Connect with us

DAKSHINA KANNADA

ಸುರತ್ಕಲ್ ಟೋಲ್ ಗೇಟ್‌ಗೆ ಮುತ್ತಿಗೆ ಪ್ರಕರಣ: 101 ಮಂದಿ ಹೋರಾಟಗಾರರಿಗೆ ನ್ಯಾಯಾಲಯ ಸಮನ್ಸ್‌

ಮಂಗಳೂರು:‌ ಸುರತ್ಕಲ್ ನ ಎನ್‌ಐಟಿಕೆಯಲ್ಲಿ ಕಾರ್ಯಾಚರಿಸುತ್ತಿದ್ದ ಟೋಲ್ ಗೇಟ್‌ಗೆ ಮುತ್ತಿಗೆ ಹಾಕಿದ್ದ ಹೋರಾಟ ಸಮಿತಿಯ 101 ಮಂದಿಗೆ ಮಂಗಳೂರು ನ್ಯಾಯಾಲಯ ಸಮನ್ಸ್‌ ಜಾರಿಗೊಳಿಸಿದ್ದು, ಮೇ 4ರಂದು ನ್ಯಾಯಾಲಯಕ್ಕೆ ಹಾಜರಾಗಲು ಸೂಚನೆ ನೀಡಿದೆ.

2022ರ ನವೆಂಬರ್‌ನಲ್ಲಿ ಟೋಲ್‌ ಗೇಟ್‌ ತೆರವು ಹೋರಾಟ ಸಮಿತಿಯು ಟೋಲ್‌ ಗೇಟ್‌ ತೆರವಿಗಾಗಿ ನೇರ ಕಾರ್ಯಾ ಚಣೆಗೆ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಸಾವಿರಾರು ಹೋರಾಟಗಾರರು ಟೋಲ್‌ ಕೇಂದ್ರಕ್ಕೆ ಮುತ್ತಿಗೆ ಹಾಕಿದ್ದರು. ಈ ವೇಳೆ ಸುಮಾರು 250 ಕ್ಕೂ ಮಂದಿ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದರು.

ಘಟನೆಗೆ ಸಂಬಂಧಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್‌ ರೈ, ಹೋರಾಟ ಸಮಿತಿಯ ಸಂಚಾಲಕ ಮುನೀರ್‌ ಕಾಟಿಪಳ್ಳ ಸೇರಿ ಒಟ್ಟು 101 ಮಂದಿ ಹೋರಾಟಗಾರರ ವಿರುದ್ಧ ಭಾರತೀಯ ದಂಡ ಸಂಹಿತೆ 143, 147, 341, 283 ಆರ್‌ಡಬ್ಲ್ಯೂ ಹಾಗೂ 149 ಸೆಕ್ಷನ್‌ ಗಳಡಿ ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಸಂಬಂಧ 2023ರ ಅಕ್ಟೋಬರ್‌ನಲ್ಲಿ ಸುರತ್ಕಲ್‌ ಪೊಲೀಸರು ಮಂಗಳೂರು ಜೆಂಎಫ್‌ಸಿ ನ್ಯಾಯಾಲಯಕ್ಕೆ 101 ಮಂದಿ ಹೋರಾಟಗಾರರ ವಿರುದ್ಧ ಚಾರ್ಜ್‌ ಶೀಟ್‌ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು 101 ಮಂದಿ ಆರೋಪಿತ ಹೋರಾಟಗಾರರು ಮೇ 4ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್‌ ಜಾರಿಗೊಳಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *