LATEST NEWS
ಸುರತ್ಕಲ್ ಟೋಲ್ ಗೇಟ್ ಅವಶೇಷಗಳಿಗೆ ಲಾರಿ ಡಿಕ್ಕಿ – ಚಾಲಕನಿಗೆ ಗಾಯ

ಸುರತ್ಕಲ್ ಡಿಸೆಂಬರ್ 10 : ಸುರತ್ಕಲ್ ಟೋಲ್ ಗೇಟ್ ರದ್ದಾದ ಬಳಿಕವೂ ಅದರ ಅವಶೇಷಗಳನ್ನು ತೆರವುಗೊಳಿಸದ ಪರಿಣಾಮ ಅದೊಂದು ಇದೀಗ ಆಕ್ಸಿಡೆಂಟ್ ಸ್ಪಾಟ್ ಆಗಿದೆ. ಇದೀಗ ಎನ್ ಐಟಿಕೆ ಟೋಲ್ ಗೇಟ್ ನ ಅವಶೇಷಗಳಿಗೆ ಲಾರಿಯೊಂದು ಢಿಕ್ಕಿ ಹೊಡೆದ ಘಟನೆ ಶನಿವಾರ ಮಧ್ಯರಾತ್ರಿ 2.30ರ ಸುಮಾರಿಗೆ ನಡೆದಿದೆ.
ಮಂಗಳೂರು ಕಡೆಯಿಂದ ಉಡುಪಿಯತ್ತ ಸಂಚರಿಸುತ್ತಿದ್ದ ಲಾರಿ ಢಿಕ್ಕಿ ಹೊಡೆದ ಪರಿಣಾಮ ಟೋಲ್ ಗೇಟ್ ನ ಕಂಬವೊಂದು ಬುಡ ಸಮೇತ ಕಿತ್ತು ಬಂದಿದ್ದು, ಘಟನೆಯಿಂದ ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ.

ಟೋಲ್ ಗೇಟ್ ನ ಅವಶೇಷಗಳು ಇರುವಲ್ಲಿ ಯಾವುದೇ ಪ್ರತಿಪಲಕಗಳು ಇಲ್ಲದೆ. ರಾತ್ರಿ ವೇಳೆ ಕತ್ತಲಲ್ಲಿ ಸರಿಯಾಗ ಕಾಣದ ಹಿನ್ನಲೆ ಅಪಘಾತಗಳು ಸಂಭವಿಸುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.