Connect with us

LATEST NEWS

ಪರಶುರಾಮ ಥೀಂ ಪಾರ್ಕ್ ‌ನ‌ ಗುಣಮಟ್ಟ ವಿಚಾರದಲ್ಲಿ ಯಾವುದೇ ತನಿಖೆಗೆ ಸಿದ್ದ – ಸುನಿಲ್ ಕುಮಾರ್

ಕಾರ್ಕಳ ಸೆಪ್ಟೆಂಬರ್ 09: ಕಾರ್ಕಳದ ಬೈಲೂರು ಪರುಶುರಾಮ ಪ್ರತಿಮೆ ವಿಚಾರದಲ್ಲಿ ಎದ್ದಿರುವ ವಿವಾದಕ್ಕೆ ಮಾಜಿ ಸಚಿವ ಸ್ಥಳೀಯ ಶಾಸಕ ಸುನಿಲ್ ಕುಮಾರ್ ಪ್ರತಿಕ್ರಿಯೆ ನೀಡಿದ್ದು, ಯಾವುದೇ ರೀತಿಯ ತನಿಖೆಗೆ ಸಿದ್ದ ಎಂದಿದ್ದಾರೆ.

ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿದ ಅವರು ಪ್ರವಾಸೋದ್ಯಮವಾಗಿ ಕಾರ್ಕಳ ಗುರುತಿಸಲ್ಪಡಬೇಕು, ಉಡುಪಿ ಜಿಲ್ಲೆಗೆ ಬರುವ ಪ್ರವಾಸಿಗರು ಕಾರ್ಕಳದ ಪರಶುರಾಮ ಥೀಂ ಪಾರ್ಕ್ ಗೆ ಬರುವಂತಾಗಬೇಕು,ಕಾರ್ಕಳ ಪ್ರವಾಸೋದ್ಯಮವಾಗಿ ಬೆಳೆಯಬೇಕು ಎಂಬ ನಿಟ್ಟಿನಲ್ಲಿ‌ ಕೆಲಸಗಳನ್ನು ತಾನು ಸಚಿವನಾಗಿದ್ದ ವೇಳೆ ಮಾಡಿದ್ದೆ, ಆದರೆ ಕೆಲವು‌ ದಿನಗಳಿಂದ ಅಭಿವೃದ್ಧಿಯನ್ನು‌ ಅಪಹಾಸ್ಯ ‌ಮಾಡುವ ಕೆಲಸ ಕೆಲವರಿಂದ ನಡೆಯುತ್ತಿದ್ದು,ಇದರ ನೇತೃತ್ವವನ್ನು ಪ್ರತ್ಯಕ್ಷ ಹಾಗೂ ಪರೋಕ್ಷ ರೀತಿಯಲ್ಲಿ ಉದಯ ಶೆಟ್ಟಿ ಮುನಿಯಾಲು ವಹಿಸಿಕೊಂಡಿದ್ದು ಪರಶುರಾಮ ಥೀಂ ಪಾರ್ಕ್ ‌ನ‌ ಗುಣಮಟ್ಟ ವಿಚಾರವಾಗಿ ಆರೋಪಗಳು‌ ನಡೆಯುತ್ತಿದ್ದು ಈ ನಿಟ್ಟಿನ ಯಾವುದೇ ತನಿಖೆಗೆ ನನ್ನ ಸಂಪೂರ್ಣ ಬೆಂಬಲ‌ವಿದೆ ಎಂದರು.


ನಮ್ಮ ಸರಕಾರದ ಸಮಯದಲ್ಲಿ ಪ್ರವಾಸೋದ್ಯಮ ಮತ್ತು ಮಲೆನಾಡು ಅಭಿವೃದ್ಧಿ ಯೋಜನೆಯಡಿಯಲ್ಲಿ ಬಿಡುಗಡೆಗೊಂಡಿದ್ದ ಅನುದಾನಕ್ಕೆ ಒತ್ತಡ ಹಾಕಿ ತಡೆಯೊಡ್ಡಲಾಗಿದೆ ಇಂದಿರಾಗಾಂಧಿ ಮತ್ತು ಕುಟುಂಬದವರ ವಿಗ್ರಹ ಸ್ಥಾಪನೆ ಮಾಡಿದ್ದರೆ ಇವರು ಒಪ್ಪಿಕೊಳ್ಳುತ್ತಿದ್ದಾರೇನೊ ಎಂದು ಪ್ರಶ್ನಿಸಿದರು.

ಪರಶುರಾಮನ ವಿಗ್ರಹವಾದ ಕಾರಣ ಅಭಿವೃದ್ಧಿಯನ್ನು ವಿರೋಧಿಸುವ ಮನಸ್ಥಿತಿಗೆ ಇವರುಗಳು ಬಂದಿದ್ದಾರೆ.ಅನುದಾನ ಬಂದ ನಂತರ ಗುಣಮಟ್ಟವನ್ನು ಕಾಯ್ದುಕೊಳ್ಳುವುದು ಇಲಾಖೆಯ ಜವಾಬ್ದಾರಿ. ಈ ವಿಚಾರದಲ್ಲಿ ಆರೋಪಗಳು ಕೇಳಿ ಬರುತ್ತಿದ್ದು ಇದರ ಎಲ್ಲಾ ರೀತಿಯ ತನಿಖೆ ನನ್ನ ಸಂಪೂರ್ಣ ಬೆಂಬಲವಿದೆ ಆದರೆ ಅಭಿವೃದ್ಧಿಯನ್ನು ಅವಹೇಳನ ಮಾಡಿದರೆ ಕಾರ್ಕಳದ ಜನ ಒಪ್ಪಿಕೊಳ್ಳುವುದಿಲ್ಲ.

ಯೋಜನೆಯನ್ನು ಮುಂದುವರಿಸಲು ಸಾರ್ವಜನಿಕರು ಸಹಕಾರ ನೀಡಬೇಕು ಅಭಿವೃದ್ಧಿಯನ್ನು ವಿರೋಧಿಸುವವರಿಗೆ ಬೆಂಬಲ ನೀಡಬಾರದು ಜಿಲ್ಲಾಡಳಿತ ಈ ಬಗ್ಗೆ ಕ್ರಮಗಳನ್ನು ಕೈಗೊಳ್ಳುತ್ತದೆ. ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕ ವೀಕ್ಷಣೆಗೆ ಶೀಘ್ರವೇ ಪರಶುರಾಮ ಥೀಂ ಪಾರ್ಕ್ ಅನ್ನು ತೆರವುಗೊಳಿಸಿ ಕೊಡಲಿದ್ದಾರೆ. ಕೆಲವೇ ಮಂದಿ ಕಾರ್ಕಳದ ಹೆಸರು ಮತ್ತು ಅಭಿವೃದ್ದಿ ಕುಲಗೆಡಿಸುವ ಈ ತಂಡದ ಕುರಿತು ಸಾರ್ವಜನಿಕ ಎಚ್ಚರ ವಹಿಸಿ ಸರಿಯಾದ ರೀತಿಯಲ್ಲಿ ಜನರೇ ಉತ್ತರ ನೀಡಬೇಕು ಎಂದರು.

Share Information
Continue Reading
Advertisement
Click to comment

Leave a Reply

Your email address will not be published. Required fields are marked *