ಕೊನೆಯ ಕ್ಷಣ ಉಸಿರು ಕಟ್ಟುತ್ತಿದೆ . ಗಾಳಿ ಬೇಕೆನಿಸಿದೆ. ಎದೆಯೊಳಗಿನ ಗೂಡಿಗೆ ಹೋಗುವ ದಾರಿಯನ್ನು ಯಾರೋ ಮುಚ್ಚಿದ್ದಾರೆ. ಅದನ್ನ ತೆರೆಯುವುದಾದರೂ ಹೇಗೆ. ಕೈಯಲ್ಲಿ ನೂಕಲಾಗಲ್ಲ, ಕಾಲಿನಲ್ಲಿ ಒದೆಯೋಕೆ ಆಗಲ್ಲ. ನನ್ನ ಕಣ್ಣಿನೊಳಗೆ ರಕ್ತ ಇಂಗುತ್ತಿದೆ. ಉಗುರಿನ...
ವೈರಸ್ಸು ನಾನು ನಿನ್ನ ಕಣ್ಣಿಗೆ ಕಾಣಿಸ್ತಿಲ್ಲ ಹಾಗಂತ ನಾನೇನು ಅಶಕ್ತನಲ್ಲ .ನೀನು ಅಂದುಕೊಂಡ ಹಾಗೆ ಮಹಾಕ್ರೂರಿಯೂ ಅಲ್ಲ .ನೀನು ನನಗೊಂದು ಹೆಸರು ಇಟ್ಟಿದ್ದೀಯ.ಅದಕ್ಕಾದರೂ ನಾನು ಹೆಸರುಳಿಸಬೇಕಲ್ಲವಾ?. ನಾನು ಹೆಚ್ಚಾಗಿ ಹರಡಲು ನಿನ್ನ ಅಜಾಗರೂಕತೆಯೇ ಕಾರಣ. ಇದಕ್ಕಿಂತ...
ಸೌಂದರ್ಯ ಯಾಕೋ ಎಲ್ಲರ ಮೊಬೈಲ್ ನಲ್ಲಿ ಅವರವರ ಚಂದದ ಫೋಟೋಗಳ ಸಾಲು ಚಿತ್ರಗಳು. ಅದಕ್ಕೊಂದಿಷ್ಟು ವರ್ಣಾಲಂಕಾರ, ಹಾಡುಗಳು ಹಿನ್ನೆಲೆಗೆ .ನನ್ನ ಪೋಟೋ ತೆಗೆಯೋರು ಇಲ್ಲ. ತೆಗೆದರೆ ನಾನಷ್ಟು ಅಂದವಾಗಿಯೂ ಕಾಣುವುದಿಲ್ಲ. ಇದೇ ಬೇಸರದಲ್ಲಿ ಜಗಲಿಯಲ್ಲಿ ಕೂತಿದ್ದಾಗ...
ಪ್ರಾರ್ಥನೆ ನಮ್ಮದು 22ನೇ ಮಹಡಿ .ಅಲ್ಲಿನ ಕಿಟಕಿಯಿಂದ ಇಣುಕಿದರೆ ಕಾಣೋದು ದೊಡ್ಡ ಮೈದಾನ. ಇನ್ನೊಂದು ಕಡೆ ಕಟ್ಟಡಗಳ ಸಾಲು .ಇಷ್ಟು ದಿನ ಆ ಮೈದಾನದಲ್ಲಿ ಒಂದೆರಡು ದನಗಳನ್ನು ಅಡ್ಡಾಡುವುದು ಬಿಟ್ಟರೆ ಬೇರೇನೂ ಕಂಡಿಲ್ಲ ನನಗೆ. ಆದರೆ...
ಬಡತನ ಊರಿಗೆ ಬಂಧನ ಕವಿದಿತ್ತು .ಸಮಯ ಕಳಿತಾ ಇತ್ತು. ಮನೋರಂಜನೆಗೆ ಮನಸ್ಸು ಹಾತೊರೆದಿತ್ತು. ಆಗ ಟಿವಿ ಒಂದೇ ಸದ್ಯದ ಮದ್ದು. ಮೊಬೈಲ್ ಒಳಗೆ ನೆಟ್ವರ್ಕ್ ಅನ್ನೋದು ಪ್ರವೇಶಿಸೋಕೆ ಕಷ್ಟ ಪಡ್ತಾ ಇತ್ತು. ಮನೆಗೆ ಟಿವಿ ಬಂದಮೇಲೆ...
ಭಯ ಆಗಸದಲ್ಲಿ ರೇಖೆಗಳ ಚಿತ್ತಾರ ಭಯದ ಸಂತೋಷವನ್ನು ಉಂಟು ಮಾಡಿದರೆ, ಗುಡುಗಿನ ನಾದನ ಎದೆಯೊಳಗೆ ತಣ್ಣಗೆ ನಡುಕವನ್ನು ಹುಟ್ಟಿಸುತ್ತಿತ್ತು .ಆದರೆ ಈ ಭಯ ನಮ್ಮ ಮನೆಯ ಶಂಕರಿಗೆ ಉಂಟಾಗಲಿಲ್ಲ. ಉಳಿದ ದನಗಳು ಭಯದಿಂದ ಮೂಲೆಗೊತ್ತಿ ನಿಂತಿವೆ....
ನಂಬಿದ ಬದುಕು ಧೂಳಿನ ಕಣಗಳು ಸೂರ್ಯನ ಬಿಸಿಲಿಗೆ ಬಿಸಿಯಾಗುತ್ತಿದೆ. ಅವನು ನಾಲ್ಕು ರಸ್ತೆ ಕೂಡುವಲ್ಲಿ ನಿಂತಿದ್ದಾನೆ. ಸಮವಸ್ತ್ರ ಮೈಗಂಟಿದೆ. ಬೆವರು ಬಿಸಿಲಿನ ಶಾಖಕ್ಕೆ ಹೊರಬಂದು ಆವಿಯಾಗುತ್ತಿದೆ. ಧೂಳಿನ ಕಣಗಳು ಮೈಯನ್ನು ಅಪ್ಪಿಕೊಂಡು ಮತ್ತಷ್ಟು ಬಿಸಿ ನೀಡುತ್ತಿದೆ....
ಮೂಲ? “ಯಾಕೆ ಹೀಗೆ? ನನ್ನ ಸೃಷ್ಟಿಗಳೇ ನನ್ನ ಸೃಷ್ಟಿಯ ಬಗ್ಗೆ ಹಕ್ಕು ಸ್ಥಾಪಿಸಲು ಹೊರಟಿದ್ದಾರೆ. ನನ್ನ ಹುಟ್ಟಿನ ಮೂಲವನ್ನು ತಮ್ಮಲ್ಲಿಯೇ ಎನ್ನುವ ವಾದವನ್ನು ಆರಂಭಿಸಿದ್ದಾರೆ. ನಾನು ಸರ್ವಶಕ್ತ, ಸರ್ವವ್ಯಾಪಕ. ಹುಟ್ಟಿದ ಸ್ಥಳದಲ್ಲಿ ವಿಶೇಷವಾಗಿದ್ದು ಉಳಿದ ಕಡೆ...
ಮರೆತ ಹಾದಿ ನೆಲ ಮತ್ತು ಪಾದಗಳು ಒಂದನ್ನೊಂದು ಅರ್ಥೈಸಿಕೊಂಡಿದೆ ಅನ್ನಿಸುತ್ತದೆ. ಪಾದ ನೋಯಬಾರದೆಂದು ಹುಲ್ಲು ಬೆಳೆಯಲಿಲ್ಲವೂ, ಅಥವಾ ಹುಲ್ಲನ್ನು ತುಳಿದೆ ಪಾದ ನಡೆಯಿತೋ ಗೊತ್ತಿಲ್ಲ. ಒಟ್ಟಿನಲ್ಲಿ ದಾರಿಯಾಗಿತ್ತು .ದಿನವೂ ನಡೆದದ್ದರಿಂದ ಅದೊಂದು ಗುರಿಯ ಕಡೆಗೆ ಸಾಗಿತ್ತು....
ಆತನೊಬ್ಬ “ಉಮ್ಮಳಿಸಿ ಬರುತ್ತಿರುವ ದುಃಖವನ್ನು ತುಟಿ ಒತ್ತಿ ತಡೆಯಬಹುದು. ಆದರೆ ಮನಸ್ಸು ಆಗಾಗ ಎಚ್ಚರಿಸುವ ಭಯ, ಅಲ್ಲಲ್ಲಿ ಕಾಣುವ ದೃಶ್ಯಗಳು ಒಳಗೊಂದು ಕಂಪನವನ್ನು ಸೃಷ್ಟಿಸುತ್ತಿದೆ. ಇ ಸಾಮಾನ್ಯವೆಂದುಕೊಂಡಿದ್ದ ಕಾಯಿಲೆಯೊಂದು ಮಾರಣಾಂತಿಕವಾಗುತ್ತಿದೆ. ಕಣ್ಣೆದುರು ಉಸಿರು ನಿಲ್ಲಿಸುವ ಜೀವಗಳು,...