Connect with us

    LATEST NEWS

    ಸುರತ್ಕಲ್ – ನೇಣಿಗೆ ಶರಣಾದ ದಿವ್ಯಾ

    ಮಂಗಳೂರು ಜನವರಿ 23: ವಿವಾಹಿತ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಬಾಳ ಗ್ರಾಮದ ಒಟ್ಟೆಕಾಯರ್ ಮನೆ ಎಂಬಲ್ಲಿ ನಿನ್ನೆ ನಡೆದಿದೆ.ಉಳ್ಳಾಲ ಕೋಟೆಕಾರಿನ ಮಾಡೂರು ನಿವಾಸಿ ಚಂದ್ರಶೇಖರ್- ಗಿರಿಜಾ ದಂಪತಿಯ ಪುತ್ರಿ, ಒಟ್ಟೆಕಾಯರ್ ಮನೆ ನಿವಾಸಿ ಹರೀಶ್ ಎಂಬವರ ಪತ್ನಿ ದಿವ್ಯಾ(26) ಮೃತಪಟ್ಟವರು.


    ಜನವರಿ 21ರಂದು ದಿವ್ಯಾ ಪತಿ ಹರೀಶ್ ಜೊತೆ ನೆರೆಮನೆಯಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ತೆರಳಿದ್ದು, ಈ ವೇಳೆ ಪತಿ-ಪತ್ನಿ ನಡುವೆ ಮನಸ್ತಾಪ ಉಂಟಾಗಿತೆನ್ನಲಾಗಿದೆ. ಇದರಿಂದ ಬೇಸರಗೊಂಡ ದಿವ್ಯಾ ಒಬ್ಬರೇ ಮನೆಗೆ ಹಿಂದಿರುಗಿದ್ದರು. ಈ ವಿಚಾರವಾಗಿ ಅಸಮಾಧಾನಗೊಂಡಿದ್ದ ದಿವ್ಯಾ ಜೀವನದಲ್ಲಿ ಜಿಗುಪ್ಸೆಗೊಂಡು ಜ.22ರಂದು ಸಂಜೆ ಮನೆಯ ಬೆಡ್ ರೂಂನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ತಾಯಿ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ. ದಿವ್ಯಾ ಒಂದೂವರೆ ವರ್ಷದ ಹಿಂದೆ ಹರೀಶ್ ರನ್ನು ಪ್ರೀತಿಸಿ ವಿವಾಹವಾಗಿದ್ದರು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸುರತ್ಕಲ್ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

     

     

    Share Information
    Advertisement
    Click to comment

    Leave a Reply

    Your email address will not be published. Required fields are marked *