LATEST NEWS
ಸುರತ್ಕಲ್ – ಈಜಲು ತೆರಳಿ ಸಮುದ್ರ ಪಾಲಾದ ವಿಧ್ಯಾರ್ಥಿ

ಮಂಗಳೂರು ಜನವರಿ 1 : ಸುರತ್ಕಲ್ ಸಮೀಪದಲ್ಲಿ ಲೈಟ್ ಹೌಸ್ ಕಡಲ ಕಿನಾರೆಯ ಬಳಿ ಈಜಲು ಸಮುದ್ರಕ್ಕಿಳಿದ ಡಿಪ್ಲೋಮಾ ವಿಧ್ಯಾರ್ಥಿ ನೀರು ಪಾಲಾಗಿದ್ದಾರೆ.
ಸಮುದ್ರ ಪಾಲಾಗಿರುವ ವಿದ್ಯಾರ್ಥಿಯನ್ನು ಸತ್ಯಂ (18 ವರ್ಷ) ಎಂದು ಗುರುತಿಸಲಾಗಿದೆ. ಕಾನದ ಕರ್ನಾಟಕ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿ ಅವರು ಅಂತಿಮ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿದ್ದರು. ಮಧ್ಯಾಹ್ನ 3 15ರ ಸುಮಾರಿಗೆ ಗೆಳೆಯ ಪ್ರಭಾಕರನ್ ಜೊತೆ ಲೈಟ್ ಹೌಸ್ ಬಳಿ ಕಡಲ ಕಿನಾರೆಗೆ ತೆರಳಿದ್ದರು. ‘ಸತ್ಯಂ ಹಾಗೂ ಪ್ರಭಾಕರನ್ ಸಮುದ್ರಕ್ಕೆ ಇಳಿದಿದ್ದರು. ಸತ್ಯಂ ಸಮುದ್ರದ ಅಲೆಗಳ ಸೆಳೆತಕ್ಕೆ ಕಣ್ಮರೆಯಾಗಿದ್ದಾರೆ. ಅವರ ಜೊತೆ ನೀರಿಗೆ ಇಳಿದಿದ್ದ ಪ್ರಭಾಕರ್ ಈಜಿ ದಡ ಸೇರಿದ್ದಾರೆ. ಅವರ ಪತ್ತೆಗಾಗಿ ಸ್ಥಳೀಯ ಮೀನುಗಾರರು ಸಮುದ್ರದಲ್ಲಿ ಹುಡುಕಾಟ ಮುಂದುವರಿಸಿದ್ದಾರೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
