ಮಳೆರಾಯ ಆಗಸದ ಮೇಲಿನ ಶಿವನ ಮನೆಯ ಅಂಗಳದಲ್ಲಿ ಕಂಪನ ಉಂಟಾಯಿತು. ಅಲ್ಲಿ ನೆಲದ ಮೇಲಿನ ಸಣ್ಣ ಬಿರುಕುಗಳಿಂದ ಬೆಳಕಿನ ರೇಖೆಗಳು ಮೂಡಿದಂತೆ ಕೆಳಗೆ ನಿಂತವರಿಗೆ ಕಂಡಿತು. ಅದು ಮಳೆಗೆ ದಾರಿತೋರಿಸುವ ಬೆಳಕಾಗಿತ್ತು. ಅದೇ ಬೆಳಕನ್ನು ಹಾದಿಯನ್ನಾಗಿಸಿಕೊಂಡು...
ನಾನೆಂಬುವವನ ಮಾತು ನೀವ್ ಅಂದುಕೊಂಡಿರುವ ಹಾಗೆ ನಾನು ಸಾಮಾನ್ಯನಲ್ಲ. ಬಹಳ ಎತ್ತರದಲ್ಲಿ ಇದ್ದೇನೆ. ನಿಮಗೆ ಅಷ್ಟು ಸುಲಭವಾಗಿ ನನ್ನ ತಲುಪಲಾಗದು. ನನ್ನೊಂದಿಗೆ ಸೇರುವುದರಿಂದ ನಿಮಗೆ ಹೆಸರೂ ಪ್ರಖ್ಯಾತಿ, ಸಿಗಬಹುದು. ಈಗಾಗಲೇ ಇಂತಹ ಹಂತವನ್ನು ತಲುಪಿದ್ದೇನೆ. ನನ್ನ...
ಕನಸು ಮಾತಾಡಿತು ಹಲೋ.., ನಾನು ಮೌನವಾಗಿದ್ದಾನೆ ಅಂದುಕೊಂಡು ನಿನಗಿಷ್ಟ ಬಂದ ಹಾಗೆ ಆಟ ಆಡಿಸುತ್ತಾ ಇದ್ದೀಯಾ. ಓಡಾಡ್ತಾ ಇರೋದು ಸಾಕು. ನಿನ್ನಲಿ ಒಂದಿಷ್ಟು ಮಾತನಾಡಬೇಕು?.” ನನ್ನ ಹೆಸರು ಡ್ರೀಮ್!. ಅದೇ ನೀನು ಕನಸು ಅಂತ ಕರಿತಿಯಲ್ಲ...
ಕನ್ನಡಿಯೊಳಗೆ ಒಣಗಿದ ಗೋಡೆ ಮಳೆ ಬಿದ್ದ ಕಾರಣ ಹಸಿಯಾಗಿದೆ. ಗೋಡೆಗಳಿಗೆ ಒಂದಷ್ಟು ಮೊಳೆಗಳನ್ನು ಜಡಿದು ಕನ್ನಡಿಗಳನ್ನು ನೇತುಹಾಕಿದ್ದಾರೆ. ಇಲ್ಲೊಂದು ವಿಶೇಷವಿದೆ. ಕನ್ನಡಿ ತನ್ನ ಎದುರು ನಿಂತವರ ಬಿಂಬವನ್ನು ಕಾಣಿಸಬೇಕು. ಆದರೆ ಇಲ್ಲಿ ಪ್ರತಿಬಿಂಬ ಕಾಣದೆ ಕನ್ನಡಿಯೊಳಗಿನ...
ಮರಗಳ ಪಯಣ ಯಾಕೋ ನಿದ್ದೆ ಮನೆಯ ಹೊರಗಡೆ ಅಡ್ಡಾಡುತ್ತಿದ್ದೆ. ಮನೆಯೊಳಗೆ ಬಂದು ನನ್ನ ಮನದೊಳಗೆ ಸೇರುತ್ತಲೇ ಇರಲಿಲ್ಲ .ಹಾಗಾಗಿ ಜಗಲಿಯಲ್ಲಿ ಬಂದು ಕೂತೆ. ದಿನವೂ ಬೀಸುವ ಗಾಳಿಯೊಂದಿಗೆ ಅದೇನೋ ಚಲಿಸುವ ಶಬ್ದ ಕೇಳುತ್ತಿತ್ತು. ದೃಷ್ಟಿ ಹಾಯಿಸಿದರೆ...
ಸ್ವಾತಂತ್ರ್ಯ ದಾರಿ ಸಾಗುತ್ತಿತ್ತು ಹಾಸ್ಟೆಲ್ ತಲುಪುತ್ತಿರಲಿಲ್ಲ. ಕಾಲೇಜಿನಲ್ಲಿ ಯಾವುದೋ ಬೈಗುಳಕ್ಕೆ ಬೇಸರಗೊಂಡಿದ್ದ ಮನಸ್ಸು, ನಡಿಗೆಯನ್ನ ನಿಧಾನ ಮಾಡಿಸಿತ್ತು. ಮನಸ್ಸಿನ ನೋವು ಕಾಲಿಗೆ ಅರ್ಥವಾಗಿ ಅದು ನೆಲವನ್ನು ನಿಧಾನವಾಗಿ ಊರಿ ಮುಂದಿನ ಹೆಜ್ಜೆಯನಿಡುತ್ತಿತ್ತು. ಅಲ್ಲಿ ಆ ಮರದ...
ಪತ್ರವೊಂದು ನನ್ನವಳೇ ,ತುಂಬಾ ಕಾಯಿಸಬೇಡ. ವಿಪರೀತ ಕಾಡಿಸಬೇಡ. ಕಣ್ಣೋಟದ ಮೊದಲ ಸಿಂಚನ ನನ್ನೆದೆಗೆ ಬಿಟ್ಟು ಅದು ಪ್ರೀತಿಯ ಮೊಳಕೆಯೊಡೆದು ಮರವಾಗಿದೆ. ಆ ದಿನ ಮರೆಯಾದ ಜೀವ ಆಗಾಗ ಫೋನಾಯಿಸಿದೆ ವಿನಃ ಮುಖತಃ ಭೇಟಿ ಇಲ್ಲ. ಬಂದು...
ಪ್ರೀತಿ-ಸಾವು “ಪ್ರೀತಿಗಿಂತ ದೊಡ್ಡದು ಇನ್ನೇನಿದೆ, ಅದುವೇ ಅಂತಿಮ ಸತ್ಯ ,ತಿಳಿಯೋ ನರಮಾನವ.” ನೇಗಿಲಪುರದ ಶಾಲೆಯ ಮೈದಾನದಲ್ಲಿ ಹರಿಕಥೆ ಮಾಸ್ತರರು ಪ್ರವಚನ ಮಾಡ್ತಾಯಿದ್ರು .ಈ ಸಾಲುಗಳನ್ನು ಕೇಳುವ ಕಿವಿಗಳು ತುಂಬಿದ್ದವು.ತರಂಗಗಳ ಚಲನೆ ಕಾಣದೆ ಇರೋ ಕಾರಣ ಎಲ್ಲರ...
ವಿಶೇಷ ಮನೆ ಸಂಭ್ರಮಗೊಂಡಿದೆ . ಅದು ಪ್ರತಿವರ್ಷ ಯುಗಾದಿಗಾಗಿ ಕಾಯುತ್ತದೆ.ಹಿಂದೆ ಹಲವು ಸ್ವರಗಳು ಸಾವಿರ ಹೆಜ್ಜೆಗಳು ವಿನೋದ, ಜಗಳ ,ಸಹಬಾಳ್ವೆಯನ್ನು ಹೊಂದಿದ್ದ ಮನೆ ಇಂದು ಕೇವಲ ನಾಲ್ಕು ದನಿಗಳನ್ನು ಮಾತ್ರ ಕೇಳುತ್ತಿದೆ. ಯುಗಾದಿಗೆ ಹಸಿರು ಚಿಗುರುವಂತೆ...
ಆ ದಿನಗಳು ಕ್ಯಾಲೆಂಡರ್ ಕೆಲವು ವರ್ಷದ ಹಿಂದೆ ಸರಿದಿತ್ತು. ಏಪ್ರಿಲ್ 10ಕ್ಕೆ ಶಾಲೆಯಲ್ಲಿ ಫಲಿತಾಂಶ ಘೋಷಣೆಯಾಗಿ ಮನೆಗೆ ಓಡಿ ಬಂದವನೇ ಅಜ್ಜಿ ಮನೆಗೆ ಹೋಗುವ ತಯಾರಿ ನಡೆಸಿದೆ. ಇದು ಪ್ರತಿವರ್ಷದ ದಿನಚರಿ. ಹಳ್ಳಿಯ ಮನೆಗೆ ತಲುಪುವುದೇ...