LATEST NEWS
ಆನ್ಲೈನ್ ಸಾಲಗಾರರ ಕಾಟಕ್ಕೆ ಯುವಕ ನೇಣು ಬಿಗಿದು ಆತ್ಮಹತ್ಯೆ…!!

ಮಂಗಳೂರು ಜನವರಿ 10: ಸಾಲಗಾರರ ಕಾಟಕ್ಕೆ ಯುವಕನೊಬ್ಬ ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಸುರತ್ಕಲ್‌ನ ಕುಳಾಯಿಯಲ್ಲಿ ಇಂದು ನಡೆದಿದೆ.
ಮೃತ ಯುವಕನನ್ನು ಸುಶಾಂತ್(26) ಎಂದು ಗುರುತಿಸಲಾಗಿದೆ. ಕಿನ್ನಿಗೋಳಿ ನಿವಾಸಿಯಾಗಿರುವ ಸುಶಾಂತ್ ಆನ್ ಲೈನ್ ಮೂಲಕ ಸಾಲ ತೆಗೆದುಕೊಂಡಿದ್ದ ಎಂದು ಹೇಳಲಾಗಿದ್ದು, ಅವರ ಕಾಟ ತಾಳಲಾರದೆ ಡೆತ್ ನೋಟ್ ಬರೆದು ಆಫೀಸ್‌ನಲ್ಲಿ ಕುತ್ತಿಗೆಗೆ ಟವೆಲ್ ಬಿಗಿದು ಆತ್ಮಹತ್ಯೆಗೆ ಮಾಡಿಕೊಂಡಿದ್ದಾನೆ.

ಸ್ಥಳದಲ್ಲಿ ಆತ ತುಳು-ಕನ್ನಡ ಮಿಶ್ರಿತ ಡೆತ್ ನೋಟ್ ಬರೆದಿಟ್ಟಿದ್ದಾರೆ. ಸಾರಿ ಮಾತೆರೆಗ್ಲಾ, ಎಂಕ್ ಎರ್ನಲ ನಂಬಿಕೆ ಒರಿಪಾಯೆರೆ ಆಯಿಜಿ ಕಾಸ್‌ದ ವಿಷಯೊಡು ತೊಂದರೆ ಆಂಡ್ ಸಾರಿ ಆನ್‌ಲೈನ್‌ಡ್ ಲೋನ್ ದಕುಲು ಕಾಲ್ ಮಲ್ತೆರ್ಂಡ ಡೆತ್ ಆತೆ ಪನ್ಲೆ, ರಿಯಲಿ ಸಾರಿ ಫಾರ್ ಆಲ್ ಎಂದು ಡೆತ್ ನೋಟ್‌ನಲ್ಲಿ ಬರೆದಿಟ್ಟಿದೆ.