ಹೋಲಿಸುವುದೇತಕೆ ನನ್ನದು ನೇರ ಪ್ರಶ್ನೆ. ಸುತ್ತಿಬಳಸಿ ಮಾತನಾಡುವುದಿಲ್ಲ .ನೀವು ಒಂದು ವಾಕ್ಯ ಪ್ರಯೋಗಿಸುತ್ತಾ ಇರುತ್ತೀರಿ “ಹೂವಿನ ಜೊತೆಗೆ ನಾರು ಸ್ವರ್ಗ ಸೇರುತ್ತೆ” ಅಂತ. ನಾನೇ ಆ ನಾರು. ನನಗಿಲ್ಲಿ ಅರ್ಥವಾಗದ್ದು ನನ್ನನ್ನ ಯಾಕೆ ಹೋಲಿಸುತ್ತಾ ಇದ್ದೀರಿ....
ಕಾಡು ರಾತ್ರಿಯ ನಿದ್ರೆ ಮುಗಿಸಿ ಮಂಜಾನೆ ತಿರುಗಾಟಕ್ಕೆ ಹೊರಟಿದ್ದ ಮೋಡಗಳನ್ನ ಕರೆದು ಮಳೆರಾಯ, ನೀರು ತುಂಬಿಸಿ ಒಂದಷ್ಟು ಊರುಗಳ ಪಟ್ಟಿ ನೀಡಿ ಹಂಚಲು ತಿಳಿಸಿದ . ಗಾಳಿ ಅವರನ್ನು ಹೊತ್ತೊಯ್ಯಲು ಸಿದ್ಧವಾಗಿತ್ತು .ಇಷ್ಟು ದಿನ ಕೆಲಸವನ್ನು...
ಕಡಲು ಅಲ್ಲಯ್ಯ ಪರಿಧಿ ಕಾಣದೆ ಅನಂತತೆಯಲ್ಲಿ ಮುಳುಗಿರುವ ಕಡಲೆ, ನಿನ್ನಲ್ಲಿ ಏಕೆ ಅಷ್ಟೊಂದು ನೀರು. ಅಲ್ಲ ನಿನಗೆ ನೀರಿಲ್ಲದ ಊರಿನ ಜನರ ಬಿಕ್ಕಳಿಕೆ ಕೇಳುವುದಿಲ್ಲವಾ? ನಿನ್ನ ಆರ್ಭಟವೇನು?, ಅಟ್ಟಹಾಸವೇನು?. ಎಲ್ಲಾ ಸಣ್ಣಪುಟ್ಟ ನದಿ ತೊರೆಗಳನ್ನು ಕೈಬೀಸಿ...
ಕಾಯುತ್ತಿದ್ದಾನೆ “ನನ್ನಲ್ಲಿ ಜಾಗವಿದೆ ಆದರೆ ಮಾರಾಟಕ್ಕೆ ಇಟ್ಟಿಲ್ಲ. ನನ್ನೆದೆಯ ಪುಟ್ಟ ಗೂಡಿನಲ್ಲಿ ನನ್ನವಳಿಗೆ ಒಂದು ಸ್ಥಳಾವಕಾಶವಿದೆ .ಇಷ್ಟ ಬಂದವರು ಕೊಳ್ಳಲಾಗುವುದಿಲ್ಲ. ಯಾಕೆಂದರೆ ಮೊದಲ ಸಲ ಜಾಗವನ್ನು ಖರೀದಿಸಿಕೊಂಡವರು ಅಥವಾ ಆವರಿಸಿದವರು ಕಾರಣ ನೀಡದೇ ತೊರೆದಿದ್ದಾರೆ. ಅದಕ್ಕೆ...
ಯಾಕೆ ಹೀಗಾಗಿದ್ದೀಯಾ ನಾನು ಸಣ್ಣಗೆ ಮಳೆ ಹನಿಯುತ್ತಿರುವಾಗ ಒಂದು ಗ್ಲಾಸ್ ಟೀ ಹಿಡಿದು ಅದನ್ನು ಆಸ್ವಾದಿಸುತ್ತಿದ್ದವಳು. ಈಗ ಆ ಟೀ ರುಚಿಸುತ್ತಿಲ್ಲ. ಅದರೊಳಗೆ ಬೆರೆತ ಸಕ್ಕರೆ ಕರಗಿಲ್ಲವೆಂದಲ್ಲ. ನನ್ನೊಂದಿಗೆ ಸಪ್ತಪದಿ ತುಳಿದು ,ಮೂರು ಗಂಟು ಹಾಕಿದ...
ಮಳೆರಾಯ ಆಗಸದ ಮೇಲಿನ ಶಿವನ ಮನೆಯ ಅಂಗಳದಲ್ಲಿ ಕಂಪನ ಉಂಟಾಯಿತು. ಅಲ್ಲಿ ನೆಲದ ಮೇಲಿನ ಸಣ್ಣ ಬಿರುಕುಗಳಿಂದ ಬೆಳಕಿನ ರೇಖೆಗಳು ಮೂಡಿದಂತೆ ಕೆಳಗೆ ನಿಂತವರಿಗೆ ಕಂಡಿತು. ಅದು ಮಳೆಗೆ ದಾರಿತೋರಿಸುವ ಬೆಳಕಾಗಿತ್ತು. ಅದೇ ಬೆಳಕನ್ನು ಹಾದಿಯನ್ನಾಗಿಸಿಕೊಂಡು...
ಕನ್ನಡಿಯೊಳಗೆ ಒಣಗಿದ ಗೋಡೆ ಮಳೆ ಬಿದ್ದ ಕಾರಣ ಹಸಿಯಾಗಿದೆ. ಗೋಡೆಗಳಿಗೆ ಒಂದಷ್ಟು ಮೊಳೆಗಳನ್ನು ಜಡಿದು ಕನ್ನಡಿಗಳನ್ನು ನೇತುಹಾಕಿದ್ದಾರೆ. ಇಲ್ಲೊಂದು ವಿಶೇಷವಿದೆ. ಕನ್ನಡಿ ತನ್ನ ಎದುರು ನಿಂತವರ ಬಿಂಬವನ್ನು ಕಾಣಿಸಬೇಕು. ಆದರೆ ಇಲ್ಲಿ ಪ್ರತಿಬಿಂಬ ಕಾಣದೆ ಕನ್ನಡಿಯೊಳಗಿನ...