ಕಂಬಿಯ ಹಿಂದೆ ಅವನು ಗೀಚುತ್ತಿದ್ದ ವರ್ಣ ರೇಖೆಗಳಲ್ಲಿ ಗೂಡಾರ್ಥವಿತ್ತೆಂದು ಅರಿವಾಗಬೇಕಾದರೆ ಅವನ ಜೀವನದ ಯಾತ್ರೆಯಲ್ಲಿ ನೀವು ಪಯಣಿಗರಾಗಲೇಬೇಕು. ಅವನ ಚಿತ್ರಗಳು ಮೂಲಭೂತವಾಗಿ ಹೇಳುತ್ತಿದ್ದ ಮಾತುಗಳೆಂದರೆ “ಕಂಬಿಯ ಹಿಂದೆ ಒಂದು ಬದುಕಿದೆ” ಆ ಬಂಧನದ ನಡುವೆ ಅರಳುವ...
ಪರಾಶಕ್ತ ದೈನಂದಿನ ಬದುಕಿನ ಅಗತ್ಯಗಳಲ್ಲಿ ನಮ್ಮ ನಡುವೆ ನಮ್ಮಗಳ ಹಾಗೆ ಬದುಕಿದ್ದ ದೈವ-ದೇವರುಗಳು ತಮ್ಮ ರೂಪವನ್ನು ಬದಲಿಸಿಕೊಂಡಿದ್ದಾರೆ. ಇದು ರಮೇಶನ ನೋವಿನ ಕತೆ. ರಮೇಶ ಬ್ಯಾಂಕ್ ಉದ್ಯೋಗಿ, ಬೆಳಗಿನಿಂದ ಸಂಜೆಯವರೆಗೆ ಬರಿಯ ದುಡ್ಡು ಎಣಿಸುವಿಕೆಯ ನಡುವೆ...
ಚಂದಿರ ಖಾರ ಬಿಸಿಲಿಗೆ ಮೈಯೊಡ್ಡಿ ನೆರಳಿನ ಆಶ್ರಯ ಪಡೆದಾಗ ಮನಸ್ಸಿನ ತಂಪು ಸಂತಸಗೊಳ್ಳುತ್ತದೆ. ರಾತ್ರಿಗೆ ಮೈಯೊಡ್ಡಿ ಅಂಬರದ ಕೆಳಗೆ ಅರ್ಧ ದಿಗಂಬರನಾಗಿ ಇಷ್ಟರವರೆಗೂ ಉಳಿದಿರಲಿಲ್ಲ .ಅನಿವಾರ್ಯತೆಯೊಂದು ಇರುಳಿನ ತಂಪಿಗೆ ಆಶ್ರಯಿಸಲು ಕಾರಣವಾಯಿತು. ಅದೇನು ಸೊಗಸು ತಣ್ಣನೆಯ...
ರೇ…. ನನ್ನ ಆತ್ಮಕ್ಕೆ ಆಗಾಗ ರೇಗುವ ರೋಗದ ರಾಗವನ್ನು ದಯಪಾಲಿಸುತ್ತಲೇ ಇರುತ್ತೇನೆ. ನಾನು ಸಾಗುವ ದಾರಿಯಲ್ಲಿ ನೆಲ ನುಣುಪಾಗಿದೆ, ಅಷ್ಟೇನು ಅಡೆತಡೆಗಳಿಲ್ಲ. ಆದರೆ ನಾನೇ ಸೃಷ್ಟಿಸಿಕೊಂಡ ಒಂದಷ್ಟು ತೊಡಕುಗಳಿದೆ. ನಿಜ ನಾನೇ ಸೃಷ್ಟಿಸಿಕೊಂಡಿದ್ದು. ಅದಕ್ಕೊಂದು ಹೆಸರು...
ಮಿಸ್ಸಿಂಗ್ ಕೇಸ್ ಮನೆಯ ಮೂಲೆಯೊಂದರಲ್ಲಿ ಭಯ ಉಸಿರಾಡುತ್ತಿದೆ .ಪಕ್ಕದಲ್ಲಿ ಆತಂಕ ,ಇನ್ನೊಂದೆಡೆ ಭರವಸೆ ನೀಡಿದಾದ ಉಸಿರನ್ನು ಬಿಡುತ್ತಿದೆ. ದಿನವೂ ಬರಿಯ ಗಾಳಿಯನ್ನೇ ತುಂಬಿಕೊಂಡಿದ್ದ ಮನೆ ಸದ್ಯಕ್ಕೆ ಆಮ್ಲಜನಕವನ್ನು ಹೊರಗಡೆ ಕಳುಹಿಸಿ ಕ್ರೂರ ಆತಂಕವನ್ನು ಬರಮಾಡಿಕೊಳ್ಳುತ್ತಿದೆ. ಮನೆಯ...
ಕನ್ನಡಿ ಅಲ್ಲೊಂದು ಊರಿದೆ ಅನ್ನೋದು ಯಾರಿಗೂ ಗೊತ್ತಿಲ್ಲ .ನಾನೀಗ ನಿಮಗೆ ತಿಳಿಸುತ್ತಿದ್ದೇನೆ. ಹಾ ನಿಮಗೆ ಮಾತ್ರ?. ನಾವು ನೋಡಿರುವ ಊರಿನ ಹಾಗೆ ಅದು ಇದೆ. ಆದರೆ ಅಲ್ಲೊಂದು ವಿಶೇಷವಿದೆ . ಅಲ್ಲಿ ಎಲ್ಲರ ಮುಖದಲ್ಲಿ ನಗುವಿದೆ....
ಮುಂದಿನ ಸೀಟು ಗಾಲಿಗಳು ತಿರುಗಿದಂತೆ ಕಿಟಕಿಗಳು ಗಾಳಿಯನ್ನು ಒಳಕ್ಕೆ ಕಳಿಸುತ್ತಿತ್ತು. ಮುಖಕ್ಕೆ ರಾಚುವ ಗಾಳಿ ಮುದ ನೀಡಿದರೂ ಹೊಟ್ಟೆಯೊಳಗಿನ ಉರಿ ನಿಲ್ಲುತ್ತಿಲ್ಲವಲ್ಲ. ನನ್ನ ಮುಂದಿನ ಸೀಟಿನ ಸಂಭಾಷಣೆಯನ್ನು ನಿಮಗೆ ತಲುಪಿಸುತ್ತೇನೆ .ಬೇರೆಯವರು ಮಾತಾಡೋದನ್ನ ಕೇಳೋದು ತಪ್ಪು,...
ಮುಂದೇನು? ಕಾಡಿನೊಳಗಿನ ಕತ್ತಲೆಯಲ್ಲಿ ಬದುಕುತ್ತಿದ್ದರು. ಬರಿಯ ನೇಸರನ ಕಿರಣಗಳ ಬೆಳಕು ಮರಗಳೆಡೆಯಿಂದ ಭೂಮಿಗೆ ಬೀಳುತ್ತಿದ್ದ ಜಾಗದಲ್ಲಿ ಹಸಿರ ನಂಬಿ ಉಸಿರು ನೀಡುತ್ತಿದ್ದವರು. ಸಾವಿರ ಕಿಲೋಮೀಟರ್ ದೂರವಿದ್ದ ಡಾಂಬರಿನ ರಸ್ತೆ ಮರಗಳನ್ನು ಆಹುತಿ ಪಡೆಯುತ್ತಾ ಒಂದೊಂದು ಹೆಜ್ಜೆಗಳನ್ನಿಡುತ್ತಾ...
ಮಾತೆಯ ಕೂಗು ನನ್ನ ಮನೆಯ ಸ್ಥಿತಿಗತಿಗಳು ಅಡಿಮೇಲಾಗಿದೆ. ನೆಲದೊಳಗಿನ ಕೆಸರಲಿ ಕಾಲಿರಿಸಿ ಬೆವರ ಬಸಿದು ದುಡಿದು ತಿನ್ನುತ್ತಿದ್ದ ಹಲವರು ಮರೆತಿದ್ದಾರೆ ಭೂಮಿಯ ವಾಸನೆ. ದುಡಿಮೆಯ ತುಡಿತದ ಎದೆಬಡಿತ ನಿಧಾನವಾಗಿದೆ. ಗುಡಿಸಲುಗಳು ಮಹಲುಗಳಾಗಿದೆ. ಒಂದಿದ್ದ ಕೋಣೆ ಹಲವಾಗಿ...
ಶಬ್ದ “ಇಲ್ಲಿ ಹೇಗೆ ಬದುಕುತ್ತೀರಿ ಸರ್?, ನನ್ನಿಂದಾಗುವುದಿಲ್ಲ. ಈ ಕಡೆ ನಿದ್ದೇನೂ ಬರುತ್ತಿಲ್ಲ, ಊಟನೂ ಸೇರುತ್ತಿಲ್ಲ ,ಹೀಗೂ ಬದುಕ್ತಾರ?” ರಫೀಕ್ ಮಾತಾಡ್ತಾ ಇದ್ದ. ಚಾಲಕನಾಗಿ 25 ವರ್ಷದ ಸುದೀರ್ಘ ಅನುಭವ .ಶಬ್ದದ ನಡುವೆ ಬದುಕು ಕಟ್ಟಿಕೊಂಡವ....