LATEST NEWS
ಕಾರ್ಯಕರ್ತರ ಕೋಪ ಸಹಜ – ಸಚಿವ ಸುನಿಲ್ ಕುಮಾರ್
ಉಡುಪಿ ಅಗಸ್ಟ್ 1: ಸರಕಾರ ಬೇಕೋ ಹಿಂದುತ್ವ ಬೇಕೋ ಕೇಳಿದಾಗ ನಾವು ಸರಕಾರವನ್ನು ಬದಿಗಿಟ್ಟು ಹಿಂದುತ್ವವನ್ನು ಆಯ್ಕೆ ಮಾಡುತ್ತೇವೆ. ನಾವು ಇವತ್ತು ಹಿಂದುತ್ವವನ್ನೇ ಆಧಾರವಾಗಿ ಇಟ್ಟುಕೊಂಡು ಅಧಿಕಾರ ನಡೆಸುತ್ತಿದ್ದೇವೆ ಎಂದು ಇಂಧನ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದ.ಕ. ಜಿಲ್ಲೆಯಲ್ಲಿ ಕೊಲೆಯಾದ ಮಸೂದ್ ಮತ್ತು ಫಾಝಿಲ್ ಎಂಬವರ ಮನೆಗಳಿಗೆ ಮುಖ್ಯಮಂತ್ರಿ ಭೇಟಿ ನೀಡದಿರುವ ಕುರಿತು ಎದ್ದಿರುವ ವ್ಯಾಪಕ ಆಕ್ರೋಶದ ಮಾಧ್ಯಮದವರು ಗಮನಸೆಳೆದಾಗ ಅವರು ಈ ರೀತಿ ಪ್ರತಿಕ್ರಿಯಿಸಿದರು. ಈ ಬಗ್ಗೆ ಮುಖ್ಯಮಂತ್ರಿ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ನಾನು ಸ್ಪಷ್ಟನೆ ಕೊಡಬೇಕಾದ ಅಗತ್ಯವಿಲ್ಲ ಎಂದರು.
ಇನ್ನು ಪ್ರವೀಣ್ ಹತ್ಯೆ ಬಳಿಕ ಬುಗಿಲೆದ್ದಿರುವ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಪ್ರತಿಕ್ರಿಯಿಸಿದ ಅವರು ಕಾರ್ಯಕರ್ತರ ಕೋಪ ಸಹಜವಾಗಿದೆ, ಕಾರ್ಯಕರ್ತರ ಕೋಪವನ್ನು ಯಾವತ್ತು ಸರಿಯಲ್ಲ ಎನ್ನುವುದಿಲ್ಲ, ಮನೆಯಲ್ಲಿ ಸಣ್ಣಪುಟ್ಟ ಅಪಸ್ವರ ಇರುತ್ತೆ, ತಂದೆ ಮಗನಿಗೆ ಮಗ ತಂದೆಗೆ ಬುದ್ಧಿ ಹೇಳಲೇಬೇಕು. ಅದನ್ನು ಭಿನ್ನಾಭಿಪ್ರಾಯ ಎನ್ನಲು ಸಾಧ್ಯವಿಲ್ಲ, ಕಾರ್ಯಕರ್ತರು ನಮ್ಮ ಭಾವನೆಗಳಿಗೆ ಬೆಲೆ ಕೊಡಿ ಅನ್ನೋದು ಸರಿಯಾಗಿದೆ. ಅವರ ಅಭಿಪ್ರಾಯವನ್ನು ನಾವು ಸ್ವೀಕರಿಸಿದ್ದೇವೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿರುವ ಅಭಿಪ್ರಾಯವನ್ನು ನಾನೊಬ್ಬ ಕಾರ್ಯಕರ್ತನಾಗಿ ಗೌರವಿಸುತ್ತೇನೆ ಮತ್ತು ಕಾರ್ಯಕರ್ತರಿಗೆ ಎಲ್ಲವನ್ನೂ ತಿಳಿ ಹೇಳುತ್ತೇವೆ ಎಂದರು.