Connect with us

    FILM

    ಲಕ್ಷ್ಮೀದೇವಿ ಇರುವ ನೆಕ್ಲೇಸ್ ತೊಟ್ಟು ಹಾಟ್ ಪೋಟೋ ಶೂಟ್…. ನಟಿ ಮೇಲೆ ಬಿತ್ತು ಕೇಸ್

    ಮುಂಬೈ ಮಾರ್ಚ್ 28: ಸದಾ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ನಟಿ ತಾಪ್ಸಿ ಪನ್ನು ಮೇಲೆ ಇದೀಗ ಬಿಜೆಪಿ ಶಾಸಕಿಯೊಬ್ಬರ ಮಗ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಂದೋರ್ ನಲ್ಲಿ ನಡೆದ ಫ್ಯಾಶನ್ ಶೋ ಒಂದರಲ್ಲಿ ತೆರೆದೆದೆಯಲ್ಲಿ ಹಿಂದೂ ದೇವತೆಯಾದ ಲಕ್ಷ್ಮಿ ಚಿತ್ರವಿರುವ ನೆಕ್ಲೆಸ್ ಆಭರಣ ಹಾಕಿಕೊಂಡು ಪ್ರದರ್ಶನ ಮಾಡಿದ್ದಕ್ಕೆ ನಟಿ ತಾಪ್ಸಿ ಪನ್ನು ಮೇಲೆ ದೂರು ದಾಖಲಾಗಿದೆ.


    ಮಧ್ಯಪ್ರದೇಶದ ಬಿಜೆಪಿ ಶಾಸಕಿ ಮಾಲಿನಿ ಗೌರ್ ಅವರ ಪುತ್ರ ಏಕಲವ್ಯ ಗೌರ್ ಅವರು ಛತ್ರಿಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ದಕ್ಕೆ ತಂದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತಾಪ್ಸಿ ಅವರಿಗೆ ನೋಟಿಸ್ ಕಳಿಸಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ತಿಳಿಸಿದೆ.


    ಏಕಲವ್ಯ ಗೌರ್ ಅವರು ‘ಹಿಂದ್ ರಕ್ಷಕ್ ಸಂಘಟನಾ’ದ ಸಂಚಾಲಕರಾಗಿಯೂ ಕೆಲಸ ಮಾಡುತ್ತಿದ್ದಾರೆ. ಮಾರ್ಚ್ 12 ರಂದು ಮುಂಬೈನಲ್ಲಿ ಆಯೋಜಿಸಿದ್ದ ಫ್ಯಾಶನ್ ಶೋ ಒಂದರಲ್ಲಿ ತಾಪ್ಸಿ, ಲಕ್ಷ್ಮಿದೇವಿಯ ದೊಡ್ಡ ಚಿತ್ರವಿರುವ ನೆಕ್‌ಲೆಸ್‌ ಅನ್ನು ತೆರೆದೆದೆಯಲ್ಲಿ ಪ್ರದರ್ಶನ ಮಾಡಿದ್ದರು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಪರ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗಿದ್ದವು.

    Share Information
    Advertisement
    Click to comment

    Leave a Reply

    Your email address will not be published. Required fields are marked *