LATEST NEWS
ಸ್ವಿಗ್ಗಿ ಬೆನ್ನಲ್ಲೇ ತನ್ನ ಸರ್ವಿಸ್ ಚಾರ್ಜ್ ಹೆಚ್ಚಿಸಿದ ಝೊಮ್ಯಾಟೊ
ನವದೆಹಲಿ ಜುಲೈ 15: ಆಹಾರ ಡೆಲಿವರಿ ಆ್ಯಪ್ ಗಳಾದ ಸ್ವಿಗ್ಗಿ ಮತ್ತು ಝೊಮ್ಯಾಟೋ ಇದೀಗ ತಮ್ಮ ಸರ್ವಿಸ್ ಚಾರ್ಚ್ ನ್ನು ಏರಿಕೆ ಮಾಡಿವೆ, ಸದ್ಯ ಮಾರುಕಟ್ಟೆಯಲ್ಲಿ ಪ್ರಮುಖ ಕಂಪೆನಿಗಳಾಗಿರುವ ತಮ್ಮ ಲಾಭಾಂಶ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಿವೆ. ಝೊಮ್ಯಾಟೊ ತನ್ನ ಸೇವಾ ಶುಲ್ಕವನ್ನು ಆಯ್ದ ನಗರಗಳಲ್ಲಿ ₹1ರಷ್ಟು ಹೆಚ್ಚಳ ಮಾಡಿದೆ.
ಝೊಮ್ಯಾಟೊ ಈ ಮೊದಲು ಪ್ರತಿ ಡೆಲಿವರಿಯ ಶುಲ್ಕ ₹5 ಇತ್ತು. ಅದನ್ನು ಈಗ ₹6ಕ್ಕೆ ಝೊಮಾಟೊ ಹೆಚ್ಚಿಸಿದೆ. ಈ ಶುಲ್ಕ ಹೆಚ್ಚಳ ಕ್ರಮ ಬೆಂಗಳೂರು, ಮುಂಬೈ ಹಾಗೂ ದೆಹಲಿಗೆ ಮಾತ್ರ ಅನ್ವಯ ಎಂದು ಕಂಪೆನಿ ಹೇಳಿದೆ. ಝೊಮ್ಯಾಟೊದ ಪ್ರತಿಸ್ಪರ್ಧಿ ಸ್ವಿಗ್ಗಿ ಕೂಡಾ ಕಳೆದ ಭಾನುವಾರ ಇದೇ ರೀತಿಯ ಕ್ರಮವನ್ನು ಆಯ್ದ ನರಗಳಲ್ಲಿ ತೆಗೆದುಕೊಂಡಿತ್ತು. ಆದರೆ ಬೆಂಗಳೂರು, ದೆಹಲಿ ಹಾಗೂ ಮುಂಬೈನಲ್ಲಿ ಸೋಮವಾರವೇ ಈ ಕ್ರಮದಿಂದ ಹಿಂದೆ ಸರಿದಿರುವುದು ಸ್ವಿಗ್ಗಿ ಆ್ಯಪ್‌ನಲ್ಲಿ ಸ್ಪಷ್ಟವಾಗಿದೆ.
ರೆಸ್ಟೋರೆಂಟ್ ಹಾಗೂ ಗ್ರಾಹಕರ ನಡುವಿನ ಸಂಪರ್ಕ ಸೇತುವಾಗಿರುವ ಈ ಕಂಪನಿಗಳು ತಮ್ಮ ಶುಲ್ಕವನ್ನು ಹೆಚ್ಚಿಸುವ ಮೂಲಕ ಲಾಭಾಂಶವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿವೆ. ಫುಡ್ ಡೆಲಿವರಿ ಝೊಮ್ಯಾಟೊ ಹಾಗೂ ಸ್ವಿಗ್ಗಿ ಪ್ರಮುಖ ಕಂಪನಿಗಳಾಗಿದ್ದು, ಮಾರುಕಟ್ಟೆಯಲ್ಲಿ ಹಿಡಿತ ಸಾಧಿಸಿವೆ.