Connect with us

LATEST NEWS

ಮಾತ್ರೆ ಕವರ್ ಮಾದರಿಯಲ್ಲಿ ಮದುವೆ ಆಮಂತ್ರಣ….!!

ಚೆನ್ನೈ ಅಗಸ್ಟ್ 21: ಮದುವೆ ಆಮಂತ್ರಣ ಪತ್ರಿಕೆಗಳನ್ನು ವಿಭಿನ್ನವಾಗಿ ಪ್ರಿಂಟ್ ಹಾಕಿಸುವುದು ಈಗ ಮಾಮೂಲಿಯಾಗಿದೆ. ಈಗಾಗಲೇ ಕ್ರೆಡಿಟ್ ಕಾರ್ಡ್, ಪತ್ರಿಕೆ ಜಾಹಿರಾತು ಸೇರಿದಂತೆ ವಿವಿಧ ರೀತಿಯಲ್ಲಿ ಆಮಂತ್ರ ಪತ್ರಿಕೆ ಪ್ರಿಂಟ್ ಆಗಿದೆ. ಇದೀಗ ತಮಿಳುನಾಡಿನ ಫಾರ್ಮಾಸಿಸ್ಟ್- ನರ್ಸ್​ ಜೋಡಿಯೊಂದು ಮಾತ್ರೆ ಕವರ್ ಮಾದರಿಯಲ್ಲಿ ಮದುವೆ ಆಮಂತ್ರಣ ಪತ್ರಿಕೆ ಮುದ್ರಿಸಿದ್ದು, ವೆಡ್ಡಿಂಗ್ ಕಾರ್ಡ್ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.


ಇಂತಹದ್ದೊಂದು ವಿಭಿನ್ನ ಆಮಂತ್ರಣ ಪತ್ರಿಕೆ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಮುದ್ರಣವಾಗಿದೆ. ವರ ಫಾರ್ಮಾಸಿಸ್ಟ್, ವಧು ನರ್ಸ್​ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಜೋಡಿ ಆಹ್ವಾನ ಪತ್ರಿಕೆಗೆ ಟ್ಯಾಬ್ಲೆಟ್ ಕಾರ್ಡ್ ಮಾದರಿ ಬಳಸಿದ್ದಾರೆ. ಆ ಮೂಲಕ ವೃತ್ತಿಪರತೆ ತೋರಿದ್ದಾರೆ.

ವರನ ಹೆಸರು ಎಳಿಲರಸನ್. ವಧುವಿನ ಹೆಸರು ವಸಂತಕುಮಾರಿ. ತಿರುವಣ್ಣಾಮಲೈ ಜಿಲ್ಲೆಯ ಎಳಿಲರಸನ್​ ಮತ್ತು ವಿಲ್ಲುಪುರಂ ಜಿಲ್ಲೆಯ ಗೆಂಜಿಯ ವಸಂತಕುಮಾರಿ ಅವರ ಮದುವೆ 2022ರ ಸೆಪ್ಟೆಂಬರ್ 5ರಂದು ನಡೆಯಲಿದೆ. ಎಲ್ಲ ಸ್ನೇಹಿತರು ಮತ್ತು ಬಂಧುಗಳು ತಪ್ಪದೇ ವಿವಾಹ ಸಮಾರಂಭಕ್ಕೆ ಆಗಮಿಸಬೇಕು ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲ, ನೀಲಿ ಬಣ್ಣದಲ್ಲಿ ಮದುವೆ ಮತ್ತು ಆರತಕ್ಷತೆ ನಡೆಯುವ ದಿನಾಂಕ ಮತ್ತು ಸಮಯ ತಿಳಿಸಲಾಗಿದೆ. ಮ್ಯಾನುಫ್ಯಾಕ್ಚರ್​​ ವಿಭಾಗದಲ್ಲಿ ವರನ ತಂದೆ-ತಾಯಿ, ವಧುವಿನ ತಂದೆ-ತಾಯಿ ಹೆಸರಿನೊಂದಿಗೆ ಅವರ ವಿಳಾಸ ಮುದ್ರಿಸಲಾಗಿದೆ. ಮದುವೆ ಕರೆಯೋಲೆ ಪತ್ರಿಕೆಯಲ್ಲಿ ವಧು-ವರನ ಹೆಸರು ದೊಡ್ಡ ಅಕ್ಷರದಲ್ಲಿದ್ದು, ಪಕ್ಕದಲ್ಲೇ ಇಬ್ಬರ ಶಿಕ್ಷಣದ ವಿವರವೂ ಇದೆ.

ಟ್ಯಾಬ್ಲೆಟ್ ಕಾರ್ಡ್‌​ಗಳಲ್ಲಿ ಸೂಚಿಸುವ ವಾರ್ನಿಂಗ್​ ಸ್ಥಳದಲ್ಲಿ ‘ಎಲ್ಲ ಸ್ನೇಹಿತರೇ, ಬಂಧುಗಳೇ ನಮ್ಮ ಮದುವೆಯ ಶುಭಕಾರ್ಯಕ್ರಮಕ್ಕೆ ಮಿಸ್​ ಮಾಡದೆ ಬನ್ನಿ’ ಎಂದು ಕೆಂಪು ಬಣ್ಣದಲ್ಲಿ ಮುದ್ರಿಸಲಾಗಿದೆ. ಇನ್ನು ತಮ್ಮ ಮದುವೆ ದಿನದ ವಿಶೇಷ ದಿನಗಳನ್ನೂ ಸ್ಮರಿಸಿದ್ದು, ಅಂದು ಶಿಕ್ಷಕರ ದಿನ ಮತ್ತು ಮದರ್​ ತೆರೇಸಾ ಸ್ಮರಣೆ ದಿನವಿದೆ. ಮಾತ್ರೆ ಶೀಟ್​ ಮಾದರಿಯ ಈ ಮದ್ವೆ ಕಾರ್ಡ್​ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ನೆಟ್ಟಿಗರು ಈ ಜೋಡಿಗೆ ಶುಭ ಕೋರುತ್ತಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *