ಮಗಳ ಕನಸು ಮಳೆ ಭೂಮಿಗಿಂದು ಸುರಿಯಬಾರದು ಎಂದು ನಿರ್ಧರಿಸಿದ್ದರೂ, ಗಾಳಿ ಬಿಡುತ್ತಾ ಇಲ್ಲ. ಮೋಡಗಳಿಗೆ ಜಗಳವಾಡಿಸಿ ನೀರು ಸುರಿಸಿಯೇ ಬಿಟ್ಟಿತ್ತು. ಮಳೆಹನಿ ಬೇಸರದಿ ಆ ಬೀದಿಯ ಮೇಲೂ ಸುರಿಯಲಾರಂಭಿಸಿತು. ಮಳೆಗೆ ಅಳು ಬಂದದ್ದು ತಾ ಮಾಡಿದ...
ಮುಗ್ದ ಛಲ ಅವನು ಹುಡುಕುತ್ತಿದ್ದಾನೆ.., ಹಲವು ವರ್ಷಗಳು ಕಳೆದಿವೆ . ತನ್ನವರನ್ನು ಕಳೆದುಕೊಂಡ ಮೇಲೆ ಅವರೊಂದಿಗೆ ಮತ್ತೆ ಜೊತೆಗೂಡಬೇಕು ಅನ್ನುವ ಕಾರಣಕ್ಕೆ ಹುಡುಕಾಡುತ್ತಿದ್ದಾನೆ. ಬಿಡಿಗಾಸೂ ಇಲ್ಲದ ಬದುಕು ಅವನದು. ಇದ್ದವರೆಲ್ಲ “ಅವರು ನಿನಗೆ ಸಿಗುವುದಿಲ್ಲ ಯಾಕೆ...
ಜಡ ಅವತ್ತು ವಿಜ್ಞಾನ ತರಗತಿಯಲ್ಲಿ ಪಾಠ ಮಾಡಿದ ನನ್ನ ಮೇಷ್ಟರು,” ನೋಡಿ ಮಕ್ಕಳೇ ಈ ಭೂಮಿಯಲ್ಲಿ ಜಡವಸ್ತು ಮತ್ತು ಜೀವ ವಸ್ತು ಅನ್ನುವ ಎರಡು ತರದ ವಿಧಾನಗಳಿವೆ. ಇದನ್ನು ಪರೀಕ್ಷೆಗೆ ಬರೆದು ಅಂಕ ಕೂಡ ಗಳಿಸದ್ದೆ.....
ರೆಕ್ಕೆ ಗಾಳಿಯೊಂದಿಗೆ ವ್ಯವಹರಿಸುತ್ತಾ ರೆಕ್ಕೆಬಿಚ್ಚಿ ಬಾನಗಲ ಓಡಾಡುತ್ತಿದ್ದ ಹಕ್ಕಿ ನಿಯಂತ್ರಣ ತಪ್ಪಿ ನೆಲಕ್ಕುರುಳಿತು .ಹಾರುವುದು ಒಂದೇ ಸತ್ಯದ ಬಾಳಲಿ .ತಟ್ಟನೆ ನೆಲಕ್ಕುರುಳಿತು. ರೇಕ್ಕೆಯೊಂದು ತುಂಡಾಗಿ ಗಾಳಿಯೊಂದಿಗೆ ಸೇರಿ ಎಲ್ಲೋ ಕಳೆದು ಹೋಗಿತ್ತು .ಒಂಟಿ ರೆಕ್ಕೆಯಲ್ಲಿ ಪ್ರಯತ್ನ...
ಮಸಣವಾಸಿ ಮಸಣದ ಕಂಪೌಂಡಿಗೆ ಹೊಂದಿಕೊಂಡೇ ಅವನ ಮನೆ. ಸಣ್ಣ ಜೋಪಡಿ.ವಾಸನೆಗೆ ಮೂಗು ಒಗ್ಗಿ ಹೋಗಿದೆ. ಸಾವು ದಿನವೂ ಭೇಟಿಯಾಗುವ ಆತ್ಮೀಯ ಸ್ನೇಹಿತನಾಗಿದ್ದಾನೆ. ನಾಲ್ಕು ಗೋಡೆಗಳು ಸುಭದ್ರವಲ್ಲದ್ದಿದ್ದರೂ ಮನೆಯಲ್ಲಿ ವಾಸಿಸುವುದು ಅವನೊಬ್ಬನೇ. ಅವನ ಹಲವು ದಿನಗಳ ಯೋಚನೆಗಳಿಗೆ...
ವಂಶಪಾರಂಪರ್ಯ ಅವರೆಲ್ಲಾ ಆಗಾಗ ಜೊತೆ ಸೇರುತ್ತಾರೆ. ಈ ಆಗಾಗ ಇದೆಯಲ್ಲ ಇದು ಭಾನುವಾರದ ಸಂಜೆ ನಾಲ್ಕರಿಂದ ಆರರ ಸಮಯ. ಯಾಕೆಂದರೆ ಆ ದಿನ ಮಧ್ಯಾಹ್ನದ ನಂತರ ಅವರ ಸ್ವಂತ ಉದ್ಯೋಗಗಳಿಗೆ ರಜೆಯಾದ್ದರಿಂದ. ಎಲ್ಲರೂ ಸಮಕಾಲೀನರೇ, ಜೊತೆಗೆ...
ಕಾಯುವಿಕೆ ಆಸ್ಪತ್ರೆಯ ಮುಂದಿನ ಗೇಟಿನಬಳಿ ನಿಂತಿದ್ದಾಳೆ. ಒಳಗೆ ನಿರೀಕ್ಷಿಸುತ್ತಿದ್ದಾಳೆ. ಬದುಕಿಗೋ ಸಾವಿಗೋ ಗೊತ್ತಿಲ್ಲ. ಮಳೆ ಹನಿಯುತ್ತಿದೆ ಮತ್ತೊಮ್ಮೆ ಬಿಸಿಲು ಮೂಡುತ್ತಿದೆ. ಆದರೆ ಆಕೆ ಅಚಲವಾಗಿ ಕಾಯುತ್ತಿದ್ದಾಳೆ .ಅಲ್ಲಿಂದ ಹೊರ ಬರುತ್ತಿರುವ ಅವರನ್ನು ಕಣ್ಣು ಎತ್ತರಿಸಿ ಗಮನಿಸಿ...
ನಾಯಿ ಮರಿ ಗೂಗಲ್ ಮ್ಯಾಪ್ ತೋರಿಸಿದ ದಾರಿಯಲ್ಲಿ ಸಾಗುತ್ತಿದೆ. ನಾನು ಸೇರಬೇಕಾದ ವಿಳಾಸವೇ ನನಗೆ ಗೊತ್ತಾಗದ ಕಾರಣ ಅದನ್ನು ಅವಲಂಬಿಸಿದ್ದೆ. ಕಾಡಿನ ನಡುವಿನ ರಸ್ತೆಗೆ ಗಾಡಿಯನ್ನು ಕರೆದೊಯ್ದಿತ್ತು ಗೂಗಲ್ ಮ್ಯಾಪ್. ಅಲ್ಲಿ ಮನುಷ್ಯರ ಸುಳಿವೇ ಇಲ್ಲ...
ಇಸ್ತ್ರಿ ಪೆಟ್ಟಿಗೆ ನನಗೆ ಒಬ್ಬನಿಂದ ಏನು ಮಾಡೋಕೆ ಸಾಧ್ಯವಿಲ್ಲ. ವಿದ್ಯುತ್ತು ರಾಯ ನನ್ನೊಳಗೆ ಸೇರಿ ಶಾಖವನ್ನು ಉತ್ಪತ್ತಿ ಮಾಡಿದಾಗ ಮಾತ್ರ ನಾನು ನೆರಿಗೆಗಳನ್ನು ನೇರ ಮಾಡುತ್ತೇನೆ, ಮುದ್ದೆಯಾಗಿರುವುದನ್ನು ಅಂದವಾಗಿಸ್ತೇನೆ. ನನ್ನಲ್ಲಿ ನನ್ನ ಉಷ್ಣವನ್ನು ನಿಯಂತ್ರಿಸುವ ಸಾಧ್ಯತೆಗಳು...
ಕಳೆದುಕೊಳ್ಳೊದು ! ಜ್ಞಾನೋದಯವಾಗುವುದಕ್ಕೆ ಸಮಯ ಸಂದರ್ಭ ಇರೋದಿಲ್ಲ. ಇವತ್ತು ಗಣೇಶನ ಪಕ್ಕ ಕೂತಿದ್ದೆ. ಕೊನೆಯ ಒಂದು ದಿನ ಇರೋದು ಅವನನ್ನು ವಿಸರ್ಜಿಸೋದಕ್ಕೆ, ಅದಕ್ಕೆ ಆತ್ಮೀಯತೆಯಿಂದ ಕುಶಲೋಪರಿ ನಡೆಸುವಾಗ ತಟ್ಟನೆ ಆಲೋಚನೆಯೊಂದು ತಲೆಯೊಳಗೆ ಮಿನುಗಿತ್ತು. ನಾನು ತುಂಬಾ...