ಪ್ರೇಮಿಗಳಲ್ಲವಂತೆ ಸಾರಿ ಸಾರಿ ತಪ್ಪಾಯ್ತು. ನಿಮ್ಮಲ್ಲಿ ಕ್ಷಮೆ ಕೇಳಿ ಬದಲಾವಣೆ ಆಗೋವರೆಗೂ ನನ್ನನ್ನು ಅವನು ಬಿಡುತ್ತಿಲ್ಲ .ಇಡೀ ದಿನ ಅವನ ಮಾತಿನ ಮುಂದೆ ನಾನು ಮೌನವಾಗಿ ಬಿಟ್ಟೆ. ಆ ವಿಷಯ ಯಾವುದು ಅಂತನಾ! ನಿನ್ನೆ ನಾನು...
ನಮ್ಮ ಮನೆ ರಸ್ತೆಬದಿಯಲ್ಲಿ ಇರುವುದು .ಅಲ್ಲಲ್ಲಾ ರಸ್ತೆಪಕ್ಕ ನಮ್ಮ ಮನೆ ಇರೋದು. ಇದರಲ್ಲಿ ಸತ್ಯ ಯಾವುದು? ನಾವು ಮನೆ ಕಟ್ಟುವಾಗ ರಸ್ತೆ ಇಷ್ಟು ಅಗಲವಾಗಿಯೂ ಇರಲಿಲ್ಲ ಆಮೇಲೆ ಡಾಮರೀಕರಣ ಆದದ್ದು. ಹಾಗಾಗಿ ನಮ್ಮ ಮನೆ ಪಕ್ಕ...
ವೈರಸ್ಸು ನಾನು ನಿನ್ನ ಕಣ್ಣಿಗೆ ಕಾಣಿಸ್ತಿಲ್ಲ ಹಾಗಂತ ನಾನೇನು ಅಶಕ್ತನಲ್ಲ .ನೀನು ಅಂದುಕೊಂಡ ಹಾಗೆ ಮಹಾಕ್ರೂರಿಯೂ ಅಲ್ಲ .ನೀನು ನನಗೊಂದು ಹೆಸರು ಇಟ್ಟಿದ್ದೀಯ.ಅದಕ್ಕಾದರೂ ನಾನು ಹೆಸರುಳಿಸಬೇಕಲ್ಲವಾ?. ನಾನು ಹೆಚ್ಚಾಗಿ ಹರಡಲು ನಿನ್ನ ಅಜಾಗರೂಕತೆಯೇ ಕಾರಣ. ಇದಕ್ಕಿಂತ...
ಪ್ರಾರ್ಥನೆ ನಮ್ಮದು 22ನೇ ಮಹಡಿ .ಅಲ್ಲಿನ ಕಿಟಕಿಯಿಂದ ಇಣುಕಿದರೆ ಕಾಣೋದು ದೊಡ್ಡ ಮೈದಾನ. ಇನ್ನೊಂದು ಕಡೆ ಕಟ್ಟಡಗಳ ಸಾಲು .ಇಷ್ಟು ದಿನ ಆ ಮೈದಾನದಲ್ಲಿ ಒಂದೆರಡು ದನಗಳನ್ನು ಅಡ್ಡಾಡುವುದು ಬಿಟ್ಟರೆ ಬೇರೇನೂ ಕಂಡಿಲ್ಲ ನನಗೆ. ಆದರೆ...
ಬಡತನ ಊರಿಗೆ ಬಂಧನ ಕವಿದಿತ್ತು .ಸಮಯ ಕಳಿತಾ ಇತ್ತು. ಮನೋರಂಜನೆಗೆ ಮನಸ್ಸು ಹಾತೊರೆದಿತ್ತು. ಆಗ ಟಿವಿ ಒಂದೇ ಸದ್ಯದ ಮದ್ದು. ಮೊಬೈಲ್ ಒಳಗೆ ನೆಟ್ವರ್ಕ್ ಅನ್ನೋದು ಪ್ರವೇಶಿಸೋಕೆ ಕಷ್ಟ ಪಡ್ತಾ ಇತ್ತು. ಮನೆಗೆ ಟಿವಿ ಬಂದಮೇಲೆ...
ಭಯ ಆಗಸದಲ್ಲಿ ರೇಖೆಗಳ ಚಿತ್ತಾರ ಭಯದ ಸಂತೋಷವನ್ನು ಉಂಟು ಮಾಡಿದರೆ, ಗುಡುಗಿನ ನಾದನ ಎದೆಯೊಳಗೆ ತಣ್ಣಗೆ ನಡುಕವನ್ನು ಹುಟ್ಟಿಸುತ್ತಿತ್ತು .ಆದರೆ ಈ ಭಯ ನಮ್ಮ ಮನೆಯ ಶಂಕರಿಗೆ ಉಂಟಾಗಲಿಲ್ಲ. ಉಳಿದ ದನಗಳು ಭಯದಿಂದ ಮೂಲೆಗೊತ್ತಿ ನಿಂತಿವೆ....
ನಂಬಿದ ಬದುಕು ಧೂಳಿನ ಕಣಗಳು ಸೂರ್ಯನ ಬಿಸಿಲಿಗೆ ಬಿಸಿಯಾಗುತ್ತಿದೆ. ಅವನು ನಾಲ್ಕು ರಸ್ತೆ ಕೂಡುವಲ್ಲಿ ನಿಂತಿದ್ದಾನೆ. ಸಮವಸ್ತ್ರ ಮೈಗಂಟಿದೆ. ಬೆವರು ಬಿಸಿಲಿನ ಶಾಖಕ್ಕೆ ಹೊರಬಂದು ಆವಿಯಾಗುತ್ತಿದೆ. ಧೂಳಿನ ಕಣಗಳು ಮೈಯನ್ನು ಅಪ್ಪಿಕೊಂಡು ಮತ್ತಷ್ಟು ಬಿಸಿ ನೀಡುತ್ತಿದೆ....
ಮರೆತ ಹಾದಿ ನೆಲ ಮತ್ತು ಪಾದಗಳು ಒಂದನ್ನೊಂದು ಅರ್ಥೈಸಿಕೊಂಡಿದೆ ಅನ್ನಿಸುತ್ತದೆ. ಪಾದ ನೋಯಬಾರದೆಂದು ಹುಲ್ಲು ಬೆಳೆಯಲಿಲ್ಲವೂ, ಅಥವಾ ಹುಲ್ಲನ್ನು ತುಳಿದೆ ಪಾದ ನಡೆಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ದಾರಿಯಾಗಿತ್ತು .ದಿನವೂ ನಡೆದದ್ದರಿಂದ ಅದೊಂದು ಗುರಿಯ ಕಡೆಗೆ ಸಾಗಿತ್ತು....
ಕಳಚುವಿಕೆ ಜಗಲಿಯ ಮೇಲೆ ಕುಳಿತು ಕಾಲು ಕೆಳಗೆ ಹಾಕಿ ಕಾಲಿಗೊಂದು ತಾಳ ನೀಡಿ ಅದನ್ನು ಆಡಿಸುತ್ತಾ ಕೂತವನಿಗೆ ಯೋಚನೆಗಳು ಒಂದೊಂದಾಗಿ ಚಪ್ಪಲಿ ಕಳಚಿ ಮನದೊಳಗೆ ಪ್ರವೇಶಿಸುತ್ತಲೇ ಇದ್ದವು. ಇದರಲ್ಲಿ ಹಲವು ಅನಿರೀಕ್ಷಿತ ,ಅಪರಿಚಿತ ಭೇಟಿಗಳಾದರೂ, ಒಂದು...
ಆತನೊಬ್ಬ “ಉಮ್ಮಳಿಸಿ ಬರುತ್ತಿರುವ ದುಃಖವನ್ನು ತುಟಿ ಒತ್ತಿ ತಡೆಯಬಹುದು. ಆದರೆ ಮನಸ್ಸು ಆಗಾಗ ಎಚ್ಚರಿಸುವ ಭಯ, ಅಲ್ಲಲ್ಲಿ ಕಾಣುವ ದೃಶ್ಯಗಳು ಒಳಗೊಂದು ಕಂಪನವನ್ನು ಸೃಷ್ಟಿಸುತ್ತಿದೆ. ಇ ಸಾಮಾನ್ಯವೆಂದುಕೊಂಡಿದ್ದ ಕಾಯಿಲೆಯೊಂದು ಮಾರಣಾಂತಿಕವಾಗುತ್ತಿದೆ. ಕಣ್ಣೆದುರು ಉಸಿರು ನಿಲ್ಲಿಸುವ ಜೀವಗಳು,...