LATEST NEWS
ಸುರತ್ಕಲ್ ಟೋಲ್ ಗೇಟ್ ಹಣ ಇದೀಗ ಹೆಜಮಾಡಿಯಲ್ಲಿ ವಸೂಲಿ….!!
ಮಂಗಳೂರು ನವೆಂಬರ್ 25: ಸುರತ್ಕಲ್ ಟೋಲ್ ಗೇಟ್ ಅನ್ನು ತೆರವುಗೊಳಿಸಿ ಹೆಜಮಾಡಿ ಟೋಲ್ ಗೇಟ್ ಜೊತೆಗೆ ಪೂರ್ತಿ ವಿಲೀನ ಮಾಡುವುದಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆದೇಶ ಮಾಡಿದೆ. ಜೊತೆಗೆ, ಸುರತ್ಕಲ್ ನಲ್ಲಿದ್ದ ಶುಲ್ಕದ ಹೊರೆ ಭಾರವನ್ನು ನೇರವಾಗಿ ಹೆಜಮಾಡಿಗೆ ಹೊರಿಸಲಾಗಿದೆ. ಆಮೂಲಕ ಸುರತ್ಕಲ್ ಟೋಲ್ ಗೇಟ್ ತೆರವಿನ ಬದಲು ಹೆಜಮಾಡಿಯಲ್ಲಿ ಟೋಲ್ ಗೇಟ್ ದಾಟುವ ಪ್ರಯಾಣಿಕರಿಗೆ ದುಪ್ಪಟ್ಟಿಗಿಂತಲೂ ಜಾಸ್ತಿ ಹೊರೆ ಹಾಕಲಾಗಿದೆ. ಹೀಗಾಗಿ ನಿರೀಕ್ಷೆಯಂತೆ ಹೆಜಮಾಡಿಯಲ್ಲಿ ಸುಂಕ ದುಬಾರಿಯಾಗಲಿದೆ.
ಹೆಜಮಾಡಿ ಟೋಲ್ ಗೇಟ್‌ನಲ್ಲಿ ಟೋಲ್ ಸಂಗ್ರಹಕ್ಕೆ ಯಾವುದೇ ಅಡ್ಡಿ ಅಥವಾ ತೊಂದರೆ ನೋಡಿಕೊಳ್ಳಬೇಕು ಮತ್ತು ಒಂದು ವೇಳೆ ಹೆಜಮಾಡಿಯಲ್ಲಿ ವಿಲೀನದ ಬಳಿಕ ಏರಿಕೆಯಾದ ಸುಂಕದ ಬಳಿಕ ಯಾವುದೇ ಸಮಸ್ಯೆಯಾಗಿ ಟೋಲ್ ಸಂಗ್ರಹದಲ್ಲಿ ವ್ಯತ್ಯಯ ಉಂಟಾದರೆ ಎನ್‌ಎಚ್‌ಎಐ ಜತೆಗಿನ ರಾಜ್ಯ ಸಹಕಾರ ಒಪ್ಪಂದದಂತೆ ನಷ್ಟವನ್ನು ರಾಜ್ಯವೇ ಭರಿಸಬೇಕುಎಂದು ಎನ್‌ಎಚ್‌ಎಐ ಆದೇಶದಲ್ಲಿ ಹೇಳಲಾಗಿದೆ. ಇದಲ್ಲದೆ ಇದುವರೆಗೆ ಸುರತ್ಕಲ್ ಟೋಲ್‌ಗೇಟ್‌ನಲ್ಲಿ ಕೆಎ 19 ನೋಂದಣಿಯ ಕಾರುಗಳಿಗೆ ಇದ್ದ ರಿಯಾಯಿತಿ ರದ್ದಾಗಲಿದೆ.
ಏಕಮುಖ ಸಂಚಾರ : ಜೀಪ್, ವ್ಯಾನ್ ಅಥವಾ ಲಘು ಮೋಟಾರು ವಾಹನ:ಸುರತ್ಕಲ್ ನಲ್ಲಿ 60 ರೂ., ಹೆಜಮಾಡಿಯಲ್ಲಿ 40 ರೂ., ಹೆಜಮಾಡಿಯಲ್ಲಿ ಪರಿಷ್ಕೃತ ಟೋಲ್ ಶುಲ್ಕ 100 ರೂ.
ಲಘು ವಾಣಿಜ್ಯ ವಾಹನ ,ಲಘು ಸರಕು ವಾಹನ ಅಥವಾ ಮಿನಿ ಬಸ್: ಸುರತ್ಕಲ್ ನಲ್ಲಿ ರೂ 100 ಮತ್ತು ಹೆಜಮಾಡಿಯಲ್ಲಿ ರೂ 70, ಹೆಜಮಾಡಿಯ ಪರಿಷ್ಕೃತ ಟೋಲ್ ಶುಲ್ಕ 170 ರೂ.
ಬಸ್ ಅಥವಾ ಟ್ರಕ್ (2 ಆಕ್ಸೆಲ್‌ಗಳು)ಸುರತ್ಕಲ್ ನಲ್ಲಿ ರೂ 210 ಮತ್ತು ಹೆಜಮಾಡಿಯಲ್ಲಿ ರೂ 145, ಹೆಜಮಾಡಿ ಪರಿಷ್ಕೃತ ಟೋಲ್ ಶುಲ್ಕ355ರೂ.
ಭಾರೀ ಕನ್ಸ್ಟ್ರಕನ್ ಮೆಶಿನರಿ ಅಥವಾ ಮಲ್ಟಿ ಆಕ್ಸಲ್ ವಾಹನ ಮೂರರಿಂದ ಆರು ಆಕ್ಸೆಲ್‌ಗಳುಸುರತ್ಕಲ್ ನಲ್ಲಿ 325 ರೂ., ಹೆಜಮಾಡಿಯಲ್ಲಿ 225 ರೂ., ಪರಿಷ್ಕೃತ ಶುಲ್ಕ 550 ರೂ.
ಏಳು ಅಥವಾ ಹೆಚ್ಚಿನ ಆಕ್ಸೆಲ್‌ಗಳ ಭಾರೀ ಗಾತ್ರದ ವಾಹನಸುರತ್ಕಲ್ ನಲ್ಲಿ 400 ರೂ., ಹೆಜಮಾಡಿಯಲ್ಲಿ 275 ರೂ., ಪರಿಷ್ಕೃತ ಶುಲ್ಕ 675 ರೂ.
ದ್ವಿಮುಖ ಸಂಚಾರ: ಜೀಪ್, ವ್ಯಾನ್ ಅಥವಾ ಲಘು ಮೋಟಾರು ವಾಹನಸುರತ್ಕಲ್ ನಲ್ಲಿ 90 ರೂ., ಹೆಜಮಾಡಿಯಲ್ಲಿ 65 ರೂ., ಹೆಜಮಾಡಿಯಲ್ಲಿ ಪರಿಷ್ಕೃತ ಟೋಲ್ ಶುಲ್ಕ 155 ರೂ.
ಲಘು ವಾಣಿಜ್ಯ ವಾಹನ ಲಘು ಸರಕು ವಾಹನ ಅಥವಾ ಮಿನಿ ಬಸ್ ಸುರತ್ಕಲ್ ನಲ್ಲಿ ರೂ 150 ಮತ್ತು ಹೆಜಮಾಡಿಯಲ್ಲಿ ರೂ 100, ಹೆಜಮಾಡಿ 250 ರಲ್ಲಿ ಪರಿಷ್ಕೃತ ಟೋಲ್ ಶುಲ್ಕ
ಬಸ್ ಅಥವಾ ಟ್ರಕ್ (2 ಆಕ್ಸೆಲ್‌ಗಳು)ಸುರತ್ಕಲ್ ನಲ್ಲಿ 310 ರೂ., ಹೆಜಮಾಡಿಯಲ್ಲಿ 215 ರೂ., ಹೆಜಮಾಡಿಯಲ್ಲಿ ಪರಿಷ್ಕೃತ ಟೋಲ್ ಶುಲ್ಕ 525 ರೂ.
ಭಾರೀ ನಿರ್ಮಾಣ ಯಂತ್ರಗಳು ಅಥವಾ ಭೂಮಿ ಚಲಿಸುವ ಉಪಕರಣಗಳು ಅಥವಾ ಮಲ್ಟಿ ಆಕ್ಸಲ್ ವಾಹನ ಮೂರರಿಂದ ಆರು ಆಕ್ಸೆಲ್‌ಗಳು ಸುರತ್ಕಲ್ ನಲ್ಲಿ 490 ರೂ., ಹೆಜಮಾಡಿಯಲ್ಲಿ 335 ರೂ., ಪರಿಷ್ಕೃತ ಶುಲ್ಕ 825 ರೂ.
ಭಾರೀ ಗಾತ್ರದ ವಾಹನ ಏಳು ಅಥವಾ ಹೆಚ್ಚಿನ ಆಕ್ಸೆಲ್‌ಗಳು ಸುರತ್ಕಲ್ ನಲ್ಲಿ 595 ರೂ., ಹೆಜಮಾಡಿಯಲ್ಲಿ 410 ರೂ., ಪರಿಷ್ಕೃತ ಶುಲ್ಕ 1,005 ರೂ.