LATEST NEWS
ಅಪ್ರಾಪ್ತ ವಿಧ್ಯಾರ್ಥಿ ಜೊತೆ ಓಡಿ ಹೋದ ಟ್ಯೂಷನ್ ಟೀಚರ್ – ಅರೆಸ್ಟ್ ಆದಾಗ ನಾನು ಗರ್ಭಿಣಿ ಎಂದ ಟೀಚರ್

ಸೂರತ್ ಮೇ 03: 5 ತರಗತಿ ಓದುತ್ತಿರುವ ವಿಧ್ಯಾರ್ಥಿ ಜೊತೆ ಟ್ಯೂಷನ್ ಟೀಚರ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಲ್ಲದೆ ಇದೀಗ ವಿಧ್ಯಾರ್ಥಿಯಿಂದಾಗಿ 5 ತಿಂಗಳ ಗರ್ಭಣಿಯಾಗಿರುವ ಆಘಾತಕಾರಿ ಘಟನೆ ಸೂರತ್ ನಲ್ಲಿ ನಡೆದಿದೆ.
ಪೊಲೀಸ್ ಮಾಹಿತಿಗಳ ಪ್ರಕಾರ ಸೂರತ್ ನಲ್ಲಿ ಟ್ಯೂಷನ್ ಸೆಂಟರ್ ನಲ್ಲಿರುವ ಟೀಚರ್ 5 ನೇ ತರಗತಿಗೆ ಪಾಠ ಮಾಡುತ್ತಿದ್ದರು. ಕಾಲ ಕ್ರಮೇಣ ಟೀಚರ್ ಮತ್ತು ವಿಧ್ಯಾರ್ಥಿ ನಡುವೆ ಸ್ನಹೇ ಬೆಳೆದಿದೆ. ಕ್ರಮೇಣ, ಇಬ್ಬರ ನಡುವಿನ ಆತ್ಮೀಯತೆ ಬೆಳೆದು ಕೊನೆಗೆ ಅವರು ದೈಹಿಕ ಸಂಬಂಧವನ್ನು ಹೊಂದಿದ್ದರು. ಏಪ್ರಿಲ್ 24ರಂದು ಇಬ್ಬರೂ ಮನೆಯಿಂದ ಓಡಿಹೋಗಿದ್ದರು. ನಂತರ ಕುಟುಂಬವು ಪೊಲೀಸರಿಗೆ ದೂರು ನೀಡಿತು. ನಾಲ್ಕು ದಿನಗಳ ನಂತರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿತ್ತು.

ಪೊಲೀಸರ ವಿಚಾರಣೆ ವೇಳೆ, ಶಿಕ್ಷಕಿ ತಾನು ಐದು ತಿಂಗಳ ಗರ್ಭಿಣಿ ಎಂದು ಹೇಳಿದ್ದಾಳೆ. ತಾನು ಗರ್ಭ ಧರಿಸಲು 13 ವರ್ಷದ ವಿದ್ಯಾರ್ಥಿ ಕಾರಣನಾಗಿದ್ದಾನೆ. ಹೀಗಾಗಿ ಬಾಲಕನೊಂದಿಗೆ ಓಡಿಹೋಗಿ ಬೇರೆ ನಗರದಲ್ಲಿ ನೆಲೆಸಲು ಬಯಸುತ್ತಿರುವುದಾಗಿಯೂ ಹೇಳಿದ್ದಾಳೆ. ಏತನ್ಮಧ್ಯೆ, ವಿದ್ಯಾರ್ಥಿಯು ಶಿಕ್ಷಕಿಯೊಂದಿಗೆ ಹಲವಾರು ಬಾರಿ ದೈಹಿಕ ಸಂಬಂಧ ಹೊಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ವಿಷಯದ ಗಂಭೀರತೆಯನ್ನು ಪರಿಗಣಿಸಿ, ಪೊಲೀಸರು ವಿದ್ಯಾರ್ಥಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದರು. ಪರೀಕ್ಷೆಯಲ್ಲಿ ಬಾಲಕ ದೈಹಿಕವಾಗಿ ತಂದೆಯಾಗಲು ಸಮರ್ಥನಾಗಿದ್ದಾನೆ ಎಂದು ಬಹಿರಂಗವಾಗಿದೆ. ಆದಾಗ್ಯೂ, ಈಗ ದೃಢವಾದ ಪುರಾವೆಗಳಿಗಾಗಿ ಡಿಎನ್ಎ ಪರೀಕ್ಷೆಯನ್ನು ನಡೆಸಲು ಪೊಲೀಸರು ಮುಂದಾಗಿದ್ದಾರೆ. ಈ ಪ್ರಕರಣದಲ್ಲಿ, ಶಿಕ್ಷಕಿಯ ವಿರುದ್ಧ ಅಪ್ರಾಪ್ತ ವಯಸ್ಕನೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ, ಅಪಹರಣಕ್ಕಾಗಿ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅದೇ ಸಮಯದಲ್ಲಿ, ವಿದ್ಯಾರ್ಥಿಯ ಚಿಕ್ಕ ವಯಸ್ಸಿನ ಕಾರಣ, ಆತನನ್ನು ರಕ್ಷಣೆಯಲ್ಲಿ ಇರಿಸಲಾಗಿದೆ.