LATEST NEWS
ಧಾರ್ಮಿಕ ದೃಷ್ಠಿಯಿಂದ 13ಕ್ಕೆ ಸನ್ಯಾಸ ಸ್ವೀಕಾರ ತಪ್ಪಲ್ಲ – ಪೇಜಾವರ ಶ್ರೀ

ಉಡುಪಿ: ಧಾರ್ಮಿಕ ದೃಷ್ಠಿಯಲ್ಲಿ 13 ವರ್ಷ ತುಂಬಿದ ಬಾಲಕನಿಗೆ ಧಾರ್ಮಿಕತೆಯ ನೆಲೆಯಲ್ಲಿ ಸನ್ಯಾಸ ಧೀಕ್ಷೆ ನೀಡುವುದು ತಪ್ಪಲ್ಲ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ರಾಜ್ಯ ಹೈಕೋರ್ಟ್ ಶಿರೂರು ಮಠ ಅಪ್ರಾಪ್ತ ಬಾಲಕ ಪೀಠಾಧಿಪತಿ ವಿವಾದಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿರುವ ಹಿನ್ನಲೆ ಈ ಕುರಿತಂತೆ ಪ್ರತಿಕ್ರಿಯಿಸಿದ ಅವರು ಧಾರ್ಮಿಕ ದೃಷ್ಟಿಯಿಂದ ಫ್ರೌಡಿಮೆ 8 ವರ್ಷಕ್ಕೆ ಅಂತ ಉಲ್ಲೇಖ ಇತ್ತು. ಆಣಿ ಮಾಂಡವ್ಯರು ಎನ್ನುವ ಋಷಿಗಳು ಅದನ್ನು 13 ವರ್ಷಕ್ಕೆ ವಿಸ್ತರಿಸಿದರು. ಮಹಾಭಾರತದಲ್ಲಿ ಇದರ ಉಲ್ಲೇಖ ಬರುತ್ತದೆ. ಒಬ್ಬ 13 ವರ್ಷದ ತನಕ ಅಪ್ರಾಪ್ತನಾಗಿರುತ್ತಾನೆ, ನಂತರ ಪ್ರೌಢ ಎಂದು ಪರಿಗಣಿಸಲ್ಪಡುತ್ತಾನೆ. ಹಾಗಾಗಿ ಶಿರೂರು ಮಠಕ್ಕೆ ನೇಮಕಗೊಂಡ ಪೀಠಾಧಿಪತಿಯನ್ನು ಧಾರ್ಮಿಕ ದೃಷ್ಟಿಯಿಂದ ಬಾಲಸನ್ಯಾಸ ಎಂದು ಪರಿಗಣನೆ ಆಗುವುದಿಲ್ಲ” ಎಂದು ಪೇಜಾವರ ಮಠದ ಸ್ವಾಮೀಜಿ ವಿಶ್ವ ಪ್ರಸನ್ನ ತೀರ್ಥ ಸ್ವಾಮಿಜಿ ಸ್ಪಷ್ಟಪಡಿಸಿದರು.
