮಾಡಿ ಗಾಳಿಯಲ್ಲಿ ಗುಂಡು...
ಹೊಳೆ ಇಂದು ಸಂಜೆ ಸೂರ್ಯ ಬಿಡಿಸಿದ ರಂಗಿನ ಚಿತ್ತಾರವನ್ನ ಮಳೆರಾಯ ತೋಯಿಸುತ್ತಾ ಕರಗಿಸಿದ. ಮೋಡಗಳನ್ನ ಯಾರೋ ಮುಂದೆ ಸಾಗಲು ಬಿಡುತ್ತಿಲ್ಲ ಎನ್ನುವಂತೆ ಆ ಊರಿನಲ್ಲಿ ಮಾತ್ರ ಧಾರಾಕಾರವಾಗಿ ಮಳೆ ಸುರಿಯಿತು. ಈ ಮಳೆ ಭಯವನ್ನು ಹುಟ್ಟಿಸಿದರು...
ಹೆಸರಿಲ್ಲದ ಊರು ಅಲ್ಲೊಂದು ಊರಿದೆ. ಮೊದಲದು ಊರಾಗಿರಲಿಲ್ಲ. ದೂರದೂರದ ಬೇರೆಬೇರೆ ಜನ ದುಡಿಮೆಯ ನಂಬಿ ಇಲ್ಲಿಗೆ ಬಂದು ನಿಂತ ಮೇಲೆ ಈಗ ಅದು ಊರಾಗಿ ಜನವಸತಿಯ ಸ್ಥಳವಾಗಿ ಮಾರ್ಪಾಡಾಗಿದೆ. ನಮಗೆಲ್ಲರಿಗೂ ಹೆಸರಿದೆ ,ಅದಕ್ಕೊಂದಿಷ್ಟು ಪದವಿಗಳು, ಸಾಧನೆಗಳು,ಜೊತೆಗೆ...
ವಿಚಿತ್ರ ಆಲೋಚನೆ ಚಿದಂಬರನನ್ನು ಸುಲಭದಲ್ಲಿ ಅರ್ಥೈಸಿಕೊಳ್ಳಲಾಗುವುದೇ ಇಲ್ಲ. ಎಲ್ಲರೂ ಅದ್ಭುತವಾಗಿದೆ ಎಂದ ಚಿತ್ರ ಆತನಿಗೆ ರುಚಿಸುವುದೇ ಇಲ್ಲ. ಉಳಿದವರೆಲ್ಲ ಯಾವುದೋ ಒಂದು ದೃಶ್ಯಕ್ಕೆ ಖುಷಿಯಿಂದ ಕುಣಿಯುತ್ತಿರಬೇಕಾದರೆ ಆತನಿಗೆ ಯಾವ ಭಾವವೂ ಮೂಡುವುದಿಲ್ಲ. ಉಳಿದವರು ಒಂದು ವಿಷಯವನ್ನು...
ಸುದ್ದಿ ನಿದ್ದೆ ವಿಶ್ರಾಂತಿ ಬಯಸುವಾಗ ನನ್ನಲ್ಲೊಂದು ಯೋಚನೆ ಓಡಿತು .ದಿನವೂ ಸುದ್ದಿಯನ್ನು ಪತ್ರಿಕೆ ಮನೆಯ ಮುಂದೆ ತಂದಿಡುತ್ತದೆ, ಟಿವಿ ಮನೆಯೊಳಗೆ ಕ್ಷಣಕ್ಷಣವೂ ಕಾಡಿಸುತ್ತದೆ. ಇವೆರಡೂ ಕಾರ್ಯನಿರ್ವಹಿಸುವುದು ನಾವು ಬಯಸುವುದರಿಂದ ತಾನೇ…. ನನಗೆ ಆ ದಿನ ಮನೆಯಲ್ಲಿ...
ನಗು ಅವತ್ತು ಆ ಊರನ್ನ ಮುಳುಗಿಸಿದ ಮಳೆ ನನಗೊಮ್ಮೆ ಸಿಗಬೇಕಿತ್ತು .ಎಷ್ಟು ಮನೆ, ಜೀವಗಳು ತೇಲಿ ಹೋಗಿದ್ದವು .ಒಂದಷ್ಟು ಬದುಕು ಉಳಿಯಿತು ಆದರೆ ಆ ಉಳಿದವರ ಜೀವಕ್ಕೆ ಜೀವವಾಗಿದ್ದವರು ಇಲ್ಲವೆಂದಮೇಲೆ ಬದುಕು ಸಾಗುವುದು ಹೇಗೆ? ಅನ್ನೋದು...
ಮರೆಯಲಾದೀತೆ? ತೊಟ್ಟಿಲಿನ ಮಗುವಿಗೆ ಕಲಿಸಿದವರಾರು?… ಗೆಳೆಯರು, ಶಿಕ್ಷಕರು, ಹೆತ್ತವರು, ಬಂಧು-ಬಳಗ ನಮಗೆ ಜೀವನದ ಪಾಠಗಳನ್ನು ಹೇಳಿಕೊಡುತ್ತಾರೆ. ಆದರೆ ತೊಟ್ಟಿಲಿನಲ್ಲಿ ಮಲಗಿರುವ ಹಸುಗೂಸಿಗೆ ನಗುವುದನ್ನ ಹೇಳಿಕೊಟ್ಟವರಾರು?.. ಹಸಿವಾದರೆ, ಅಮ್ಮನ ಅಪ್ಪುಗೆ ಬೇಕೆಂದರೆ, ಸೊಳ್ಳೇ ಏನಾದರೂ ಕಚ್ಚಿದರೆ ಮಗು...
ನೆಲದ ಉಸಿರಾಟ ನಾನು ದಿನವೂ ನೆಲದ ಮೇಲೆ ಚಲಿಸೋನು.ಒಂದು ದಿನವೂ ಮಣ್ಣಿನ ಅಂದರೆ ನೆಲದ ಮಾತನ್ನ ಕೇಳಿರಲಿಲ್ಲ. ಅದರ ನೋವನ್ನು ಅರಿತಿರಲಿಲ್ಲ .ಕಾಲು ಚಪ್ಪಲಿ ಧರಿಸಿತ್ತಲ್ವಾ!!. ಗುರುತಿಲ್ಲದ ಊರಿಗೆ ಆ ದಿನ ತಲುಪಿದ್ದೆ. ನಿಲ್ಲುವ ಜಾಗ...
ಪೂಜೆ ನಮ್ಮ ಮನೆಗಳ ಪೂಜೆಗಳಿಗೆ ದೇವರು ಒಲಿಯೋದಿಲ್ಲ ಖಂಡಿತ. ಪೂಜೆ ಅನ್ನೋದು ಅದೊಂದು ಪ್ರೀತಿಯ ಭಕ್ತಿ. ನಿರಾಕಾರನಿಗೆ ಶರಣಾಗುವುದು. ಆದರೆ ನಾವದನ್ನು ಮಾಡುತ್ತಿಲ್ಲವಲ್ಲ. ನಮ್ಮ ಮನೆಯೊಳಗಿನ ಅದ್ದೂರಿ ಪೂಜೆಯಲ್ಲಿ ನಮ್ಮತನವನ್ನು ಪ್ರದರ್ಶನಕ್ಕೆ ಇಡುತ್ತೇವೆ. ಭಕ್ತಿಗಿಂತ ಜಾಸ್ತಿ...