Connect with us

    DAKSHINA KANNADA

    ಸುರತ್ಕಲ್ : ತುಳು ಬಾಷೆಯ ಓದು ಬರಹ ಕಲಿಕೆಗೆ ಶಾಸಕರ ಸಾಥ್, ಕಡ್ಡಿ, ಸ್ಲೇಟ್ ಹಿಡಿದ ಜನ ಅ.ಆ,ಇ,ಈ ಕಲಿತೇ ಬಿಟ್ಟರು..!!

    ಮಂಗಳೂರು :  ಪುಟ್ಟ ಒಂದು ಬೋರ್ಡ್ , ಕಲಿಯಲು ಕಡ್ಡಿ, ಸ್ಲೇಟ್  ನೂರಾರು ಮಂದಿ ಆಸಕ್ತರು ಮಕ್ಕಳಂತೆ ಬೆಂಚಿನಲ್ಲಿ ಕುಳಿತು ಸ್ಲೇಟ್ ,ಕಡ್ಡಿ ಯನ್ನು ಹಿಡಿದು ಅ.ಆ,ಇ,ಈ ಕಲಿತೇ ಬಿಟ್ಟರು.
    ಹೌದು, ಸುರತ್ಕಲ್‍ನಲ್ಲಿ ಶಾಸಕ ಡಾ. ಭರತ್ ಶೆಟ್ಟಿ ವೈ ಅವರ ಸಹಕಾರದಲ್ಲಿ ಭರತ್ ರಾಜ್ ಕೃಷ್ಣಾಪುರ ನೇತೃತ್ವದ ಸೇವಾ ಪ್ರತಿಷ್ಠಾನದ ವತಿಯಿಂದ ಇಂತಹುದೊಂದು ತುಳು ಪ್ರಚಾರ ಅಭಿಯಾನ ಎಲ್ಲರ ಗಮನ ಸೆಳೆಯಿತು.


    ದೀಪಾವಳಿ ಸಂಭ್ರಮ 2024ಕ್ಕೆ ಆಮಿಸಿದ ನೂರಾರು  ಜನ  ಬಿಡುವಿನ ಸಮಯದಲ್ಲಿ ತಮ್ಮ ತಮ್ಮ ಹೆಸರು, ಊರಿನ ಹೆಸರು ಬರೆಯಲು ಕಲಿತೇ ಬಿಟ್ಟರು. ತುಳುವಿನಲ್ಲಿ ವರ್ಣ ಮಾಲೆ ಕಲಿತರು.ನಾಲ್ಕು ಗೋಡೆಯ ಮಧ್ಯೆ ಇದ್ದ ತುಳು ಲಿಪಿ ಸುರತ್ಕಲ್‍ನಲ್ಲಿ ದೀಪಾವಳಿ ಸಂಭ್ರಮಕ್ಕೆ ತನ್ನ ಮೆರುಗು ನೀಡಿತು. ಶಾಸಕ ಡಾ. ಭರತ್ ಶೆಟ್ಟಿ ವೈ ಅವರೂ ತುಳುವಿನಲ್ಲಿ ಹೆಸರು ಬರೆಯಲು ಕಲಿತರು.

    ಕಲಿಸುವ ತುಳು ಲಿಪಿ ಗುರುಗಳು ಸಹನೆಯಿಂದ ಬಂದವರಿಗೆ ಲಿಪಿ ಕಲಿಸಿ ಶ್ರೇಷ್ಠತೆ ಮೆರೆದರು. ಮುಂದಿನ ಎರಡು ದಿನಗಳ ಕಾಲ ಇಲ್ಲಿನ ಟೆಂಟ್ ಶಾಲೆಯಲ್ಲಿ ಕಲಿಸಲಿದ್ದು ಆಸಕ್ತರು ಬಂದು ಹೆಮ್ಮೆಯ ತುಳು ಲಿಪಿ ಉಚಿತವಾಗಿ ಕಲಿಯಬಹುದು.ತುಳು ಭಾಷೆ ಎಲ್ಲರೂ ಕಲಿಯಬೇಕು. ಕನಿಷ್ಠ ಪಕ್ಷ ವರ್ಣಮಾಲೆ ಕಲಿತು ಆರಂಭಿಕ ಹಂತದಲ್ಲಿ ಹೆಸರು, ಊರ ಹೆಸರು ಬರೆಯಲು ಪ್ರತಿಯೊಬ್ಬರೂ ಕಲಿಯಬೇಕು ಎಂಬ ಅಪೇಕ್ಷೆಯಿಂದ ತುಳ ಲಿಪಿ ಕಲಿಕೆ ಇಟ್ಟಿದ್ದೇವೆ. ನೂರಾರು ಜನರು ಬರುತ್ತಿದ್ದಾರೆ. ಜನರ ಪ್ರೋತ್ಸಾಹ ನೋಡಿ ಸಂತೋಷವಾಗಿದೆ ಎನ್ನುತ್ತಾರೆ ಸೇವಾ ಪ್ರತಿಷ್ಟಾನದ ಅಧ್ಯಕ್ಷರಾದ ಭರತ್ ರಾಜ್ ಕೃಷ್ಣಪುರ.

    ಆಕರ್ಷಿಸಿದ ಪುರಾತನ ಪರಿಕರಗಳು:
    ವಸ್ತು ಪ್ರದರ್ಶನ ಕೂಡ ಆಯೋಜಿಸಲಾಗಿದ್ದು ಈ ಹಿಂದಿನ ಪಾತ್ರೆ, ಪೂಜಾ ಸಾಮಾಗ್ರಿಗಳು, ಆಟದ ಮರದ ಮಣೆಗಳು, ಚಿನ್ನ, ಒಡವೆ ಇಡುತ್ತಿದ್ದ ಮರದ ಭದ್ರತಾ ಪೆಟ್ಟಿಗೆ, ನೆಟ್ಟಿಯ ಸುಂದರ  ಬಳಕೆ ಮಾಡುವ ವಸ್ತುಗಳು ಇಲ್ಲಿದ್ದು ನೋಡುಗರ ಗಮನ ಸೆಳೆಯಿತು.
    ನ.2 ಮತ್ತು 3ರಂದು ಆಹಾರ ಮೇಳ ಸುರತ್ಕಲ್ ಜಂಕ್ಷನ್‍ನಲ್ಲಿ ನಡೆಯಲಿದ್ದು ,ಇದರೊಂದಿಗೆ ಗುರುಕಿರಣ್ ಅವರ ಸಂಗೀತೋತ್ಸವವು ದೀಪಾವಳಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿದೆ.

     

    Share Information
    Advertisement
    Click to comment

    Leave a Reply

    Your email address will not be published. Required fields are marked *